ಪ್ರತಿಯೊಬ್ಬ ಹಿಂದೂ ಕೂಡ ಹಿಂದೂ ಸಮಾಜದ ವಾರಸುದಾರರಾಗಬೇಕು: ರವೀಂದ್ರ ಪುತ್ತೂರು

ಕುಶಾಲನಗರ, ಜ. ೨೫: ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿದ ಕ್ರಾಂತಿಕಾರಿಗಳ ಸ್ಮರಣೆ ಮಾಡುವ ಮೂಲಕ ಪ್ರತಿಯೊಬ್ಬ ಹಿಂದೂ ಕೂಡ ಹಿಂದೂ ಸಮಾಜದ ವಾರಸುದಾರರಾಗಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜು ಅಧ್ಯಕ್ಷರಾದ ರವೀಂದ್ರ ಪುತ್ತೂರು ಕರೆ ನೀಡಿದರು.

ಕುಶಾಲನಗರದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸಮಾಜದಲ್ಲಿ ಪಂಚ ಪರಿವರ್ತನೆಗಳ ಅಗತ್ಯತೆ ಇದ್ದು, ಸಾಮಾಜಿಕ ಮೌಲ್ಯಗಳ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಪರಿಸರದ ಸಂರಕ್ಷಣೆ ಸ್ವದೇಶಿ ಭಾವಗಳ ಜಾಗೃತಿ ಹಾಗೂ ನಾಗರಿಕ ಶಿಸ್ತನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ. ಹಿಂದೂ ಸಮಾಜದ ಕರ್ತವ್ಯ ನೆನಪಿಗಾಗಿ ಈ ಕಾರ್ಯಕ್ರಮ ಗ್ರಾಮ ಗ್ರಾಮಗಳಲ್ಲಿ ನಡೆಯುತ್ತಿವೆ.

ಭಾರತ ಈಗಾಗಲೇ ಸಾಮಾಜಿಕವಾಗಿ ಸಂಪನ್ನತೆ ಹೊಂದಿದ್ದು ಸಂರಕ್ಷಿತ ರಾಷ್ಟçವಾಗಿದೆ. ಜೊತೆಗೆ ಸಾಮರಸ್ಯದ ಭಾವ ಹೊಂದಿದೆ ಎಂದು ಹೇಳಿದ ರವೀಂದ್ರ ಪುತ್ತೂರು ದೇಶ ಈಗಾಗಲೇ ವಿಶ್ವಶಕ್ತಿಯಾಗಿ ವಿಶ್ವಗುರು ಆಗಿ ಹೊರಹೊಮ್ಮಿದೆ. ಹಿಂದುತ್ವದ ಧ್ವನಿ ದೇಶದ ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಇದು ಶತಮಾನ ಕಂಡ ಆರ್‌ಎಸ್‌ಎಸ್ ಸಂಸ್ಥೆಯ ಗುರಿಯೂ ಆಗಿತ್ತು ಎಂದರು. ಮಹಾಪುರಾಣಗಳ ಕೃತಿಗಳು ಜನರಲ್ಲಿ ಮೌಲ್ಯಗಳನ್ನು ಬೆಳೆಸಿದೆ ಎಂದರಲ್ಲದೆ, ಭಾರತ ದೇಶ ಇದೀಗ ಜಗತ್ತಿನಲ್ಲಿ ಪರಮ ವೈಭವ ಸ್ಥಿತಿಗೆ ತಲುಪಿದೆ ಎಂದು ಹೇಳಿದರು. ಕುಶಾಲನಗರದ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಕೃಷಿ ಪತ್ತಿನ ಮತ್ತು ಕೈಗಾರಿಕೋದ್ಯಮಗಳ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಮಾತನಾಡಿ ಧರ್ಮವನ್ನು ರಾಜಕಾರಣಕ್ಕೆ ಬಳಸಬಾರದು ಎಂದು ಕಿವಿಮಾತು ಹೇಳಿದರು. ಕುಶಾಲನಗರ ವಿಶ್ವ ಜ್ಞಾನಿ ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಕುಂಡಾರಿ, ಹಿಂದೂ ಸಂಗಮ ಕಾರ್ಯಕ್ರಮ ಸಂಯೋಜಕÀ ಜಿ.ಎಲ್. ನಾಗರಾಜ್, ಆಯೋಜನ ಸಮಿತಿ ಅಧ್ಯಕ್ಷರಾದ ದೇವಿ ಪ್ರಸಾದ್ ಇದ್ದರು.

ಕಾರ್ಯಕ್ರಮಕ್ಕೆ ಮುನ್ನ ಕುಶಾಲನಗರ ತಾವರೆಕೆರೆ ಬಳಿಯಿಂದ ಕುಶಾಲನಗರ ಖಾಸಗಿ ಬಸ್ ನಿಲ್ದಾಣವರೆಗೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಶೋಭಾ ಯಾತ್ರೆ ನಡೆಯಿತು. ಶೋಭಾಯಾತ್ರೆಗೆ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಶೋಭಾಯಾತ್ರೆಯಲ್ಲಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಶುಭ ಕೋರಿದರು. ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳಾ ಸದಸ್ಯರ ತಂಡದಿAದ ಕಿರು ನಾಟಕದ ಮೂಲಕ ದೇಶಭಕ್ತಿ ಸಂದೇಶ ನೀಡಲಾಯಿತು.

ಇದೇ ಸಂದರ್ಭ ಸಹಸ್ರ ಕಂಠದ ಮೂಲಕ ವಂದೇ ಮಾತರಂ ಗೀತೆ ಹಾಡಲಾಯಿತು. ಕುಶಾಲನಗರ ತಾಲೂಕು ಹಿಂದು ಸಂಗಮ ಆಯೋಜನ ಸಮಿತಿಯ ಸಂಯೋಜಕರಾದ ಜಿ.ಎಲ್. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿಯ ಎಂ.ಡಿ. ರಂಗಸ್ವಾಮಿ ಸ್ವಾಗತಿಸಿ, ಆಶಾ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ಆಸ್ತಿಯಾಗಬೇಕು : ಸುಬ್ರಾಯ ನಂದೋಡಿ

ಸಿದ್ದಾಪುರ, ಜ ೨೫: ಸಮಾಜದಲ್ಲಿ ತನ್ನ ಅವಶ್ಯಕತೆ, ಜವಾಬ್ದಾರಿ ಏನು ಎಂಬುದನ್ನು ನೆನಪಿಸಿಕೊಳ್ಳುವ ಸಲುವಾಗಿ ಹಿಂದೂ ಸಂಗಮ ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ಆಸ್ತಿಯಾಗಬೇಕೇ ಹೊರತು ಹೊರೆಯಾಗಬಾರದು ಎಂದು ಗೀತಜ್ಞಾನ ಯಜ್ಞ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ದಕ್ಷಿಣ ಪ್ರಾಂತ ಕುಟುಂಬ ಪ್ರಬೋಧನ್ ಸಹ ಸಂಯೋಜಕರಾದ ಸುಬ್ರಾಯ ನಂದೋಡಿ ಹೇಳಿದರು.

ಮಾಲ್ದಾರೆಯ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟಿçÃಯ ಸ್ವಯಂ ಸೇವಕ ಸಂಘವು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಹಿಂದೂ ಸಂಗಮವನ್ನು ಆಯೋಜಿಸಲಾಗಿದೆ.

ಸಂಸ್ಕಾರದ ಕೊರತೆಯ ಪರಿಣಾಮವಾಗಿಯೇ ಇಂದು ವಿದ್ಯಾವಂತರು ಸಮಾಜಘಾತುಕ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿ ಅವರು, ಸಂಸ್ಕಾರವು ಮನೆಯಿಂದ ಬರಬೇಕು ಸಂಸ್ಕಾರವನ್ನು ಪೋಷಕರು ತಮ್ಮ ಮಕ್ಕಳಿಗೆ ನೀಡುವ ಮೂಲಕ ಉತ್ತಮವ್ಯಕ್ತಿಯನ್ನಾಗಿ ರೂಪಿಸಬೇಕೆಂದರು.

ಭಾರತದ ಕುಟುಂಬ ವ್ಯವಸ್ಥೆ ಜಗತ್ತಿನಲ್ಲೇ ಶ್ರೇಷ್ಠವಾಗಿದೆ. ಆದರೆ ಇತ್ತೀಚೆಗೆ ವಿದೇಶಿ ವಿಚಾರಗಳಿಗೆ ಮಾರು ಹೋಗಿ ಕೌಟುಂಬಿಕ ವ್ಯವಸ್ಥೆ ಹದಗೆಡುತ್ತಿದೆ ಎಂದು ಅವರು ವಿಷಾದಿಸಿದರು. ಅಲ್ಲದೆ ಭಾವನಾತ್ಮಕ ವಿಚಾರಗಳಿಗಿಂತ ಹಣಕ್ಕೆ ಆದ್ಯತೆ ಕೊಡುತ್ತಿರುವುದು ಬಾಂಧವ್ಯಗಳು ಹದಗೆಡಲು ಕಾರಣವಾಗಿದೆ.ಪರಿಸರವನ್ನು ಶೋಷಣೆ ಮಾಡುವ ಬದಲು ಪೋಷಣೆ ಮಾಡಬೇಕು ಪರಿಸರವನ್ನು ಸಂರಕ್ಷಿಸಲು ಮುಂದಾಗುವುದು ಸಮಾಜದಲ್ಲಿ ವ್ಯಕ್ತಿಯ ಜವಾಬ್ದಾರಿಯಾಗಬೇಕೆಂದು ಕರೆ ನೀಡಿದರು.

ಗೀತ ಜ್ಞಾನ ಯಜ್ಞ ಟ್ರಸ್ಟ್ ಸದಸ್ಯೆ ಗಾಯತ್ರಿ ಮಾತನಾಡಿ ಪೈಪೋಟಿಯ ಜಗತ್ತಿನಲ್ಲಿ ಮಕ್ಕಳು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಇರುವುದು ಆತಂಕಕ್ಕೆ ಎಡೆಮಾಡಿದೆ. ಮಕ್ಕಳು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪೋಷಕರು ಪ್ರೇರಣೆ ನೀಡಬೇಕು ಎಂದರು.

ಮಾಲ್ದಾರೆಯ ಅಜ್ಜಿನಿಕಂಡ ವೀಣಾ ಮಾತನಾಡಿ ಹಣದ ಹಿಂದೆ ಸಾಗುವ ಈ ಯುಗದಲ್ಲಿ ಸಂಸ್ಕಾರಗಳು ಕಾಣೆಯಾಗುತ್ತಿವೆ. ಮನೆಯಲ್ಲೇ ಮಕ್ಕಳಿಗೆ ಆಚಾರ ವಿಚಾರಗಳನ್ನು ತಿಳಿಸುವ ಮೂಲಕ ಜವಾಬ್ದಾರಿಯುತ ಪ್ರeಗಳನ್ನಾಗಿಸಬೇಕು. ದೈನಂದಿನ ಜೀವನದಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಯೋಗ, ಧ್ಯಾನವನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ವೇದಿಕೆಯಲ್ಲಿ ನಿವೃತ ಸೈನಿಕರಾದ ಮಾಚಂಗಡ ಚಂದ್ರ ಉಪಸ್ಥಿತರಿದ್ದರು

ಕಾರ್ಯಕ್ರಮದ ಅಂಗವಾಗಿ ಮಕ್ಕಳು ಛದ್ಮವೇಷ ಧರಿಸಿ ವಾದ್ಯ ಮೇಳಗಳೊಂದಿಗೆ ಮಾಲ್ದಾರೆಯ ಶಾಲೆ ಸಮೀಪದಿಂದ ಶ್ರೀ ಗಣಪತಿ ದೇವಸ್ಥಾನದವರೆಗೆ ಶೋಭಯಾತ್ರೆ ನಡೆಸಿದರು.ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಭಗವದ್ಗೀತೆ ಪಾರಾಯಣವನ್ನು ಬೋಧಿಸಲಾಯಿತು. ಶಾಲಿನಿ ಸ್ವಾಗತಿಸಿ, ಲತಿಕ ರಾಜೇಶ್ ನಿರೂಪಿಸಿ, ಮಂಜುಳ ವಂದಿಸಿದರು.

-ವಾಸು