ಪೊನ್ನಂಪೇಟೆ, ಜ. ೨೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಜಿಲ್ಲೆ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ಸಹಯೋಗದಲ್ಲಿ ಚಿಗುರು ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಅವರು ವಹಿಸಿದ್ದರು. ಕೆಪಿಎಸ್ ಪೊನ್ನಂಪೇಟೆ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ಸ್ವಾಗತ ನೃತ್ಯವನ್ನು ಮಾಡಿದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಎಂ.ಟಿ ಚಿರಂತ್ ಆಚಾರ್ಯ ಮತ್ತು ತಂಡದವರು ಕರ್ನಾಟಕ ವಾದ್ಯ ಸಂಗೀತ, ಹುಣಸೂರು ಸಮೀಪದ ಕರಿಮುದ್ದೆನಹಳ್ಳಿಯ ಕುಮಾರಿ ಚಿನ್ಮಯ್ ಹಾಗೂ ತಂಡದವರಿAದ ಮುಟ್ಟಿಸಿಕೊಂಡವರು ಎಂಬ ನಾಟಕ ಪ್ರದರ್ಶನ ನಡೆಯಿತು.

ಜಿಲ್ಲೆಯ ವಿವಿಧೆಡೆಯಿಂದ ಬಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜುನೈದ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚೆಪ್ಪುಡಿರ ಉತ್ತಪ್ಪ, ಪೊನ್ನಂಪೇಟೆ ಶಿರಸ್ತೆದಾರರಾದ ರವಿ, ನೆಸ್ಲೆ ಇಂಡಿಯಾ ವ್ಯವಸ್ಥಾಪಕ ತೀತಿರ ಬೋಪಣ್ಣ, ನೆಸ್ಲೆ ಇಂಡಿಯಾ ಸಹ ಆಡಳಿತ ಅಧಿಕಾರಿ ಕನಕ ಸಭಾಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಜಿಲ್ಲೆಯ ಸಹಾಯಕ ನಿರ್ದೇಶಕರಾದ ಕುಮಾರ್, ಕೆಪಿಎಸ್ ಮುಖ್ಯ ಶಿಕ್ಷಕರಾದ ವಿಜಯ್ ಬಿ.ಎಂ, ಶಾಲಾ ಶಿಕ್ಷಕರು, ಸಿಬ್ಬಂದಿಗಳು, ಎಸ್. ಡಿ. ಎಂ. ಸಿ. ಸದಸ್ಯರು, ಹಳೆ ವಿದ್ಯಾರ್ಥಿ ಸಂಘದವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.