ವೀರಾಜಪೇಟೆ, ಜ. ೨೫: ಕೇರಳದ ಉಳಿಕಲ್‌ನಲ್ಲಿರುವ ಶ್ರೀ ಆದಿ ಬೈತೂರ್ ಕಾಲಿಯಾರ್ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಾನುವಾರದಂದು ೧೧ ಊಟ್ ಹಬ್ಬದ ಪ್ರಯುಕ್ತ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆರ್ಶೀವಾದ ಕಾರ್ಯಕ್ರಮ ನಡೆಯಿತು. ಕೊಡಗಿನ ದೇವರುಗಳ ದರ್ಶನ ನೀಡಿ, ಬೈತೂರಪ್ಪನಿಂದ ಶಕ್ತಿ ಪಡೆಯುವ ವಿಶೇಷ ಆಚರಣೆ ನಡೆಯಿತು. ಸಂಜೆ ವೇಳೆ ಉತ್ಸವದ ಭಾಗವಾಗಿ ಉತ್ಸವ ಮೂರ್ತಿಯನ್ನು ಹೊತ್ತು ಆನೆಯ ದೇವಸ್ಥಾನ ಪ್ರದಕ್ಷಿಣೆ ನಡೆಯಿತು. ಬೈತೂರು ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಪುಗ್ಗೆರ ಪೊನ್ನಪ್ಪ ಸೇರಿದಂತೆ ಕೊಡಗಿನ ಭಕ್ತಾಧಿಗಳು ಕೇರಳದ ಭಕ್ತರು, ಭಕ್ತಜನ ಸಂಘದ ಸದಸ್ಯರು, ಪುಗ್ಗೆರ ಮನೆತನದವರು ಹಾಜರಿದ್ದರು.