ಕೊಡ್ಲಿಪೇಟೆ, ಜ. ೨೮: ಇತಿಹಾಸದ ಕಹಿ ಘಟನೆಗಳನ್ನು ಮರೆತು, ಸಾಮಾಜಿಕ ಸಮಾನತೆಗೆ ಹೋರಾಡಿದ ನಾಯಕರ ಆದರ್ಶಗಳನ್ನು ಪಾಲಿಸುತ್ತಾ ಜೀವನ ಸಾಗಿಸಬೇಕೆಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಿಸಿದರು.

ಸಮೀಪದ ಬೆಸೂರಿನಲ್ಲಿ ಜೈ ಭೀಮ್ ವಿಪ್ಲವ ಬಳಗದ ವತಿಯಿಂದ ಆಯೋಜಿಸಿದ್ದ ಭೀಮ ಕೋರೆಂಗಾವ್‌ನ ೨೦೮ನೇ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸ ಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಶಾಸಕರು, ಇದರಿಂದ ನಮ್ಮ ಜೀವನದಲ್ಲಿ ಉತ್ತಮ ಬದಲಾವಣೆ ತರಬಹುದು ಎಂದರು. ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ಸಾಧ್ಯ. ಈ ನಿಟ್ಟಿನಲ್ಲಿ ಸಂಘಟನೆಗಳು ಮಕ್ಕಳ ವಿದ್ಯಾಬ್ಯಾಸವನ್ನು ಪ್ರೆರೇಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಮ್ಯೆಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು, ಜ್ಞಾನ ಸಂಪಾದನೆಯ ಮೂಲಕ ಕ್ರಾಂತಿ ಮಾಡಬೇಕೇ ಹೊರತು ಇನ್ಯಾವ ಕ್ರಾಂತಿಯಿAದಲೂ ನಮ್ಮ ಜೀವನದಲ್ಲಿ ಬದಲಾವಣೆ ಸಾದ್ಯವಿಲ್ಲ.

ಶಿಕ್ಷಣ ಮತ್ತು ಸ್ವಾಭಿಮಾನ ಬೆಳೆಸಿಕೊಂಡು ಉನ್ನತ ಸರಕಾರಿ ಹುದ್ದೆಯನ್ನು ಪಡೆಯಬೇಕು ಎಂದರು. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಹಿರಿಯ ವಕೀಲ ಡಾ ಸಿ.ಎಸ್.ದ್ವಾರಕಾನಾಥ್ ಅವರು, ಶೋಷಣೆ ಮಾಡಿದವರ ವಿರುದ್ಧ ಶಸ್ತç ಹಿಡಿದು ಹೋರಾಟ ಮಾಡಿ ಎಂದು ಅಂಬೇಡ್ಕರ್ ರವರು ಕರೆ ಕೊಡಲಿಲ್ಲ. ನ್ಯಾಯ ಮಾರ್ಗವನ್ನು ಹಿಡಿದು ಹೋರಾಡಿದ ಮಾನವೀಯತೆಯ ಉದ್ಬವ ಮೂರ್ತಿ ಎಂದು ಬಣ್ಣಿಸಿದರು.

ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ. ಶಿವಕುಮಾರ್ ಮಾತನಾಡಿ, ಶ್ರೇಣೀಕೃತ ವ್ಯವಸ್ಥೆ, ಅಸ್ಪೃಶ್ಯತೆಗೆ ಅವಕಾಶ ನೀಡಿದ್ದ ಶಕ್ತಿಶಾಲಿ ಸಮುದಾಯದ ವಿರುದ್ಧ ಕೋರೆಗಾಂವ್ ಭೀಮರು ಹೋರಾಡಿದರು. ಭೀಮ ಕೋರೆಗಾಂವ್ ವೀರರ ಸ್ಪೂರ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೊಡಗು ವಿಶ್ವವಿದ್ಯಾಲಯ ಮುಖ್ಯ ಪ್ರಾಧ್ಯಾಪಕ ಧರ್ಮಪ್ಪ ಕಟ್ಟೆಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಪ್ಲವ ಬಳಗದ ಅಧ್ಯಕ್ಷ ಕೆ.ಪಿ. ಗಣೇಶ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ದಲಿತ ಸಂಘಟನೆಗಳ ಜಿಲ್ಲಾ ಸಂಚಾಲಕರುಗಳಾದ ಕೆ.ಪಿ.ರಾಜು ಕುಶಾಲನಗರ, ಗಾಯಿತ್ರಿ ನರಸಿಂಹ ವೀರಾಜಪೇಟೆ, ಎಸ್ಸಿಎಸ್ಟಿ ನೌಕರರ ಸಂಘದ ಜಿಲ್ಲಾದ್ಯಕ್ಷ ಮಹೇಂದ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಜೆ.ಎಲ್. ಜನಾರ್ದನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪುಟ್ಟರಾಜು, ತಾಲೂಕು ಕೆಡಿಪಿ ಸದಸ್ಯ ಡಿ.ಆರ್. ವೇದಕುಮಾರ್, ಶನಿವಾರಸಂತೆ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರು ,ಮುಖ್ಯ ಪೇದೆ ರಮೇಶ್, ವಕೀಲ ಜಯೇಂದ್ರ ಬಿ.ಇ, ಮುಖಂಡರಾದ ಮೋಹನ್ ಮೌರ್ಯ, ಬೆಸೂರು ಗ್ರಾಮ ಪಂಚಾಯತ್ ಸದಸ್ಯ ಕಿಶನ್ ಕುಮಾರ್, ಜಯರಾಜ್ ಉಪಸ್ಥಿತರಿದ್ದರು. ಶಿಕ್ಷಕ ಕೆ.ಪಿ. ಜಯಕುಮಾರ್, ಕಿರಣ್ ಕುಮಾರ್ ಕೆ.ಎಸ್. ರಾಣಿ ರವೀಂದ್ರ, ಹರೀಶ್ ಮಾಗಲು, ಗಂಗಾಧರ್ ಮಲ್ಲಿಪಟ್ಟಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ಭೀಮ ಕೋರೆಂಗಾವ್ ವಿಜಯೋತ್ಸವ ಸ್ಮಾರಕದ ಸ್ಥಂಭದೊAದಿಗೆ ಮುಖ್ಯರಸ್ತೆಯಲ್ಲಿ ಮರೆವಣಿಗೆ ನಡೆಯಿತು.