ಸಿದ್ದಾಪುರ, ಜ. ೨೯: ಕಾಡಾನೆ ರಸ್ತೆ ಬದಿಯಲ್ಲಿದ್ದ ಸಂದರ್ಭ ವೀಡಿಯೋ ಚಿತ್ರೀಕರಣ ಮಾಡಲು ಮುಂದಾಗಿ ಅಜಾಗರೂಕತೆಯಿಂದ ಶಾಲಾ ವಾಹನ ಚಲಾಯಿಸಿದ ಆರೋಪದಡಿ ಕರಡಿಗೋಡು ಬಿಜಿಎಸ್ ಶಾಲೆ ಚಾಲಕ ಸೇರಿದಂತೆ ಮುಖ್ಯೋಪಾಧ್ಯಾಯರಿಗೆ ವಲಯ ಅರಣ್ಯಾಧಿಕಾರಿ ಗಂಗಾಧರ್ ನೋಟೀಸ್ ಜಾರಿ ಮಾಡಿದ್ದಾರೆ.

ತಾ. ೨೮ ರಂದು ಶಾಲಾ ವಾಹನ ಚಾಲಕ ಬಾಡಗ-ಬಾಣಂಗಾಲ ಗ್ರಾಮದ ತೂಬನಕೊಲ್ಲಿ-ಘಟ್ಟದಳ ರಸ್ತೆಯಲ್ಲಿ ಶಾಲಾ ಮಕ್ಕಳೊಂದಿಗೆ ಸಂಚರಿಸುವಾಗ ಕಾಡಾನೆಯೊಂದು ರಸ್ತೆ ಬದಿಯಲ್ಲಿರುವುದನ್ನು ಕಂಡು ಶಾಲಾ ಮಕ್ಕಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದ್ದರೂ ಕ್ಯಾಮರದಲ್ಲಿ ವೀಡಿಯೋ ಚಿತ್ರೀಕರಣ ಮಾಡಲು ಚಾಲಕ ವಾಹನವನ್ನು ನಿಧಾನವಾಗಿ ಚಲಾಯಿಸಿದ್ದು, ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜವಾಬ್ದಾರಿಯಿಂದ ವಾಹನ ಚಲಾಯಿಸುವಂತೆ ಅಧಿಕಾರಿ ಸೂಚಿಸಿದ್ದಾರೆ.