ಸಿದ್ದಾಪುರ, ಜ. ೨೬: ಸಿದ್ದಾಪುರದಲ್ಲಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಸಿದ್ದಾಪುರದ ವೀರಾಜಪೇಟೆ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಬಳಿಕ ನಡೆದ ಸೌಹಾರ್ದ ಸಮ್ಮೇಳನವನ್ನು ಜಿಲ್ಲಾ ಉಪ ಖಾಝಿ, ಸಮಸ್ತ ಕೇಂದ್ರ ಮುಷಾವರ ಶ್ಯೆಖುನಾ ಎಂ.ಎA. ಅಬ್ದುಲ್ ಫೈಝಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಜಾತ್ಯತೀತ ದೇಶವಾಗಿದ್ದು, ಎಲ್ಲಾ ಧರ್ಮದವರು ಅನ್ಯೋನ್ಯವಾಗಿ ಜೀವನ ಮಾಡಬೇಕು. ಸೌಹಾರ್ದತೆಯಿಂದ ಬಾಳಬೇಕು. ಪ್ರತಿಯೊಬ್ಬರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶನಿವಾರಸಂತೆಯ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ದಿನನಿತ್ಯ ಕೊಲೆ, ಅತ್ಯಾಚಾರ ಸುಲಿಗೆಗಳಂತಹ ಪ್ರಕರಣಗಳು ನಡೆಯುತ್ತಿರುವುದು ವಿಷಾದನೀಯ. ದೇಶದಲ್ಲಿ ಒಂದೇ ತಾಯಿಯ ಮಕ್ಕಳಂತೆ ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಬೇಕು. ಒಳ್ಳೆಯ ಆದರ್ಶಗಳನ್ನು ಮೈಗೂಡಿಸಿಕೊಂಡು ಸಹಬಾಳ್ವೆ ನಡೆಸಬೇಕೆಂದು ಕರೆ ನೀಡಿದ ಅವರು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ತಿಳಿಸಿದರು.
ಎಲ್ಲಾ ಧರ್ಮದವರ ಸಾರ, ಪ್ರಾರ್ಥನೆ ಒಂದೇ. ಅವರು ಭಾಷೆಗಳು ಬೇರೆಯಾದರೂ ಕೂಡ ಭಾವನೆಗಳು ಒಂದೆ. ಈ ಬಗ್ಗೆ ಯುವಜನಾಂಗಕ್ಕೆ ಜಾಗೃತಿ ಮೂಡಿಸಬೇಕು. ಯುವಪೀಳಿಗೆಯಲ್ಲಿ ಸಂಸ್ಕಾರ ಕೊರತೆ ಕಂಡು ಬರುತ್ತಿದೆ. ಆಚಾರ ವಿಚಾರದ ಬಗ್ಗೆ ಮಕ್ಕಳಿಗೆ ತಿಳಿಸುವ ಮೂಲಕ ಸದೃಢ ರಾಷ್ಟç ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸಬೇಕೆಂದರು.
ಚೆಟ್ಟಳ್ಳಿಯ ಸೆಂಟ್ ಸಬಾಸ್ಟಿನ್ ಚರ್ಚ್ನ ಧರ್ಮಗುರು ಫಾ. ಜೆರಾಲ್ಡ್ ಸ್ವಿಕೇರಾ ಮಾತನಾಡಿ, ಎಲ್ಲಾ ಧರ್ಮದವರು ಸಮಾನತೆಯಿಂದ ಗೌರವದಿಂದ ಜೀವನ ಮಾಡಬೇಕು ಎಂದರು.
ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಉಸ್ಮಾನ್ ಫೈಝಿ, ಸ್ವಾಗತ ಸಮಿತಿ ಚೇರ್ಮೆನ್ ಅಬ್ದುಲ್ ಕರೀಂ, ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಉಪಾಧ್ಯಕ್ಷ ತಮ್ಲೀಖ್ ದಾರಿಮಿ, ಎಸ್‌ಕೆಎಸ್‌ಎಫ್ ಅಧ್ಯಕ್ಷ ಮುಹಮ್ಮದ್ ಸುಹೈಬ್ ಫೈಝಿ ಉಸ್ತಾದ್ ಕೆ.ಎಸ್ ಹೈದರ್ ದಾರಿಮಿ, ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ಸೇರಿದಂತೆ
ಇನ್ನಿತರರು ಹಾಜರಿದ್ದರು.