ನಾಲ್ವರ ಬಂಧನ
ಮಡಿಕೇರಿ, ಜ. ೨೪: ತಡರಾತ್ರಿ ರೆಸಾರ್ಟ್ವೊಂದಕ್ಕೆ ನುಗ್ಗಿ ಅದನ್ನು ನಡೆಸುತ್ತಿದ್ದವರ ಮೇಲೆ ಹಾಗೂ ಅಲ್ಲಿನ ಕೆಲಸದವರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಘಟನೆಗೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಾಲಾಕ್ಷ, ಅಶ್ವಿತ್, ಮಿಥುನ್ ರೈ, ನಯನ್ ರೈ ಬಂಧಿತ ಆರೋಪಿಗಳಾಗಿದ್ದು, ಇವರುಗಳು ಕಾಟಕೇರಿಯಲ್ಲಿರುವ ಕೂರ್ಗ್ ಹೆರಿಟೇಜ್ ಹಿಲ್ಸ್ ವ್ಯೂ ರೆಸಾರ್ಟ್ಗೆ ತಾ. ೨೪ರ ರಾತ್ರಿ ೧ ಗಂಟೆ ಸುಮಾರಿಗೆ ತೆರಳಿ ಅಲ್ಲಿನ ಅಂಗಡಿಯಲ್ಲಿ ಜ್ಯೂಸ್ ಹಾಗೂ ಸಿಗರೇಟ್ ಕೇಳಿದ್ದು, ಈ ಸಂದರ್ಭ ಅಂಗಡಿಯನ್ನು ಮುಚ್ಚಿರುವುದಾಗಿ ಅಲ್ಲಿನ ಕೆಲಸಗಾರ ರಾಹುಲ್ ಹೇಳಿದ್ದಾರೆ.
ಈ ವೇಳೆ ಆತನೊಂದಿಗೆ ಇವರುಗಳು ಜಗಳವಾಡಿದ್ದಾರೆ. ಈ ಸಂದರ್ಭ ರಾತ್ರಿ ೧೧ ರ ಬಳಿಕ ಅಂಗಡಿ ತೆರೆಯುವಂತಿಲ್ಲ ಎಂದು ರೆಸಾರ್ಟ್ ನಡೆಸುತ್ತಿರುವ ಗೀತಾ ಅವರು ಹೇಳಿದರೂ ಸುಮ್ಮನಾಗದ ಆರೋಪಿಗಳು ಬಾಗಿಲಿಗೆ ಒದ್ದು, ಕೊಠಡಿಯ ಗಾಜನ್ನು ಪುಡಿಮಾಡಿ ಗೀತಾ, ಸುಜಾತ, ರಾಹುಲ್ ಸೇರಿದಂತೆ ರೆಸಾರ್ಟ್ಗೆ ಸಂಬAಧಪಟ್ಟ ಹಲವರ ಮೇಲೆ ಹಲ್ಲೆ ಮಾಡಿದ್ದು, ಕೊಲೆ ಬೆದರಿಕೆಯೊಡ್ಡಿದ್ದಾರೆ.
ಈ ಬಗ್ಗೆ ಗೀತಾ ಅವರು ನೀಡಿದ ದೂರಿನನ್ವಯ ಪೊಲೀಸರು ಆರೋಪಿಗಳಾದ ಮಡಿಕೇರಿ ಮಂಗಳಾದೇವಿನಗರದ ಪಾಲಾಕ್ಷ, ತಾಳತ್ತಮನೆಯ ಅಶ್ವಿತ್, ಮಿಥುನ್ ರೈ, ನಯನ್ ರೈ ಎಂಬವರುಗಳನ್ನು ಬಂಧಿಸಿದ್ದಾರೆ.