ಕೂಡಿಗೆ, ಜ. ೨೯: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಕೊಡಗು ಮತ್ತು ಮೈಸೂರು ಇವರ ವತಿಯಿಂದ ಸ್ವರ ಸಂಭ್ರಮ ಕರೋಕೆ ಗಾಯನ ಸೀಜನ್ ೧. ಸಮಾರಂಭದಲ್ಲಿ ಕೂಡಿಗೆ ಕೆ.ಎಸ್. ಚಂದ್ರಶೇಖರ್ (ಶೇಖರ್) ಅವರಿಗೆ “ಸಮಾಜ ಸೇವಾ ರತ್ನ “ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಡಾ. ನಯನ ಹರಿಶ್ಚಂದ್ರ, ಕಾರ್ಯದರ್ಶಿ ಹರಿಣಿ ಪ್ರಭಾಕರ್,ಸಂಸ್ಥಾಪಕ ಡಾ. ಕಸ್ತೂರಿ ಚಂದ್ರು, ಮಹಿಳಾ ನಗರಾಧ್ಯಕ್ಷೆ ಅಮೀನಾ ಬೇಗಂ, ಹಾಸನ ಜಿಲ್ಲಾಧ್ಯಕ್ಷೆ ಪಾರ್ವತಿ, ಮೈಸೂರು ಜಿಲ್ಲಾ ಕಾರ್ಯದರ್ಶಿ ರೂಪ, ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.