ವೀರಾಜಪೇಟೆ, ಜ. ೨೬: ನಾಪೋಕ್ಲುವಿನಲ್ಲಿ ನಿರ್ಮಿಸಲು ಉದ್ದೆೆÃಶಿಸಿರುವ ಅಲ್ಪಸಂಖ್ಯಾತ ಸಮುದಾಯ ಭವನದ ಜಾಗದ ವಿಚಾರ ವಿವಾದವಾಗಿ ಮಾರ್ಪಟ್ಟ ಹಿನ್ನೆಲೆ ಸಮಗ್ರ ಪರಿಶೀಲನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗೆ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸೂಚನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊನ್ನಣ್ಣ ಅವರು, ನಾನು ಕೆಲ ತಿಂಗಳ ಹಿಂದೆ ನಾಪೋಕ್ಲುವಿನಲ್ಲಿ ಅಲ್ಪಸಂಖ್ಯಾತರ ಸಮುದಾಯಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆÀರವೇರಿಸಿದ್ದೆ. ಆದರೆ, ಇದು ಸ್ಥಳೀಯ ಶಾಲೆಗೆ ಸೇರಿರುವ ಜಾಗ ಎಂದು ಕೆಲವರು ತಿಳಿಸಿದ್ದು, ಗೊಂದಲ ನಿವಾರಣೆ ಮಾಡಲು ಆ ಜಾಗದ ಸರ್ವೆ ನಡೆಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಈ ಕುರಿತು ಅಲ್ಲಿನ ಪ್ರಾಂಶುಪಾಲರು ಕರೆ ಮಾಡಿ ಈ ವಿಚಾರ ತಿಳಿಸಿದಾಗ ಆ ರೀತಿ ಇದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದೇನೆ. ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡಬಾರದು. ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸಲಾಗುವುದು. ಭೂಮಿಪೂಜೆ ನಡೆಸುವ ಸಮಯದಲ್ಲಿಯೇ ಆ ವಿಚಾರವನ್ನು ತಿಳಿಸಬಹುದಿತ್ತು.

ತಿಂಗಳು ಕಳೆದು ಕಾಮಗಾರಿ ಆರಂಭದ ವೇಳೆ ಇದಕ್ಕಿದ್ದಂತೆ ಶಾಲೆಯ ಜಾಗ ಎಂದು ವಿವಾದವನ್ನು ಸೃಷ್ಟಿಸಿ ಮುನ್ನಲೆಗೆ ತರಬಾರದಿತ್ತು. ಒಟ್ಟಾರೆ ಈ ವಿಚಾರದಲ್ಲಿ ಯಾವ ಗೊಂದಲ ಬೇಡ ನಿರ್ದಿಷ್ಟವಾಗಿ ಜಾಗ ಯಾರಿಗೆ ಸೇರಿದ್ದು ಎಂದು ತಿಳಿದು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕ ಪೊನ್ನಣ್ಣ ನೀಡಿದ್ದಾರೆ.