ಮಡಿಕೇರಿ, ಜ. ೨೪: ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಯುವಕನೊಬ್ಬ ವಿವಿಧ ಹುಡುಗಿಯರೊಂದಿಗೆ ಅಶ್ಲೀಲ ವೀಡಿಯೋವನ್ನು ಚಿತ್ರೀಕರಿಸಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆಗೆ ಸಂಬAಧಿಸಿದAತೆ ಕೊಡಗು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಸನ್ನ ಭಟ್ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಿ ಆ ಯುವಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ತನಗೆ ನಾಪೋಕ್ಲು ನಿವಾಸಿ ಹ್ಯಾರೀಸ್ ಎಂಬುವರು ಅವರ ಮೊಬೈಲ್‌ನಿಂದ ವಾಟ್ಸಾö್ಯಪ್ ಮೂಲಕ ವೀಡಿಯೋ ತುಣುಕುಗಳನ್ನು ಕಳುಹಿಸಿದ್ದು, ಅದರಲ್ಲಿ ಒಬ್ಬ ವ್ಯಕ್ತಿಯು ಇಬ್ಬರು ಬೇರೆ ಬೇರೆ ಹುಡುಗಿಯರೊಂದಿಗೆ ಬೇರೆಬೇರೆ ಸಮಯದಲ್ಲಿ ಅಶ್ಲೀಲವಾಗಿ ವರ್ತಿಸುತ್ತಿದ್ದ ದೃಶ್ಯ ಕಂಡುಬAದಿದೆ. ಅಲ್ಲದೆ ಆ ವ್ಯಕ್ತಿ ಅಶ್ಲೀಲ ದೃಶ್ಯಗಳನ್ನು ಸ್ವತಃ ತಾನೆ ವೀಡಿಯೋ ಮತ್ತು ಫೋಟೋ ತೆಗೆಸಿಕೊಂಡು ಕಳುಹಿಸಿರುವಂತೆ ಆ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವಂತೆ ಕಂಡುಬAದಿದೆ. ಆತನ ವಿಳಾಸವನ್ನು ಹುಡುಕಿದಾಗ ಆತ ಮೊಹಮ್ಮದ್ ಸವಾದ್ ಎಂಬುದಾಗಿ ತಿಳಿದುಬಂದಿದ್ದು, ಮೊಹಮ್ಮದ್ ಸವಾದ್ ಮತ್ತು ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಸನ್ನ ಭಟ್ ದೂರಿನಲ್ಲಿ ಕೋರಿದ್ದಾರೆ.