ಮಡಿಕೇರಿ, ಜ. ೨೮: ನಗರಸಭೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ದನಗಳು ನಿರ್ಬಂಧವಿಲ್ಲದೆ ಓಡಾಡುತ್ತಿವೆ. ಇದರಿಂದ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಬೀಡಾಡಿ ಜಾನುವಾರುಗಳಿಂದ ರಸ್ತೆ ಅಪಘಾತಗಳು, ಜೀವಹಾನಿ ಹಾಗೂ ಆಸ್ತಿನಷ್ಟ ಸಂಭವಿಸುವ ಸಾಧ್ಯತೆ ಇದೆ.
ಆದ್ದರಿಂದ ಬೀಡಾಡಿ ದನಗಳಿಗೆ ಸಂಬAಧಿಸಿದ ವಾರಸುದಾರರು ದನ/ ಹಸುಗಳನ್ನು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದನ್ನು ತಕ್ಷಣವೆ ನಿಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಸಂಬAಧಿಸಿದ ವಾರಸುದಾರರ ವಿರುದ್ಧ ಬಿಎನ್‌ಎಸ್ ೨೦೨೩ ಸೆಕ್ಷನ್ ೨೯೧ ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಇದು ಕಡ್ಡಾಯ ಆದೇಶವಾಗಿದ್ದು ಸಾರ್ವಜನಿಕ ಸುರಕ್ಷಿತ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಹೆಚ್.ಆರ್. ರಮೇಶ್ ಅವರು ಕೋರಿದ್ದಾರೆ.