ಶನಿವಾರಸಂತೆ, ಜ. ೨೬: ಕಲಿಕೆಯಲ್ಲಿ ಹಿಂದುಳಿದಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡಿ ಮುಂಚೂಣಿಗೆ ಕರೆ ತರಲು ಸರ್ಕಾರ ಆಯೋಜಿಸಿರುವ ಹಬ್ಬವೇ ಕಲಿಕಾ ಹಬ್ಬ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ನಡೆದ ೨೦೨೫-೨೬ನೇ ಸಾಲಿನ ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಲಸ್ಟರ್ ಮಟ್ಟಕ್ಕೆ ಸೀಮಿತವಾದ ೧೧ ಚಟುವಟಿಕೆಗಳಲ್ಲಿ ಸಂತೋಷದಿAದ ತೊಡಗಿಸಿಕೊಳ್ಳುವ ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆ ಕಲಿಕಾ ಹಬ್ಬದಲ್ಲಿ ಅನಾವರಣಗೊಳ್ಳುತ್ತದೆ ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಮಾತನಾಡಿ, ಮಕ್ಕಳ ವಿಶೇಷ ಚಟುವಟಿಕೆಯ ಪ್ರತಿಭೆ ಹೊರಹೊಮ್ಮಿಸುವ ಕಲಿಕಾ ಹಬ್ಬದಲ್ಲಿ ಕಸದಿಂದ ರಸ ಎಂಬAತೆ ಮಕ್ಕಳ ಕರದಲ್ಲಿ ಅರಳಿದ ಕಲೆಯ ಪ್ರದರ್ಶನವು ಇರುತ್ತದೆ, ಮಕ್ಕಳು ಹೊಂದಿರುವ ಕೌಶಲ್ಯದ ಅನಾವರಣವಾಗುತ್ತದೆ ಎಂದರು.

ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಮಧು ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದಿದ್ದರೂ ಜೀವನೋತ್ಸಾಹದಿಂದ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಂತೋಷದಿAದ ಬಹುಮಾನ ಗಳಿಸುವ ಕಲಿಕಾ ಹಬ್ಬ ಅರ್ಥಪೂರ್ಣವೆನಿಸುತ್ತದೆ ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕವಿತಾ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ್ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯ ಮದನ್ ಮಾತನಾಡಿ, ಮಕ್ಕಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕಿ ಲಲಿತಾ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕಾ ಹಬ್ಬ ಅತ್ಯುತ್ತಮ ಕಾರ್ಯಕ್ರಮವಾಗಿದ್ದು ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತದೆ ಎಂದರು.

ಶನಿವಾರಸAತೆ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಒಳಪಡುವ ಶನಿವಾರಸಂತೆ, ತ್ಯಾಗರಾಜ ಕಾಲೋನಿ, ಚಿಕ್ಕಕೊಳತ್ತೂರು, ಬಿಳಾಹ, ಮಾದ್ರೆ ಗ್ರಾಮಗಳ ೫ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಕಲಿಕಾ ಹಬ್ಬದ ೧೧ ಚಟುವಟಿಕೆಗಳಲ್ಲಿ ಭಾಗಿಗಳಾಗಿ ಬಹುಮಾನ ಗಳಿಸಿದರು. ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಜಯಮ್ಮ, ಬಿಂದಮ್ಮ, ಶಾಂತಮ್ಮ, ಪುಟ್ಟರಾಜ್, ಶಿಕ್ಷಕ ನಾಗರಾಜ್, ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

ವಿದ್ಯಾರ್ಥಿನಿ ಧೃತಿ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಜೆಸಿಂತಾ ಸಿಕ್ವೆರಾ ಸ್ವಾಗತಿಸಿ, ಮಮತಾ ವಂದಿಸಿ, ವಿಶಾಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.