ಸೋಮವಾರಪೇಟೆ,ಜ.೨೬: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ನಿನ್ನೆ ರಾತ್ರಿ ವಾಸದ ಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ನಡೆದಿದ್ದು, ಮನೆಯೊಳಗಿದ್ದ ವೃದ್ಧೆ ಹಾಗೂ ಮೊಮ್ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಜೂರು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಮೊಮ್ಮಗುವನ್ನು ಪೋಷಿಸುತ್ತಿರುವ ವೃದ್ಧೆ ಪುಷ್ಪ ಅವರಿಗೆ ಸೇರಿದ ವಾಸದ ಹೆಂಚಿನ ಮನೆಯು ಬೆಂಕಿಯ ಆರ್ಭಟಕ್ಕೆ ಸಂಪೂರ್ಣ ಭಸ್ಮವಾಗಿದ್ದು, ಇವರೀರ್ವರು ಜೀವದೊಂದಿಗೆ ಉಳಿದಿರುವುದೇ ಹೆಚ್ಚು ಎಂಬAತಾಗಿದೆ.
ನಿನ್ನೆ ರಾತ್ರಿ ೧೧.೪೦ರ ಸುಮಾರಿಗೆ ಈರ್ವರೂ ಮನೆಯೊಳಗೆ ಮಲಗಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಗಾಢ ನಿದ್ರೆಯಿಂದ ಎಚ್ಚರಗೊಳ್ಳುವಷ್ಟರಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಆವರಿಸಿದೆ. ಕಣ್ಣೆದುರೇ ಮನೆಯು ಬೆಂಕಿಗೆ ಆಹುತಿಯಾಗುತ್ತಿದ್ದುದನ್ನು ಕಂಡ ಪುಷ್ಪ ಅವರು ಮನೆಯಿಂದ ಹೊರಬಂದು ಜೋರಾಗಿ ಬೊಬ್ಬೆ ಹೊಡೆದಿದ್ದಾರೆ.
ಈ ಸಂದರ್ಭ ನೆರೆಮನೆಯ ನಿವಾಸಿ, ಐಗೂರು ಗ್ರಾ.ಪಂ. ಅಧ್ಯಕ್ಷ ವಿನೋದ್ ಅವರು ಸ್ಥಳಕ್ಕೆ ದೌಡಾಯಿಸಿ ಮನೆಯೊಳಗಿದ್ದ ಬಾಲಕ ಹರ್ಷಿತ್‌ನನ್ನು ಹೊರತಂದು ಪ್ರಾಣ ಉಳಿಸಿದ್ದಾರೆ. ಗಾಳಿಯ ರಭಸಕ್ಕೆ ಬೆಂಕಿಯು ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು, ನಂದಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿವೆ. ಈ ನಡುವೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ೨೦ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿಯನ್ನು ತಹಬದಿಗೆ ತಂದು ನಂದಿಸಿದ್ದಾರೆ.
ಆದರೆ ಅಷ್ಟರಲ್ಲಾಗಲೇ ಮನೆಯು ಸಂಪೂರ್ಣ ಸುಟ್ಟು ಹೋಗಿದ್ದು, ಮನೆಯೊಳಗಿದ್ದ ಪಾತ್ರೆ, ಬಟ್ಟೆ ಬರೆ, ಟಿ.ವಿ., ಮಂಚ, ಪೀಠೋಪಕರಣ, ಮನೆಯ ದಾಖಲಾತಿಗಳು, ಕಾಜೂರು ಸರ್ಕಾರಿ ಶಾಲೆಯಲ್ಲಿ ೩ನೇ ತರಗತಿ ವ್ಯಾಸಂಗ ಮಾಡುತ್ತಿರುವ ಹರ್ಷಿತ್‌ನ ಶಾಲಾ ದಾಖಲಾತಿಗಳು, ಬ್ಯಾಗ್, ಸಮವಸ್ತç ಸೇರಿದಂತೆ ಇನ್ನಿತರ ವಸ್ತುಗಳೆಲ್ಲವೂ ಭಸ್ಮವಾಗಿವೆ. ಇದರೊಂದಿಗೆ ಪುಷ್ಪ ಅವರು ಕೂಲಿ ಕೆಲಸ ಮಾಡಿ ಪಡೆದಿದ್ದ ವಾರದ ಸಂಬಳದ ಹಣವೂ ಬೆಂಕಿಗೆ ಆಹುತಿಯಾಗಿದ್ದು, ಅಕ್ಷರಶಃ ಬರಿಗೈಯಲ್ಲಿ ಬೀದಿಗೆ ಬರುವಂತಾಗಿದೆ.
ಮನೆಯೊಳಗೆ ಮುಕ್ಕಾಲು ಭಾಗ ಖಾಲಿಯಾಗಿದ್ದ ಅಡುಗೆ ಅನಿಲದ ಸಿಲಿಂಡರ್ ಇದ್ದು, ಇದಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು ೧೫ ಅಡಿಗಳ ಎತ್ತರಕ್ಕೆ ಬೆಂಕಿ ಹೊತ್ತಿ ಉರಿಯುತ್ತಿತ್ತು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಷ್ಟರಲ್ಲಿಯೇ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದು, ಭಾರೀ ಹಾನಿಯನ್ನು ತಪ್ಪಿಸಿದಂತಾಗಿದೆ. ಒಂದು ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದರೆ ಅಕ್ಕಪಕ್ಕದ ಮನೆಗಳಿಗೂ ಅಪಾರ ಹಾನಿಯಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪುಷ್ಪ ಅವರ ಬದುಕು ಬೀದಿಗೆ ಬಂದಿದ್ದು, ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕೆAದು ಸ್ಥಳೀಯರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಗ್ರಾಮ ಆಡಳಿತಧಿಕಾರಿ ನೇಹಾ, ಪಿಡಿಓ ಪೂರ್ಣಕುಮಾರ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಸಂಶಯಿಸಲಾಗಿದೆ.
ಪAಚಾಯಿತಿಯಿAದ ಪರಿಹಾರ
ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಗ್ರಾಮ ಪಂಚಾಯಿತಿ ಸದಸ್ಯ ಜುನೈದ್, ಪಿಡಿಓ ಪೂರ್ಣಕುಮಾರ್ ಬೆಂಕಿಯಿAದ ಸುಟ್ಟು ಕರಕಲಾದ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಗ್ರಾಮ ಪಂಚಾಯಿತಿ ವತಿಯಿಂದ ರೂ. ೩,೦೦೦ ಹಣದ ಚೆಕ್ ಮತ್ತು ದಿನಸಿ ಸಾಮಗ್ರಿಗಳನ್ನು ಮನೆಯವರಿಗೆ ವಿತರಿಸಿದರು.