ಮಡಿಕೇರಿ, ಜ. ೨೪ : ಉದ್ಯಾನದೊಳಗಡೆ ಕಾಲಿಡುತ್ತಿದ್ದಂತೆ ಒಮ್ಮೆಲೆ ಪುಣ್ಯಕ್ಷೇತ್ರ ಭಾಗಮಂಡಲಕ್ಕೆ ಬಂದೆವೇನೋ ಎಂಬ ಭಾವನೆ., ಇತ್ತ ತಿರುಗಿದರೆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಅನುಭವ., ಇನ್ನೊಂದು ಕಡೆಯಲ್ಲಿ ಬಣ್ಣ ಬಣ್ಣದ ಕನ್ನಡ ಅಕ್ಷರ ಮಾಲೆ., ಪಕ್ಕದಲ್ಲೇ ಮಕ್ಕಳ ಉದ್ಯಾನದಂತೆ ಮಕ್ಕಳ ಹೀರೋಗಳು.., ಬದಿಯಲ್ಲಿ ಸಂಗೀತ ಕಚೇರಿಯಲ್ಲಿರುವಂತೆ ಸಂಗೀತ ಪರಿಕರಗಳು., ಜೊತೆಯಲ್ಲೊಂದು ನವಿಲು., ಅದರ ಬಳಿಯಲ್ಲಿ ಜೋಡಿ ಹಕ್ಕಿಗಳಿಗಾಗಿ ‘ಹಾರ್ಟ್’ ಆಕಾರದ ಗುಲಾಬಿ ಹೂವಿನ ಸೆಲ್ಫಿ ಕಮಾನು., ಇನ್ನೊಂದು ಕಡೆಯಲ್ಲಿ ಬಾನಲ್ಲಿ ಹಾರುವ ಹಕ್ಕಿ., ಬಣ್ಣದ ಚಿಟ್ಟೆ., ಈಜಾಡುತ್ತಿರುವ ಮೀನುಗಳು.., ಮತ್ತೆ ಎಂದಿನAತೆ ತರಕಾರಿ, ಹಣ್ಣುಗಳಲ್ಲಿ ಮೂಡಿ ಬಂದ ದಾರ್ಶನಿಕರ ಚಿತ್ರಗಳು.., ಬಗೆ ಬಗೆಯ ಹೂಗಳ ರಾಶಿ..!

ಇದು ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್‌ನಲ್ಲಿ ಕಂಡು ಬರುತ್ತಿರುವ ಸುಂದರ ಚಿತ್ರಣ.., ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ಹೂಗಳಿಂದ ಸಿಂಗರಿಸಲಾಗಿರುವ ರಾಜಾಸೀಟ್ ನಳ ನಳಿಸುತ್ತಿದ್ದು, ಪುಷ್ಪ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.

ಭಗಂಡೇಶ್ವರ ದೇವಾಲಯ

ಈ ಬಾರಿಯ ವಿಶೇಷತೆಯೆಂದರೆ ಪವಿತ್ರ ಕ್ಷೇತ್ರ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯವನ್ನು ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ನಿರ್ಮಿಸಲಾಗಿದೆ. ಒಮ್ಮೆಲೆ ನೋಡುವಾಗ ದೇವಾಲಯವನ್ನೇ ನೋಡಿದಂತೆ ಭಾಸವಾಗುತ್ತದೆ. ದ್ವಾರದಲ್ಲೇ ಹೂಗಳಿಂದಲೇ ಶಿವಲಿಂಗವನ್ನು ನಿರ್ಮಿಸಲಾಗಿದೆ. ಒಳಗಡೆ ಗರ್ಭಗುಡಿಯೂ ಇದೆ. ಇದನ್ನು ವೀಕ್ಷಣೆ ಮಾಡಲು ಬಂದವರು ಭಕ್ತಿ ಭಾವದಿಂದ ಕೈ ಮುಗಿಯುತ್ತಿದ್ದುದು ಕಂಡು ಬಂದಿತು.

ಯುದ್ಧ ಸ್ಮಾರಕ

ಇತ್ತ ಇನ್ನೊಂದು ಬದಿಯಲ್ಲಿ ಯುದ್ಧ ಸ್ಮಾರಕವನ್ನು ಹೂಗಳಿಂದಲೇ ನಿರ್ಮಿಸಲಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಇದನ್ನು ನಿರ್ಮಿಸಲಾಗಿದ್ದು, ಅಮರ್ ಜವಾನ್ ಎಂದು ಬರೆಯಲಾಗಿದೆ.

ಅಕ್ಷರ ಮಾಲೆ

ಅಲ್ಲಿಯೇ ಸನಿಹದಲ್ಲಿ ಕನ್ನಡ ಅಕ್ಷರ ಮಾಲೆಯಿದೆ. ಹೂವುಗಳಿಂದಲೇ ಅ., ಆ., ಇ., ಈ.. ಬರೆಯಲಾಗಿದ್ದು, ನಡುವಲ್ಲಿ ಒಂದು ಪುಸ್ತಕವನ್ನಿರಿಸಲಾಗಿದೆ. ಇದು ನೋಡುಗರನ್ನು ಸೆಳೆಯುವಂತಿದೆ. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ)

ಮಕ್ಕಳ ಉದ್ಯಾನ

ಮತ್ತೊಂದು ಕಡೆಯಲ್ಲಿ ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್ ಹೀರೋಗಳನ್ನು ನಿಲ್ಲಿಸಲಾಗಿದೆ. ಸ್ಪೆöÊಡರ್ ಮ್ಯಾನ್, ಮಿಕ್ಕಿ ಮೌಸ್, ಡೋರೋಮ್ಯಾನ್ ಮುತಾದ ಕಲಾಕೃತಿಗಳಿದ್ದು ಮಕ್ಕಳ ಉದ್ಯಾನದಂತೆ ಗೋಚರಿಸುತ್ತಿದೆ. ಮಕ್ಕಳು ತಮ್ಮ ಇಷ್ಟದ ಹೀರೋಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತಿದ್ದುದು ಕಂಡು ಬಂದಿತು.

ಸಂಗೀತ ಕಚೇರಿ

ಅದರ ಪಕ್ಕದಲ್ಲೇ ದೊಡ್ಡ ದೊಡ್ಡ ತಬಲ, ಪಿಯಾನೋ, ಸಂಗೀತ ಪರಿಕರಗಳಿವೆ. ಸಂಗೀತಪ್ರಿಯರನ್ನು ಸೆಳೆಯುವ ಈ ಕಲಾ ಕೃತಿಗಳನ್ನು ಹೂವಿನಿಂದಲೇ ರಚಿಸಲಾಗಿದೆ. ಇದರ ಪಕ್ಕದಲ್ಲಿಯೇ ನವಿಲೊಂದು ನಲಿಯುತ್ತಿದೆ.

ಸೆಲ್ಫಿ ಪಾಯಿಂಟ್

ಇದರ ಜೊತೆಯಲ್ಲೇ ಗುಲಾಬಿ ಹೂವುಗಳಿಂದ ಅಲಂಕೃತವಾದ ಹೃದಯದ ಮಾದರಿಯ ಸೆಲ್ಫಿ ಪಾಯಿಂಟ್ ಇದೆ. ಬಂದವರೆಲ್ಲ ಇಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಜೋಡಿ ಹಕ್ಕಿಗಳಂತೂ ಮನಸೋ ಇಚ್ಛೆ ಫೋಟೋ ತೆಗೆಸಿಕೊಳ್ಳುತ್ತಿದ್ದುದು ಕಂಡುಬAದಿತು.

ಪಕ್ಷಿ-ಚಿಟ್ಟೆ-ಮೀನು

ಇನ್ನೂ ಉದ್ಯಾನದೊಳಗಡೆ ಒಂದು ಕಡೆಯಲ್ಲಿ ಬಾನಲ್ಲಿ ಹಾರಾಡುವ ಹಕ್ಕಿ., ಹಾರುವ ಬಣ್ಣದ ಚಿಟ್ಟೆ., ಈಜಾಡುವ ಮೀನುಗಳ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ.

ಇದರೊಂದಿಗೆ ತರಕಾರಿ ಹಾಗೂ ಹಣ್ಣುಗಳಲ್ಲಿ ಕೆತ್ತನೆ ಮಾಡಿದ ದಾರ್ಶನಿಕರ ಚಿತ್ರಗಳನ್ನು ನೋಡಿದಾಗ ಅವರುಗಳ ಸಾಧನೆಗಳು ಕಣ್ಣ ಮುಂದೆ ಬರುತ್ತವೆ.

ಹೂಗಳ ರಾಶಿ

ಇದಲ್ಲದೆ ಉದ್ಯಾನದಲ್ಲಿ ಬಣ್ಣ ಬಣ್ಣದ ಹೂಗಳ ರಾಶಿ ಕಣ್ಮನ ಸೆಳೆಯುತ್ತವೆ. ಸುಮಾರು ೮ಸಾವಿರ ಹೂ ಕುಂಡಗಳಲ್ಲಿ ವಿವಿಧ ರೀತಿಯ ಹೂಗಳನ್ನು ಬೆಳೆದು ಅಂದವಾಗಿ ಜೋಡಿಸಲಾಗಿದೆ.

ಮಾರಾಟ ಮಳಿಗೆಗಳು

ಇತ್ತ ಗಾಂಧಿ ಮೈದಾನದಲ್ಲಿ ವಿವಿಧ ಬಗೆಯ ಗಿಡಗಳು, ಬೀಜಗಳು, ಕೃಷಿ ಪರಿಕರಗಳು, ವಸ್ತçಗಳು, ವಿವಿಧ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳನ್ನು ಹಾಕಲಾಗಿದೆ.

ಈ ಸಂದರ್ಭ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರ ಸಭಾ ಅಧ್ಯಕ್ಷೆ ಪಿ.ಕಲಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್, ಸದಸ್ಯರುಗಳಾದ ಚಂದ್ರಶೇಖರ್, ಸದಾ ಮುದ್ದಪ್ಪ, ಮುದ್ದುರಾಜ್, ಜುಲೇಕಾಬಿ, ಜಗದೀಶ್, ಕಾಂಗ್ರೆಸ್ ವಕ್ತಾರ ತೆನ್ನೀರ ಮೈನ, ನಗರ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರುಗಳಾದ ಅಂಬೆಕಲ್ ಕುಶಾಲಪ್ಪ, ನವೀನ್ ಕುಶಾಲಪ್ಪ, ಕವನ್ ಕೊತ್ತೋಳಿ, ಮೋಹನ್ ಮೌರ್ಯ, ಲೀಲಾ ಶೇಷಮ್ಮ, ಫ್ಯಾನ್ಸಿ ಬೆಳ್ಯಪ್ಪ, ಜಾಯ್ಸ್ ಮೆನೆಜಸ್, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಡಿವೈಎಸ್‌ಪಿ ಸೂರಜ್, ನಗರ ಠಾಣಾಧಿಕಾರಿ ಅನ್ನಪೂರ್ಣ, ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಶಶಿಧರ್, ಸಹಾಯಕ ನಿರ್ದೇಶಕ ಮಿಲನ್ ಮುತ್ತಣ್ಣ ಇತರರು ಇದ್ದರು. ಬಳಿಕ ಶಾಸಕರು ಪ್ರದರ್ಶನವನ್ನು ವೀಕ್ಷಣೆ ಮಾಡಿದರು.