ವೀರಾಜಪೇಟೆ, ಜ. ೨೫: ತಿತಿಮತಿ ಲ್ಯಾಂಪ್ಸ್ ಸಹಕಾರ ಸಂಘದ ಸದಸ್ಯರೊಂದಿಗೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಸಭೆ ನಡೆಯಿತು.

ಅರಣ್ಯ ಸಂಪನ್ಮೂಲಗಳ ಸಂಗ್ರಹಣ ಅಡಿಯಲ್ಲಿ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅನುಮತಿ ಕೋರಿ ಲ್ಯಾಂಪ್ ಸೊಸೈಟಿ ಸದಸ್ಯರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ತಿತಿಮತಿ ಗಿರಿಜನ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಮಣಿಕುಂಞ ಪಿ.ಕೆ., ಉಪಾಧ್ಯಕ್ಷೆ ಪುಷ್ಪಾ ಜೆ.ಆರ್., ನಿರ್ದೇಶಕರಾದ ಸಿದ್ದಪ್ಪ ಪಿ.ಕೆ. ಮತ್ತು ಸುಬ್ರು ಪಿ.ಯಂ, ಕಾರ್ಯದರ್ಶಿ ಕುಮಾರ್ ಎಸ್., ಭಾಗಮಂಡಲ ಗಿರಿಜನ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಮಿಟ್ಟು ರಂಜಿತ್, ನಿರ್ದೇಶಕ ಕೆ.ಕೆ. ಪೊನ್ನಪ್ಪ, ಕೆ.ಕೆ. ನಿನೋಜ್, ಕಾರ್ಯದರ್ಶಿ ಪೂರ್ಣಿಮ ಹಾಗೂ ಪ್ರಮುಖರು ಉಪಸ್ಥಿತರಿದ್ದರು.