ಮಡಿಕೇರಿ, ಜ. ೨೬: ಈಗಿನ ತಲೆಮಾರಿನ ಜೆನ್ ಜಿ ಪೀಳಿಗೆಗೆ ತಕ್ಕಂತೆ ಡಿಜಿಟಲ್ ಮಾಧ್ಯಮದಲ್ಲಿಯೇ ಧರ್ಮ ಮತ್ತು ಜೀವನ ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಕಾರ್ಯಯೋಜನೆ ರೂಪಿಸಬೇಕೆಂದು ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಸಲಹೆ ನೀಡಿದ್ದಾರೆ.
ನಗರದ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜಿತ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವಾರ್ಷಿಕ ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಿಲ್, ಡಿಜಿಟಲ್ ಯುಗದಲ್ಲಿ ಜನಿಸಿದ ಜೆನ್ ಜಿ ಮತ್ತು ಆಲ್ಫಾ ಪೀಳಿಗೆಯು ಮೊಬೈಲ್, ಇಂಟರ್‌ನೆಟ್ ಹೊರತಾಗಿ ಜೀವನವನ್ನೇ ಯೋಚಿಸುತ್ತಿಲ್ಲ. ಹಳೇ ತಲೆಮಾರಿನ ಸಂಸ್ಕೃತಿ, ಸಂಪ್ರದಾಯ, ಲೇಖಕರು, ಸಾಹಿತ್ಯದ ಪರಿಚಯವೂ ಈ ಪೀಳಿಗೆಗೆ ಇಲ್ಲ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜವು ವಾರಕ್ಕೊಂದು ದಿನವಾದರೂ ನವಪೀಳಿಗೆಯೂ ಸೇರಿದಂತೆ ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣದಂತಹ ಕಾರ್ಯಕ್ರಮ ರೂಪಿಸಬೇಕೆಂದು ಕರೆ ನೀಡಿದರು.
ಆಧುನಿಕ ದಿನಗಳಲ್ಲಿ ಕೌಟುಂಬಿಕ ಸಂಬAಧಗಳು ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ವಿಷಾಧಿಸಿದ ಅನಿಲ್, ಬ್ರಿಟನ್ ಲೇಖಕ ಸ್ಟೀಫನ್ ಫ್ರೈ ಹೇಳಿದಂತೆ ಒಂದೇ ಮನೆಯಲ್ಲಿ ಐದಾರು ದೇಶಗಳ ಸಂಸ್ಕೃತಿ ಕಂಡುಬರುತ್ತಿದೆ. ಅಪ್ಪ ಅಮೇರಿಕಾದ ರಾಜಕೀಯ ಗಮನಿಸುತ್ತಿದ್ದರೆ, ಅಮ್ಮ ನ್ಯೂಜಿಲೆಂಡ್ ನಲ್ಲಿರುವ ಮಗಳೊಂದಿಗೆ ಮಾತನಾಡುತ್ತಾಳೆ. ಮಗ ರಾಕ್ ಸಂಗೀತ ಕೇಳುತ್ತಿದ್ದರೆ ಅಜ್ಜಿ ಭಾರತೀಯ ದೇವರ ಧ್ಯಾನದಲ್ಲಿ ನಿರತಳಾಗಿರುತ್ತಾಳೆ. ಮಗಳು ಚೈನೀಸ್ ತಿಂಡಿ ಆಸ್ವಾದಿಸುತ್ತಿರುತ್ತಾಳೆ. ಹೀಗೆ ಮನೆಯೊಂದರಲ್ಲಿ ವಿವಿಧ ದೇಶಗಳ ಸಂಸ್ಕೃತಿ ಹಾಸುಹೊಕ್ಕಾಗುವಂತಹ ದಿನಗಳು ಈಗಿನವು ಎಂದರು.
ಪ್ರತಿಯೋರ್ವರನ್ನೂ ಬೆಸೆಯುವದಕ್ಕಾಗಿ ನೂರಾರು ಉಪಕರಣಗಳಿದ್ದರೂ ಎಲ್ಲರೂ ಒಂಟಿತನ ಅನುಭವಿಸುತ್ತಿರುವುದು ಆಧುನಿಕಕಾಲದ ಡಿಜಿಟಲ್ ಯುಗದ ವಿಪರ್ಯಾಸ ಎಂದು ವಿಶ್ಲೇಷಿಸಿದ ಅನಿಲ್, ಮನಗೆದ್ದು ಮಾರು ಗೆಲ್ಲು ಎಂಬAತೆ ಬ್ರಾಹ್ಮಣ ಸಮಾಜದವರು ಇತರೆಲ್ಲಾ ಸಮಾಜದವರಿಗೆ ಮಾದರಿಯಾಗುವಂತೆ ಆದರ್ಶಯುತ ಜೀವನ ನಡೆಸಬೇಕೆಂದು ಕರೆ ನೀಡಿದರು. ಆಧುನಿಕತೆಯ ಭರಾಟೆಯಲ್ಲಿ ಕೂಡುಕುಟುಂಬಗಳು, ಕೌಟುಂಬಿಕ ಸಂಬAಧಗಳು ದೂರವಾಗದಂತೆ ಗಮನ ಹರಿಸಿ ಎಂದೂ ಅವರು ಕಿವಿಮಾತು ಹೇಳಿದರು.
ಬ್ರಾಹ್ಮಣ ವಿದ್ಯಾಭಿವೃದ್ದಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ನಿಧಿಯ ಸಭಾಂಗಣದ ಮೇಲಂತಸ್ತಿನ ಕಾಮಗಾರಿಯನ್ನು ಸಮುದಾಯಬಾಂಧವರ ಸಹಕಾರದೊಂದಿಗೆ ಈ ವರ್ಷವೇ ಕೈಗೊಳ್ಳಲಾಗುತ್ತದೆ. ಬ್ರಾಹ್ಮಣ ಸಮುದಾಯದವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ವರ್ಷಂಪ್ರತಿಯAತೆಯೇ ಈ ಬಾರಿಯೂ ಕ್ರೀಡಾ ಸ್ಪರ್ಧೆ, ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು ಎಂದರು. ಕೊಡಗು ಜಿಲ್ಲೆಯಾದ್ಯಂತ ಬ್ರಾಹ್ಮಣ ಸಮುದಾಯದವರ ಸಂಘಟನೆಗೆ ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುತ್ತದೆ ಎಂದೂ ರಾಮಚಂದ್ರ ಮೂಗೂರು ತಿಳಿಸಿದರು.
ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿಯ ವೈದ್ಯ ಡಾ ರಾಜಾರಾಮ್ .ಸಮಾಜ ಒಂದಾಗಿ ಪ್ರತಿಬಿಂಬಿಸಲು ಕ್ರೀಡೆ ಅತ್ಯಂತ ಪ್ರಯೋಜನಕಾರಿಯಾಗಿದೆ. ದಕ್ಷಿಣ ಹಾಗೂ ಉತ್ತರ ಕೊಡಗು ಒಂದುಗೂಡಿ ಈ ಬಾರಿ ಬ್ರಾಹ್ಮಣ ಸಮಾಜದ ಕ್ರೀಡೆಯನ್ನು ಆಯೋಜಿಸಿದ್ದು, ಐಕ್ಯತೆಯ ಸೂಚಕವಾಗಿದೆ. ಸಮಾಜದ ಬಾಂಧವ್ಯ ವೃದ್ಧಿಗೆ ಇದು ಒಂದು ಉತ್ತಮವಾದ ಹಾದಿ. ಮಹಾಭಾರತದ ಕಾಲದಲ್ಲಿ ದ್ರೋಣಾಚಾರ್ಯರು ಐಕ್ಯತೆಗಾಗಿ ಕ್ರೀಡೆಗಳನ್ನು ಬಳಸಿದ್ದರು. ಸಮಾಜದ ಒಳಿತಿಗೆ ಹಾಗೂ ಬ್ರಾಹ್ಮಣರ ಒಗ್ಗೂಡುವಿಕೆಗೆ ಈ ಹೊಸ ಮಾರ್ಗ ಮುಂದಿನ ದಿನಗಳಲ್ಲಿ,ಸಮಾಜದ ಅಭ್ಯುದಯಕ್ಕೆ ಕಾರಣವಾಗಲಿದೆ ಎಂದು ಹೇಳಿದರು. .
ಬ್ರಾಹ್ಮಣರಲ್ಲಿ ಸಹಜವಾಗಿ ನೆಲೆಸಿರುವಂತಹ ಗುಣಗಳೊಂದಿಗೆ, ಕ್ರೀಡೆಯಂತಹ ಮನೋಭಾವವನ್ನು ಬೆಳೆಸುವುದರ ಮೂಲಕ, ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಡಲು ಇದು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿ ಪರಿಣಮಿಸಲಿದೆ. ಆಟಗಾರರಿಗೆ ಹೊಸ ಜೀವನದ ಉತ್ಸಾಹ ಕೊಡುವುದರ ಜೊತೆಗೆ ಇನ್ನು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಆಟೋಟಗಳು, ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿ ಎಂದು ಡಾ. ರಾಜಾರಾಮ್ ಕರೆ ನೀಡಿದರು.
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಕ್ರೀಡಾ ಪಂದ್ಯಾವಳಿಯ ವರದಿ ವಾಚಿಸಿದರು. ಉಪಾಧ್ಯಕ್ಷ ಭರತೇಶ್ ಖಂಡಿಗೆ ಸ್ವಾಗತಿಸಿ, ಖಜಾಂಚಿ ಜಿ.ಆರ್. ರವಿಶಂಕರ್ ಅತಿಥಿ ಪರಿಚಯ ಮಾಡಿದರು. ನಿರ್ದೇಶಕರಾದ ಸವಿತಾ ಭಟ್, ಮಂಜುಳಾ ಭಟ್, ಬಿ.ಕೆ. ಅರುಣ್ ಕುಮಾರ್, ಪಿ.ವಿ. ಅಶೋಕ್ ನಿರೂಪಿಸಿದರು. ಇದೇ ಸಂದರ್ಭ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ವಾರ್ಷಿಕ ಕ್ರೀಡೋತ್ಸವಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.