ನಾಪೋಕ್ಲು, ಜ. ೨೭: ಭಾಗಮಂಡಲ ಜ್ಞಾನೋದಯ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪರೀಕ್ಷೆಯಲ್ಲಿ ಭಾಗವಹಿಸಿ ವಿವಿಧ ಹಂತಗಳಲ್ಲಿ ಸಾಧನೆ ಮಾಡಿದ್ದಾರೆ.

ಅಂತರರಾಷ್ಟಿçÃಯ ಶೋಲಿಂಗ್ ಕುಂಗ್ಫು ಸಂಸ್ಥೆಯ ವತಿಯಿಂದ ಭಾಗಮಂಡಲ ಜ್ಞಾನೋದಯ ಶಾಲೆಯಲ್ಲಿ ಆಯೋಜಿಸಿದ್ದ ಕರಾಟೆ ಪರೀಕ್ಷೆಯಲ್ಲಿ ಒಟ್ಟು ೨೯ ವಿದ್ಯಾರ್ಥಿಗಳು ಭಾಗವಹಿಸಿದ್ದು ೧೨ ವಿದ್ಯಾರ್ಥಿಗಳು ಹಳದಿ, ೧೨ ವಿದ್ಯಾರ್ಥಿಗಳು ಆರೆಂಜ್, ೫ ವಿದ್ಯಾರ್ಥಿಗಳು ಹಸಿರು ಬೆಲ್ಟ್ ಪಡೆದುಕೊಂಡಿದ್ದಾರೆ.

ಈ ಸಂದರ್ಭ ಪರೀಕ್ಷಾರ್ಥಿಗಳಾಗಿ ಇಂಡಿಯನ್ ಗ್ರ‍್ಯಾಂಡ್ ಮಾಸ್ಟರ್ ಶಿಫು ಇಂದ್ರಜಿತ್, ಇಂಡಿಯನ್ ತರಬೇತುದಾರ ದೇವರಾಜ್, ಕೊಡಗು ಜಿಲ್ಲೆಯ ತರಬೇತುದಾರ ವೇಣು ಗೋಪಾಲ್, ಕರ್ನಾಟಕ ರಾಜ್ಯದ ತರಬೇತುದಾರ ನಾಟೋಳಂಡ ನಂಜುAಡ ಪಾಲ್ಗೊಂಡಿದ್ದರು. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಚೀಯಕ್‌ಪೂವಂಡ ಶ್ವೇತನ್ ಚಂಗಪ್ಪ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಮುಕ್ಕಾಟಿರ ಶಿಶಿರ್ ಮುತ್ತಪ್ಪ ಮಾರ್ಗದರ್ಶನ ನೀಡಿದ್ದರು.