ವೀರಾಜಪೇಟೆ, ಜ. ೨೬: ಉಳಿಕ್ಕಲ್ ಶ್ರೀ ವಾಯತೂರ್ ಕಲಿಯಾರ್ ಶ್ರೀ ಆದಿ ಬೈತೂರಪ್ಪ ದೇವಸ್ಥಾನದ ಮಹೋತ್ಸವ ೧೪ ದಿನಗಳ ಕಾಲ ಅತ್ಯಂತ ಶ್ರದ್ದಾಭಕ್ತಿಯಿಂದ ನಡೆದು ಇಂದು ಸಂಪನ್ನಗೊAಡಿತು.
ಬೆಳಿಗ್ಗೆ ಕ್ಷೇತ್ರದಲ್ಲಿ ಆರಾಟ್ ಉತ್ಸವ, ವಿಶೇಷ ಚಂಡೆಮೇಳದೊAದಿಗೆ ಆನೆಯ ಮೇಲೆ ಉತ್ಸವ ಮೂರ್ತಿಯ ಮೆರವಣಿಗೆ, ದೇವರ ನೃತ್ಯ ಬಲಿ, ದೇವರ ಮೂಲ ಸ್ಥಾನದ ಬಳಿ ಪೂಜೆ ನಡೆದ ನಂತರ ಕೋಮರತ್ತಚ್ಚನ್ ರಾಜನ್ ನಂಬಿಯಾರ್ ಅವರ ಬಲಿಪೀಠದಿಂದ ವಾಚಲಂ ಸಮಾರಂಭ ನಡೆಯಿತು.
ವಟ್ಟಕ್ಕುನ್ನಮ್ ಹರಿಕೃಷ್ಣನ್ ನಂಬೂ ದರಿ ತಿಡಂಬ ನೃತ್ಯವನ್ನು(ಉತ್ಸವ ಮೂರ್ತಿ ಬಲಿ ಪ್ರದರ್ಶನ) ಪ್ರದರ್ಶಿಸಿದರು. ಉತ್ಸವದ ಕೊನೆಯ ದಿನದಲ್ಲಿ ದೇವಾಲಯದ ಆವರಣವು ಭಕ್ತರಿಂದ ತುಂಬಿತ್ತು. ತಿಡಂಬ ನೃತ್ಯದೊಂದಿಗೆ ಉತ್ಸವ ಮುಕ್ತಾಯಗೊಂಡಿತು.
ಇಲ್ಲಿ ಕೊನೆಯ ಮೂರು ದಿನ ಕೊಡಗಿನವರಿಗೆ ವಿಶೇಷ ಪ್ರಾಮುಖ್ಯತೆ ಇದ್ದು ಇಲ್ಲಿ ದೈವ ದರ್ಶನವೂ ನಡೆಯಿತು. ಮೈಮೇಲೆ ದೇವರ ಆವಾಹನೆಯಾಗುವವರು ಮೊದಲು ಇಲ್ಲಿಗೆ ಬರುವ ಪ್ರತೀತಿ ಇದೆ. ಇಲ್ಲಿ ದೈವ ದರ್ಶನ ಆದಮೇಲೆ ಯಾವ ದೈವದರ್ಶನ ಆಗುತ್ತಿರುವುದು ಎನ್ನುವ ಖಾತ್ರಿ ಮಾಡಿಕೊಳ್ಳಲಾಗುತ್ತದೆ.
ಮಲಯಾಳಿಗರು ಮತ್ತು ಕೊಡಗಿನ ನಿವಾಸಿಗಳು ಆಯೋಜಿಸಿದ್ದ ಹದಿನಾಲ್ಕು ದಿನಗಳ ಊಟು ಉತ್ಸವದಲ್ಲಿ ಈ ಬಾರಿ, ದೇವಾಲಯದಲ್ಲಿ ಕೊಡಗು ನಿವಾಸಿಗಳ ಹೆಚ್ಚಿನ ಭಾಗವಹಿಸುವಿಕೆ ಕಂಡುಬAತು. ವಾಯತೂರ್ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಉತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.