ಸೋಮವಾರಪೇಟೆ, ಜ. ೨೫: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿಯಲ್ಲಿ ಚರಂಡಿ, ಮೋರಿ ದುರಸ್ತಿಗೆ ಕ್ರಮವಹಿಸಬೇಕೆಂದು ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಗ್ರಾ.ಪಂ.ಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಅಂಬೇಡ್ಕರ್ ಕಾಲೋನಿಯಲ್ಲಿ ಚರಂಡಿ ನಿರ್ವಹಣೆಯಿಲ್ಲದೇ ನೀರಿನ ಹರಿವಿಗೆ ಸಮಸ್ಯೆಯಾಗಿದೆ. ಕೊಳಚೆ ನೀರು ಸಂಗ್ರಹಗೊAಡು ರೋಗ ರುಜಿನ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆ ಕಾಲೋನಿಯ ಎಲ್ಲಾ ಚರಂಡಿಗಳನ್ನು ಗ್ರಾ.ಪಂ. ವತಿಯಿಂದ ದುರಸ್ತಿಗೊಳಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಇದರೊಂದಿಗೆ ಕಾಲೋನಿಯಲ್ಲಿ ಮೋರಿ ನಿರ್ಮಾಣ ಮಾಡಿದ್ದು, ಇದಕ್ಕೆ ಸಿಮೆಂಟ್ ಚರಂಡಿ ನಿರ್ಮಿಸದೇ ಇರುವುದರಿಂದ ಸಮಸ್ಯೆಯಾಗಿದೆ. ಈ ಹಿನ್ನೆಲೆ ಕನಿಷ್ಟ ೧೦ ಮೀಟರ್‌ನಷ್ಟು ಚರಂಡಿ ನಿರ್ಮಿಸಬೇಕೆಂದು ಗಮನ ಸೆಳೆದರು. ಇದರೊಂದಿಗೆ ಕಾಲೋನಿಯ ರಸ್ತೆ ಅಭಿವೃದ್ಧಿಗೂ ಕ್ರಮವಹಿಸಬೇಕೆಂದರು. ಈ ಸಂಬAಧಿತ ಮನವಿಯನ್ನು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷ ಡಿ.ಜಿ. ರಂಜಿತ್, ಕಾರ್ಯದರ್ಶಿ ಅಶೋಕ್, ಗಿರೀಶ್, ಪ್ರೀತಂ, ಬೋಜ, ಭಗತ್, ಕುಟ್ಟಪ್ಪ ಸೇರಿದಂತೆ ಇತರರು ಇದ್ದರು.