ಸಿದ್ದಾಪುರ. ಜ, ೨೭: ಹಿಂದೂ ಧರ್ಮದ ಪರ ಮಾತನಾಡುವವರ ವಿರುದ್ಧ ಕಾಯಿದೆ ಹೆಸರಿನಲ್ಲಿ ಪ್ರಕರಣ ದಾಖಲಿಸುತ್ತಿರುವುದರಿಂದ ಲವ್ ಜಿಹಾದ್ ಅಂತಹ ಕೃತ್ಯ ನಡೆಸುವವರಿಗೆ ಬಲಬಂದAತಾಗಿದೆ ಎಂದು ಮಾತೃ ಸುರಕ್ಷಾ ಸಮಿತಿಯ ಪುತ್ತೂರಿನ ಪ್ರಮುಖ ಗಣರಾಜ್ ಭಟ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಸಿದ್ದಾಪುರದಲ್ಲಿ ಲವ್ ಜಿಹಾದ್ ವಿರುದ್ಧ ನಡೆದ ಜನಾಕ್ರೋಶ ಸಭೆಯಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಧರ್ಮದ ವಿರುದ್ಧ ನಡೆಯುವ ಆಕ್ರಮಣದ ವಿರುದ್ಧ ನಿಲ್ಲುವವರ ಮೇಲೆ ಪ್ರಕರಣ ದಾಖಲಿಸುವ ಸರಕಾರವು ಆಕ್ರಮಣಕಾರಿಗಳ ವಿರುದ್ಧ ಮೌನ ವಹಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಅಂತಹ ಕೃತ್ಯವನ್ನು ಮತಾಂಧರು ನಡೆಸುತ್ತಿರುವುದು ಅಘಾತಕಾರಿ ಬೆಳವಣಿಗೆಯಾಗಿದೆ. ಇದಕ್ಕಾಗಿ ಕೇರಳದಿಂದ ಆರ್ಥಿಕ ನೆರವು ಕೂಡ ದೊರೆಯುತ್ತಿರುವುದು ಬಹಿರಂಗವಾಗಿದೆ. ಹಿಂದೂ ಸಮಾಜ ಜಾಗೃತಗೊಂಡರೆ ಮಾತ್ರ ಮಾತಾಂಧರ ಸಂಚು ವಿಫಲವಾಗಲಿದೆ ಎಂದರು. ಜಿಹಾದಿಗಳಿಗೆ ಪಕ್ಷಬೇಧವಿಲ್ಲ ಲವ್ ಜಿಹಾದ್ ಮಾಡುವವರ ಪರವಾಗಿ ಆಡಳಿತ ಪಕ್ಷ ನಿಂತಿರುವುದು ವಿಪರ್ಯಾಸ. ಇತ್ತ ಹಿಂದೂಗಳ ಪರವಾಗಿ ಆಡಳಿತ ಪಕ್ಷವೂ ಇಲ್ಲ, ವಿರೋಧ ಪಕ್ಷವೂ ಇಲ್ಲದೆ ಇರುವುದು ದುರದೃಷ್ಟಕರ. ನಮ್ಮ ಮನೆಯ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾದರೆ ಮಾತ್ರ ಲವ್ ಜಿಹಾದ್ ವಿರುದ್ಧ ಹೋರಾಡಲು ಸಾಧ್ಯ. ಹಿಂದೂ ಸುರಕ್ಷಾ ಸಮಿತಿ ಜಾಗೃತಿ ಯಾತ್ರೆ ಪ್ರತಿಯೊಂದು ಗ್ರಾಮಗಳಿಗೆ ತಲುಪುವಂತಾಗಬೇಕು ಎಂದು ಹೇಳಿದರು.
ಅನ್ಯಧರ್ಮಕ್ಕೆ ಸೆಳೆಯುವ ಹುನ್ನಾರ
ಹಿಂದೂ ಸುರಕ್ಷಾ ಸಮಿತಿ ಪ್ರಮುಖ ಕುಕ್ಕೇರ ಅಜಿತ್ ಮಾತನಾಡಿ, ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಹೆಸರಿನಲ್ಲಿ, ಪ್ರೀತಿ ಪ್ರೇಮದ ನೆಪದಲ್ಲಿ ಅನ್ಯಧರ್ಮಕ್ಕೆ ಸೆಳೆಯುವ ಕೆಲಸವಾಗುತ್ತಿದೆ. ಹಿಂದೂ ಧರ್ಮಕ್ಕೆ ಧಕ್ಕೆ ತರುವ ಕೆಲಸಕ್ಕೆ ಜಿಹಾದಿ ಸಂಘಟನೆಗಳು ಮುಂದಾಗಿವೆ. ಹಿಂದೂಗಳು ಜಾಗೃತರಾಗಿ ಹಿಂದೂ ಸಮಾಜದ ಸಂರಕ್ಷಣೆಗೆ ಮುಂದಾಗಬೇಕೆAಬ ನಿಟ್ಟಿನಲ್ಲಿ ಜಾಗೃತಿ ಸಮಾವೇಶ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಸ್ಲಾಮೀಕರಣ ವ್ಯಾಪಿಸುವ ನಿಟ್ಟಿನಲ್ಲಿ ಲವ್ ಜಿಹಾದ್ ನಡೆಸಲಾಗುತ್ತಿದೆ. ಈ ಮೂಲಕ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೪ಐದನೇ ಪುಟಕ್ಕೆ
ಇದರೊಂದಿಗೆ ಲ್ಯಾಂಡ್ ಜಿಹಾದ್ ಮೂಲಕ ಕೂಡ ಇಸ್ಲಾಂ ಭಯೋತ್ಪಾದಕರು ಹಿಂದೂ ಸಮಾಜವನ್ನು ಛಿದ್ರಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ; ಎಸ್‌ಐಆರ್‌ಗೂ ಇಸ್ಲಾಂ ಭಯೋತ್ಪಾದಕರು ಇಲ್ಲಸಲ್ಲದ ಆರೋಪಗಳನ್ನು ಮುಂದಿಟ್ಟು ವಿರೋಧಿಸುತ್ತಿರುವುದು ಕಂಡುಬರುತ್ತಿದೆ. ಹಿಂದೂ ಹೆಣ್ಣುಮಕ್ಕಳನ್ನು ದೈಹಿಕವಾಗಿ ಬಳಸಿ ಬೆದರಿಕೆಯನ್ನೊಡ್ಡುವ ಕೆಲಸಕ್ಕೆ ಮುಂದಾಗಿದ್ದರೂ ಕಿಡಿಗೇಡಿಯ ಫೋಟೋ ಬಹಿರಂಗಮಾಡದೇ ಇರುವುದು ಅಧಿಕಾರಿ ವರ್ಗದವರ ಮೇಲೆ ಸಂಶಯ ಬರುವಂತೆ ಮಾಡಿದೆ ಎಂದು ದೂರಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಹಿಂದೂ ಹೆಣ್ಣುಮಕ್ಕಳಿಗೆ ಆಮಿಷಗಳನ್ನು ತೋರಿಸಿ ಲವ್ ಜಿಹಾದ್ ಬಲೆಗೆ ಬೀಳಿಸುವ ಕಾರ್ಯದಲ್ಲಿ ಜಿಹಾದಿ ಸಂಘಟನೆಗಳು ತೊಡಗಿಕೊಂಡಿರುವ ವಿರುದ್ಧ ಜಾಗೃತಿ ಮೂಡಿಸಲು ಸಮಾವೇಶ ನಡೆಸಲಾಗಿದೆ. ಹಿಂದೂ ಹೆಣ್ಣು ಮಕ್ಕಳು ಮತಾಂತರಗೊAಡ ನಂತರ ದೈಹಿಕ ಹಾಗೂ ಮಾನಸಿಕವಾಗಿ ಅನ್ಯಾಯಕ್ಕೆ ಒಳಗಾಗಿದ್ದಾರೆ. ಪ್ರತಿಯೊಂದು ಮನೆಯಲ್ಲೂ ತಮ್ಮ ಹೆಣ್ಣು ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು. ಮತಾಂಧÀರು ಲವ್ ಜಿಹಾದ್ ಅಸ್ತçದೊಂದಿಗೆ ಹಿಂದು ಹೆಣ್ಣುಮಕ್ಕಳನ್ನು ಮತಾಂತರ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ವೇದಿಕೆಯಲ್ಲಿ ನಿ. ಕಮಾಂಡರ್ ಕೆ.ಎ. ಉತ್ತಪ್ಪ, ಹಿಂದೂ ಸಂಘಟನೆಯ ಪ್ರಮುಖ ಪುದಿಯೊಕ್ಕಡ ರಮೇಶ್ ಹಾಜರಿದ್ದರು.
ಸಮಾವೇಶದಲ್ಲಿ ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸಿದ್ದಾಪುರದಲ್ಲಿ ಜಾಥಾ
ಸಮಾವೇಶಕ್ಕೂ ಮುನ್ನ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಪಟ್ಟಣದ ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಸಿದ್ದಾಪುರ ಬಸ್ ನಿಲ್ದಾಣ ತನಕ ಜಾಗೃತಿ ಜಾಥಾ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.
ಜಿಹಾದ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಜನರು, ಈ ಬಗ್ಗೆ ಜಾಗೃತಿ ವಹಿಸುವಂತೆ ಸಂದೇಶ ಸಾರಿದರು.
ಮಡಿಕೇರಿ ಉಪವಿಭಾಗ ಡಿವೈಎಸ್ಪಿ ಸೂರಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.