ಗೋಣಿಕೊಪ್ಪಲು, ಜ. ೨೭: ಇಲ್ಲಿನ ಲಯನ್ಸ್ ವಿದ್ಯಾಸಂಸ್ಥೆಯು ಕ್ರೀಡೆಗೆ ಅಪಾರವಾದ ಕೊಡುಗೆಯನ್ನು ನೀಡುತ್ತಲೇ ಬಂದಿದೆ. ಹಾಕಿ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಹಲವು ಕ್ರೀಡಾಪಟುಗಳು ಈ ವಿದ್ಯಾಸಂಸ್ಥೆಯಿAದಲೇ ಹೊರಹೊಮ್ಮಿದ್ದಾರೆ ಎಂದು ಮೂರು ಬಾರಿ ಒಲಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ಮನೆಯಪಂಡ ಎಂ. ಸೋಮಯ್ಯ ಶ್ಲಾಘಿಸಿದರು.

ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ವತಿಯಿಂದ ಕಳತ್ಮಾಡುವಿನ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡೋತ್ಸವವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು, ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ತೊಡಗಿಸಿಕೊಂಡು ಸಾಧನೆಯತ್ತ ಗುರಿ ಇಟ್ಟುಕೊಳ್ಳಬೇಕು. ಶ್ರದ್ಧೆ, ಪರಿಶ್ರಮದಿಂದ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಹೆಸರು ಮಾಡುವಂತೆ ಕರೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಪಟ್ಟಡ ಪಿ. ಧನು ಉತ್ತಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ವಿದ್ಯಾಸಂಸ್ಥೆಯ ಸ್ಥಾಪಕ ಸಿ.ಎ. ಮುತ್ತಣ್ಣ, ಉಪಾಧ್ಯಕ್ಷ ಸಿ.ಎಂ. ಅಪ್ಪಣ್ಣ, ಲಯನ್ಸ್ ಕ್ಲಬ್ ಅಧ್ಯಕ್ಷ ಚೆಪ್ಪುಡೀರ ಬೋಪಣ್ಣ, ಕಾರ್ಯದರ್ಶಿ ಮನ್ನಕ್ಕಮನೆ ಸೌಮ್ಯಬಾಲು, ಕಾರ್ಯದರ್ಶಿ ಡಾ. ಸೂರಜ್ ಉತ್ತಪ್ಪ, ಖಜಾಂಚಿ ಕೆ.ಪಿ. ಅಚ್ಚಯ್ಯ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರುಗಳಾದ ಸಿ.ಬಿ. ಲತಾ, ಸಿ.ಎಸ್. ಗಾನ, ಪಿ.ಡಿ. ತಂಗಮ್ಮ ಕ್ರೀಡಾ ನಾಯಕರುಗಳಾದ ಎಂ.ಜಿ. ಅಯ್ಯಪ್ಪ, ಗ್ರೀಷ್ಮಾ ಪೊನ್ನಪ್ಪ, ಪ್ರತೀಕ್ಷ ಪೂವಮ್ಮ ಉಪಸ್ಥಿತರಿದ್ದರು.

ಸಂಸ್ಥೆಯ ವಿದ್ಯಾರ್ಥಿ ಎಂ.ಜಿ. ಅಯ್ಯಪ್ಪ ಸ್ವಾಗತಿಸಿ, ಧಾನಿಕ ದೇಚಮ್ಮ ಅತಿಥಿ ಪರಿಚಯ ಮಾಡಿದರು. ತಾನಿಯ ದೇಚಮ್ಮ ನಿರೂಪಿಸಿ, ಸ್ಪö್ಯನ್ ಬೋಪಣ್ಣ ವಂದಿಸಿದರು.