ಮಡಿಕೇರಿ, ಜ. ೨೫: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ಪಶ್ಚಿಮಘಟ್ಟ ಚಾರಣವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಇಂದು ಮಡಿಕೇರಿ ಸನಿಹದ ಕೂಟುಹೊಳೆ ಬಳಿ ಚಾಲನೆ ನೀಡಲಾಯಿತು.
೩ ರಾತ್ರಿ ಹಾಗೂ ೪ ಹಗಲಿನ ಚಾರಣ ಇದಾಗಿದ್ದು, ೩ ತಂಡಗಳಾಗಿ ಚಾರಣಿಗರು ಪಾಲ್ಗೊಳ್ಳುತ್ತಿದ್ದಾರೆ. ಮೊದಲನೇ ತಂಡದಲ್ಲಿ ಇಂದು ೨೬ ಮಂದಿ ಚಾರಣ ಕೈಗೊಂಡರು. ಎರಡನೇ ತಂಡದಲ್ಲಿ ೨೬ ಹಾಗೂ ೩ನೇ ತಂಡದಲ್ಲಿ ೩೩ ಮಂದಿ ಭಾಗವಹಿಸುತ್ತಿದ್ದಾರೆ.
ಈ ಬಾರಿಯ ಚಾರಣದಲ್ಲಿ ಬೇರೆ ರಾಜ್ಯಗಳ ಮಂದಿ ಹೆಚ್ಚಿರುವುದು ವಿಶೇಷವಾಗಿದೆ. ಇಂದು ಕೂಟುಹೊಳೆಯಲ್ಲಿ ಚಾಲನೆ ನೀಡಿದ ಸಂದರ್ಭ ಯೂತ್ ಹಾಸ್ಟೆಲ್ ಅಸೋಸಿಯೇಷನ್ನ ಕೊಡಗು ಘಟಕದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯ ಚೋಡುಮಾಡ ಎ. ಅಯ್ಯಣ್ಣ, ಬಿ.ಎಂ. ರಾಜಶೇಖರ್, ರಾಜ್ಯ ಅಧ್ಯಕ್ಷ ಸುದರ್ಶನ್, ರಾಷ್ಟಿçÃಯ ಉಪಾಧ್ಯಕ್ಷ ರವಿಕುಮಾರ್, ರಾಜ್ಯ ಖಜಾಂಚಿ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು. ಗೈಡ್ಗಳ ಸಹಾಯದೊಂದಿಗೆ ಚಾರಣ ಹಮ್ಮಿಕೊಳ್ಳಲಾಗಿದೆ.