ಮಡಿಕೇರಿ, ಜ. ೨೭: ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿ.ಪಂ. ಹಾಗೂ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವನ್ನು ಸುಮಾರು ೪೪ ಸಾವಿರ ಜನರು ವೀಕ್ಷಣೆ ಮಾಡಿದ್ದಾರೆ.
ತಾ. ೨೪ ರಿಂದ ತಾ. ೨೬ರ ತನಕ ರಾಜಾಸೀಟ್ ಪ್ರವೇಶಕ್ಕೆ ೩೩ ಸಾವಿರದಷ್ಟು ಟಿಕೆಟ್‌ಗಳು ಮಾರಾಟವಾಗಿವೆ. ಇದಲ್ಲದೆ ವಿದ್ಯಾರ್ಥಿಗಳು, ವಿಐಪಿಗಳು, ಸ್ಥಳೀಯ ಪ್ರಮುಖರು ಸೇರಿ ೧೧ ಸಾವಿರದಷ್ಟು ಜನರು ಆಗಮಿಸಿರುವ ಕುರಿತು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.
೩೩ ಸಾವಿರ ಟಿಕೆಟ್ ಮಾರಾಟದಿಂದಾಗಿ ರೂ ೬.೬೦ ಲಕ್ಷ ಹಣ ಕ್ರೋಢೀಕೃತವಾಗಿರುವುದಾಗಿ ಇಲಾಖೆಯ ಮಾಹಿತಿ ತಿಳಿಸಿದೆ.