ಸಮಾಜವಾದಿ ಸಮಾಜದಲ್ಲಿ ಸ್ವತಂತ್ರ ಎಂಬ ಪದ ಕೇವಲ ಘೋಷಣೆಯಾಗಿ ಉಳಿಯದೆ ವಾಸ್ತವಿಕ ಅರ್ಥ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಸ್ವಾತಂತ್ರವೆAದರೆ ಪೂರ್ಣ ಹಾಗೂ ಸಮೃದ್ಧ ಜೀವನ ಅವಕಾಶ. ಪ್ರತಿಯೊಬ್ಬರ ಸಾಂಸ್ಕೃತಿಕ ಬೌದ್ಧಿಕ ಹಾಗೂ ಭೌತಿಕ ಬೆಳವಣಿಗೆಯೇ ನಿಜವಾದ ಸ್ವಾತಂತ್ರ್ಯ ಎಂದೆನಿಸಿಕೊಳ್ಳುತ್ತದೆ. ನಮ್ಮ ಗಣರಾಜ್ಯವೆತ್ತ ಈ ಭಾರತದಲ್ಲಿ ನಮ್ಮ ಮುಂದಿರುವ ಸವಾಲುಗಳನ್ನು ಅವಲೋಕಿಸುತ್ತಿರುವಾಗ ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ದಮನ ಗಂಡಾAತರದಲ್ಲಿ ಇರುವ ಕಾನೂನು, ಪ್ರಜಾಪ್ರಭುತ್ವವಾದಿ ಸಂಸ್ಥೆಗಳ ಸ್ವಯತ್ತತೆಗೆ ಧಕ್ಕೆ, ಆಪತ್ತಿನಲ್ಲಿರುವ ಧರ್ಮ ನಿರಪೇಕ್ಷತೆಗೆ ಮತ್ತು ಜಾತ್ಯತೀತತೆ ಮರೆಯಾಗುತ್ತಿರುವ ಕಲ್ಯಾಣ ರಾಜ್ಯದ ಕಲ್ಪನೆ, ಪ್ರಸ್ತುತವಾಗುತ್ತಿರುವ ಸಾಮಾಜಿಕ ನ್ಯಾಯ ಹಾಗೂ ಹಕ್ಕುಗಳ ಧಮನ ನಮ್ಮ ಮುಂದಿರುವ ಸವಾಲುಗಳಾಗಿ ಮಾರ್ಪಾಟಾಗಿದೆ. ಈ ನಿಟ್ಟಿನಲ್ಲಿ ನಮ್ಮ ಭಾರತದ ಸಂವಿಧಾನ ರಚನೆಯಲ್ಲಿ ಅನೇಕ ಪ್ರೇರಕ ಅಂಶಗಳು ಒಳಗೊಂಡಿರುವುದು ಜನಸಾಮಾನ್ಯರು ಅರಿಯಬೇಕಾದ ಅವಶ್ಯಕತೆ ಇದೆ.
ಯಾವ ದೇಶವು ಸ್ವತಂತ್ರವಾಗಿದ್ದು ಲಿಖಿತ ಸಂವಿಧಾನವನ್ನು ಹೊಂದಿದ್ದು ಅದರಂತೆ ರಾಜ್ಯದ ಆಡಳಿತವನ್ನು ನಡೆಸುತ್ತದೆಯೋ ಅಂತಹ ದೇಶವನ್ನು ಗಣರಾಜ್ಯವೆಂದು ಕರೆಯಲಾಗುತ್ತದೆ ಎಂದು ಲಿಖಿತ ಚರಿತ್ರೆಯ ಮೂಲಕ ತಿಳಿದು ಬರುತ್ತದೆ.
ಪ್ರಜಾಪ್ರಭುತ್ವ ಮತ್ತು ಸಮಾಜವಾದ ಎಂಬ ರಾಜಕೀಯ ವ್ಯವಸ್ಥೆಗಳಲ್ಲಿ ಜನರ ನಡುವಿನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂಬAಧಗಳನ್ನು ನಿಯಂತ್ರಿಸುವ ಕೆಲಸವನ್ನು ದೇಶದ ಪ್ರಭುತ್ವ ನಿರ್ವಹಿಸುತ್ತದೆ. ಆ ಪ್ರಭುತ್ವಕ್ಕೆ ತನ್ನ ಅಧಿಕಾರ ಚಲಾಯಿಸಲು ಕೆಲವು ನಿಯಮಗಳ ಮತ್ತು ಕಾನೂನುಗಳ ಅಗತ್ಯವಿದೆ. ಇದನ್ನು ಒದಗಿಸುವಲ್ಲಿ ನಮ್ಮ ಸಂವಿಧಾನ ಯಾವುದೇ ಪ್ರಭುತ್ವ ನಿರಂಕುಶವಾಗಿ ಅಧಿಕಾರ ಚಲಾಯಿಸಿದಂತೆ ಕಾನೂನುಗಳ ಏರ್ಪಾಟು ಮಾಡಿದೆ. ಈ ಕಾನೂನುಗಳ ತಾಯಿಯೇ ನಮ್ಮ ಈ ಸಂವಿಧಾನ. ಯಾವ ದೇಶವು ಸ್ವತಂತ್ರವಾಗಿದ್ದು, ಲಿಖಿತ ಸಂವಿಧಾನವನ್ನು ಹೊಂದಿದ್ದು ಅದರಂತೆ ದೇಶದ ಆಡಳಿತವನ್ನು ನಡೆಸುತ್ತದೆಯೋ ಆ ದೇಶ ಗಣರಾಜ್ಯವೆಂದು ಕರೆಸಿಕೊಳ್ಳಲಾಗುತ್ತದೆ. ಇರುವ ಎಲ್ಲ ಸ್ವತಂತ್ರ ದೇಶಗಳು ಗಣರಾಜ್ಯಗಳೆಂದು ಕರೆಸಿಕೊಳ್ಳುವುದಿಲ್ಲ ಆದರೆ ಎಲ್ಲ ಗಣರಾಜ್ಯಗಳು ಸ್ವತಂತ್ರವಾದ ದೇಶಗಳಂತೂ ಖಂಡಿತವಾಗಿ ಆಗಿವೆ.
ನಮ್ಮ ಭಾರತದ ಸಂವಿಧಾನಕ್ಕೆ ಪ್ರೇರಣೆ ನೀಡಿರುವುದು ಬ್ರಿಟನ್ ಅಮೇರಿಕಾ, ಫ್ರಾನ್ಸ್ ಐರ್ಲೆಂಡ್, ಕೆನಡಾ, ಸೋವಿಯತ್ ಒಕ್ಕೂಟ ಹಾಗೂ ರಷ್ಯಾದ ಸಂವಿಧಾನಗಳಾಗಿವೆ. ನಮ್ಮ ಇರುವ ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಯನ್ನು ಸೋವಿಯತ್ ರಷ್ಯಾದ ಸಂವಿಧಾನದಿAದಲೂ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ಪರಿಕಲ್ಪನೆಯನ್ನು, ಐರ್ಲೆಂಡ್ ಸಂವಿಧಾನದಿAದಲೂ, ಬೀ,,,,ದಿ,, ಪೀಪಲ್ ಎಂಬ ನುಡಿಗಟ್ಟನ್ನು ಅಮೇರಿಕಾದ ಸಂವಿಧಾನದಿAದಲೂ, ಲಿಬರ್ಟಿ ಇಕ್ವಾಲಿಟಿ ಮತ್ತು ಫರ್ಟೆನಿಟಿ ಎಂಬ ಪರಿಕಲ್ಪನೆಯನ್ನು ಫ್ರಾನ್ಸ್ನ ಸಂವಿಧಾನದಿAದ ಪಡೆಯಲಾಗಿದೆ ಎಂದು ಇತಿಹಾಸದ ಮೂಲಕ ತಿಳಿದು ಬರುತ್ತದೆ. ಆಹಾರ ಆರೋಗ್ಯ ಶಿಕ್ಷಣ ವಸತಿ ಉದ್ಯೋಗ ಇತ್ಯಾದಿಗಳನ್ನು ಪೂರೈಸುವುದು ನಮ್ಮ ರಾಜ್ಯ ಸರ್ಕಾರದ ಕರ್ತವ್ಯ ಎಂದು ಈ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಂವಿಧಾನದಿAದಲೇ ಮೂಡಿಬಂದಿದೆ ಎಂದು ನಮ್ಮ ಯುವಜನತೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.
ಪರಿಪೂರ್ಣ ಪ್ರಜಾಪ್ರಭುತ್ವಕ್ಕೆ ರಾಜಕೀಯ ಹಕ್ಕುಗಳ ಜೊತೆಗೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ನೀಡಬೇಕೆಂದು, ಜೊತೆಗೆ ಭೂಮಿ, ನೀರು, ಖನಿಜ ಹಾಗೂ ಇತರ ನೈಸರ್ಗಿಕ ಸಂಪತ್ತು ಇಡೀ ಸಮುದಾಯಕ್ಕೆ ಸೇರಿದ್ದು ಪ್ರತಿಯೊಬ್ಬ ಪ್ರಜೆಗೂ ಇದರಲ್ಲಿ ಹಕ್ಕು ಇದೆ ಎಂದು ನಮ್ಮ ಸಂವಿಧಾನದಲ್ಲಿಯೇ ಘೋಷಿಸಲಾಗಿದೆ. ವರ್ಗ, ಭೇದ, ವರ್ಣಭೇದ ಮತ್ತು ಲಿಂಗಭೇದವನ್ನು ರದ್ದು ಮಾಡಿ ಸಮಾನತೆಯನ್ನು ನಮ್ಮ ಸಂವಿಧಾನದಲ್ಲಿಯೇ ಸಾರಲಾಗಿದೆ. ಧರ್ಮ ವ್ಯಕ್ತಿಯ ಖಾಸಗಿ ಹಕ್ಕು ಎಂದು ಘೋಷಿಸಿ ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸಲಾಗಿದೆ. ನಿಜವಾದ ಅರ್ಥದಲ್ಲಿ, ಧರ್ಮ ನಿರಪೇಕ್ಷತೆ ಜಾತ್ಯತೀತ ಜಾರಿಗೆ ಬಂದು ಆಹಾರ, ಬಟ್ಟೆ, ಶಿಕ್ಷಣ ಆರೋಗ್ಯ, ವಸತಿ, ಉದ್ಯೋಗ ಇತ್ಯಾದಿಗಳು ನಮ್ಮ ಮೂಲಭೂತ ಹಕ್ಕುಗಳಾಗಿ ಮಾರ್ಪಾಟು ಆಗುವಂತಾಗಿದ್ದು ಕೂಡ ನಮ್ಮ ಸಂವಿಧಾನದಿAದಲೇ. ದುಡಿದು ತಿನ್ನುವುದು ನಮ್ಮೆಲ್ಲರ ಕರ್ತವ್ಯ ಎಂದು ನಮ್ಮ ಸಂವಿಧಾನದಲ್ಲಿಯೇ ಘೋಷಿಸಲಾಗಿದೆ. ಇದರ ಬೆನ್ನಲ್ಲಿಯೇ ಸಂವಿಧಾನದ ಅಡಿಯಲ್ಲಿಯೇ ಜನಸಾಮಾನ್ಯರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜೊತೆಗೆ ಜಗತ್ತಿನ ಯಾವುದೇ ದೇಶದಲ್ಲಿ ನಡೆಯುವ ಸ್ವತಂತ್ರ ಹೋರಾಟಗಳಿಗೆ ಮತ್ತು ವಿಮೋಚನಾ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಲು ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಎಲ್ಲಾ ಮೇಲಿನ ಅಂಶಗಳಿAದಾಗಿ ಸಂವಿಧಾನ ಮಹತ್ವವನ್ನು ಪಡೆದುಕೊಂಡ ಕಾರಣದಿಂದಾಗಿ ವಿಶ್ವದ ಬಹುತೇಕ ರಾಷ್ಟçಗಳು ಸುಮಾರು ೧೭೬ ದೇಶಗಳು ತಮ್ಮದೇ ಆದ ಪ್ರತ್ಯೇಕ ಸಂವಿಧಾನವನ್ನು ರಚಿಸಿಕೊಂಡಿವೆ. ಆ ಮೂಲಕ ಸಂವಿಧಾನದ ಚೌಕಟ್ಟಿಗೆ ಒಳಪಟ್ಟು ಆಡಳಿತವನ್ನು ನಡೆಸುತ್ತಿವೆ
ಭಾರತದ ಸ್ವತಂತ್ರ ಹೋರಾಟ ಒಂದು ದೀರ್ಘಕಾಲದ ಹೋರಾಟ. ಇದು ಶತಮಾನಕ್ಕಿಂತಲೂ ಹೆಚ್ಚು ಕಾಲಾವಧಿಯ ಹೋರಾಟವಾಗಿದ್ದು ಸ್ವಾತಂತ್ರ್ಯಕ್ಕಾಗಿ ಒಬ್ಬ ವ್ಯಕ್ತಿಯಿಂದ ನಡೆದ ಅಥವಾ ಒಂದು ಸಮುದಾಯದ ಅಸ್ತಿತ್ವಕ್ಕಾಗಿ ನಡೆದ ಹೋರಾಟವಲ್ಲ. ಅಥವಾ ಇದು ಒಂದು ಸಮಸ್ಯೆಯಾಗಿ ಸಮಸ್ಯೆಗಾಗಿ ನಡೆದ ಹೋರಾಟವಲ್ಲ. ಮಾನವ ಹಕ್ಕುಗಳಿಗಾಗಿ ನಡೆದ ಹೋರಾಟ ಅವನ ಸ್ವಂತ ನೆಲದಲ್ಲಿ ಅವನ ಸ್ವಇಚ್ಛೆಯಿಂದ ಬದುಕಲು ನಡೆಸಿದ ಹೋರಾಟ.
ಅಂದಿನ ಸರ್ಕಾರವು ಸ್ವತಂತ್ರ ನಂತರದಲ್ಲಿ ದೇಶದ ಚುಕ್ಕಾಣಿಯನ್ನು ಹಿಡಿದು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಭಾರತವನ್ನು ವಿವಿಧ ದೇಶಗಳ ಮುನ್ನಡೆಗೆ ತರಲು ನಮ್ಮದೇ ಸಂವಿಧಾನ ರಚನೆಗೆ ಕೈಹಾಕಿ, ಮೊದಲ ಕರಡನ್ನು ೧೯೪೮ರ ಫೆಬ್ರವರಿ ೨೧ರಂದು ಭಾರತದ ಜನತೆಯ ಮುಂದಿಟ್ಟು ಚರ್ಚೆಗೆ ಅವಕಾಶವನ್ನು ಕಲ್ಪಿಸಿ ಕೊಡಲಾಗಿತ್ತು. ಆಗಿನ ಜನತೆ ಈ ಕರಡು ಸಂವಿಧಾನವನ್ನು ಚರ್ಚಿಸಿ ೭೬೩೫ ತಿದ್ದುಪಡಿಗಳನ್ನು ಸೂಚಿಸಿದರು ಎಂದು ಹೇಳಲಾಗಿದೆ.
ಸಂವಿಧಾನ ಎಷ್ಟೇ ಉತ್ತಮವಾಗಿರಲಿ ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದು ಕೆಟ್ಟದಾಗಿ ಬಿಡುವುದು ಖಂಡಿತ ಎಂಬ ಸತ್ಯವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳು ಇಂದು ಕೂಡ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ. ಎಲ್ಲಾ ಎಚ್ಚರಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ೭೦ ವರ್ಷಗಳಲ್ಲಿ ನಮ್ಮ ಸಂವಿಧಾನವನ್ನು ೧೦೩ ಬಾರಿ ತಿದ್ದುಪಡಿ ಮಾಡಲಾಗಿದೆ.
ನಾವು ಸುರಕ್ಷಿತವಾಗಿ ಬದುಕಲು ನಮಗೋಸ್ಕರ ನಮ್ಮ ಸಂವಿಧಾನವನ್ನು ನಮ್ಮ ಮುಂದಿನ ಪೀಳಿಗೆಗಾಗಿ ಅದರ ಆಶಯಗಳನ್ನು ರಕ್ಷಿಸಬೇಕು. ನಮ್ಮ ತಿಳುವಳಿಕೆಯ ತಿದ್ದುಪಡಿಗಾಗಿ ಅವಕಾಶ ಮಾಡಿಕೊಟ್ಟಂತಹ ಇಡೀ ಜಗತ್ತೇ ಒಪ್ಪಿಕೊಂಡAತಹ ನಮ್ಮ ಸಂವಿಧಾನವನ್ನು ನಾವೆಂದೂ ರಕ್ಷಣೆ ಮಾಡಬೇಕಾದ ಅವಶ್ಯಕತೆ ಕೂಡ ಇದೆ.
೧೯೫೦ ರ ಜನವರಿ ೨೬ ರಂದು ಭಾರತವು ತನ್ನದೇ ಆದ ಸಂವಿಧಾನದ ಮೂಲಕ ಗಣರಾಜ್ಯವಾಗಿ ರೂಪುಗೊಂಡ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಆ ನಿಟ್ಟಿನಲ್ಲಿ ಮೊಟ್ಟಮೊದಲಿಗೆ ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು. ಅರ್ಥೈಸಿಕೊಳ್ಳಬೇಕು ಹಾಗೆ ಅದರ ಮೂಲ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಅದರ ಜೊತೆಗೆ ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳಬೇಕು. ನಮ್ಮ ಕುಟುಂಬದ ಸದಸ್ಯರಿಗೆ ಸಂವಿಧಾನದ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ನಮ್ಮ ಸುತ್ತಮುತ್ತಲಿನ ಬಂಧುಬಳಗ, ಗೆಳೆಯರಲ್ಲಿ ಹಾಗೂ ವಿದ್ಯಾರ್ಥಿ ಯುವಜನರ ಮಧ್ಯೆ ನಮ್ಮ ಸಂವಿಧಾನದ ತಿಳುವಳಿಕೆಯನ್ನು ಹಂಚಿಕೊಳ್ಳಬೇಕು.
ಆ ಮೂಲಕ ಸಂವಿಧಾನದ ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು. ಹಾಗೆ ಪ್ರಸ್ತುತ ಯುಗದಲ್ಲಿ ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು. ನಮ್ಮ ಸಂವಿಧಾನದ ಉಳಿವಿಗಾಗಿ ದೇಶದ ಸಮಗ್ರತೆಗಾಗಿ ಮತ್ತು ಜನತೆಯ ಕಲ್ಯಾಣಕ್ಕಾಗಿ ನಾವು ಎಲ್ಲರೂ ಪೂರ್ವ ತಯಾರಿಯೊಂದಿಗೆ ಸಜ್ಜಾಗಬೇಕು.
- ರಾಣಿ ರವೀಂದ್ರ, ಸೋಮವಾರಪೇಟೆ.