ವೀರಾಜಪೇಟೆ, ಜ. ೨೯: ಹಲವು ಸಂಸ್ಕೃತಿಯ ನೆಲೆಬೀಡಾಗಿರುವ ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ದೇಶ. ಭವ್ಯ ಪರಂಪರೆಯ ಉಳಿವಿಗಾಗಿ ಹಿಂದೂ ಬಾಂಧವರು ಒಂದಾಗಬೇಕು ಎಂದು ಮಂಗಳೂರು ವಿಭಾಗ ಸಹ ಪ್ರಾಂತ ಕಾರ್ಯವಾಹ ಸುಬ್ರಮಣ್ಯ ಬರಣಿಕೆರೆ ಕರೆ ನೀಡಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ವೀರಾಜಪೇಟೆ ತಾಲೂಕು ಹಾಗೂ ಕಾಕೋಟುಪರಂಬು ಮಂಡಲದ ವತಿಯಿಂದ ಕಾಕೋಟುಪರಂಬು ಮೈದಾನದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸುಬ್ರಮಣ್ಯ ಅವರು, ಸನಾತನ ಧರ್ಮ ಬಹು ಇತಿಹಾಸ ಹೊಂದಿರುವ ಸಂಸ್ಕೃತಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ತಂತ್ರಜ್ಞಾನದ ಪರಿಕಲ್ಪನೆಯನ್ನು ಹೊಂದಿದ್ದರು. ಅಂದು ಹೊಂದಿದ್ದ ಪರಿಕಲ್ಪನೆ ಇಂದು ಆಧುನಿಕ ಭಾರತದ ಚಿತ್ರಣದಲ್ಲಿ ಹೊಸ ಭಾಷ್ಯ ಬರೆದಿದೆ. ಮಹಾಭಾರತ, ರಾಮಾಯಣ ಭಾರತದಲ್ಲಿ ವಿಶ್ವವ್ಯಾಪಿಯಾಗಿದೆ. ವಿಶ್ವದ ಕೆಲವು ಮುಸ್ಲಿಂ ರಾಷ್ಟçಗಳು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ.
ಅನ್ಯಮತೀಯರು ವಿವಿಧತೆಯಲ್ಲಿ ಏಕತೆ ಕಂಡ ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಸನಾತನ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.
ಇಂತಹ ಸಂಸ್ಕತಿಯನ್ನು ಹೊಂದಿರುವ ನಾವುಗಳು ಜಾತಿ ವ್ಯವಸ್ಥೆಯಲ್ಲಿ ಹಂಚಿಹೋಗಿದ್ದೇವೆ. ರಾಜಕೀಯ ಬೇಳೆ ಬೇಯಿಸಲು ಜಾತಿ ಎಂಬ ಅಸ್ತçವನ್ನು ಬಳಸಿ ಒಡೆದು ಆಳುವ ಪದ್ದತಿ ಅನುಸರಿಸಿಕೊಂಡು ಬಂದಿರುವುದು ನೋವಿನ ವಿಷಯ. ಸ್ಮಶಾನ, ದೇಗುಲ, ಜಲ, ನೆಲೆಕ್ಕೆ ತೆರಳುವುದಕ್ಕೆ ವಿರೋಧ ವ್ಯಕ್ತಪಡಿಸದೆ ನಾವೆಲ್ಲ ಒಂದು-ನಾವೆಲ್ಲ ಹಿಂದೂ ಎಂಬAತೆ ಒಗ್ಗಟ್ಟಿನ ಮಂತ್ರ ಪಠಣವಾಗಬೇಕು. ಈ ನಿಟ್ಟಿನಲ್ಲಿ ಹಿಂದೂಗಳ ಸಂಗಮದೊAದಿಗೆ ಜಾಗೃತ ಹಿಂದೂ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಸನಾತನ ಧರ್ಮ ಉಳಿವಿಗಾಗಿ ಧೀಮಂತ ಸಂಸ್ಕೃತಿ, ಸಂಸ್ಕಾರ ಉಳಿವಿಗಾಗಿ ಹೋರಾಟದ ಮೂಲಕ ರಾಷ್ಟಿçÃಯ ಸ್ವಯಂ ಸೇವಕ ಸಂಘ ಶತಪ್ರಯತ್ನದೊಂದಿಗೆ ೧೦೦ ವರ್ಷಗಳನ್ನು ಪೂರೈಸಿದೆ. ಹಿಂದೂ ಧರ್ಮ ಉಳಿವಿಗಾಗಿ ಸಹಸ್ರಾರು ಮಂದಿ ತ್ಯಾಗ ಬಲಿದಾನಗಳÀÀನ್ನು ಮಾಡಿದ್ದಾರೆ. ಹಿಂದೂ ಧರ್ಮದ ವಿವಿಧ ಜಾತಿಗಳ ಮಧ್ಯೆ ಸಾಮರಸ್ಯ ಬಾಂಧÀವ್ಯ ಬೆಸೆಯಲು ಇಂದಿಗೂ ಶ್ರಮಿಸುತ್ತಿದೆ. ನೂರಾರು ವರ್ಷಗಳು ಪರಿಕೀಯರು ಭಾರತದ ಸಂಸ್ಕೃತಿಯ ಮೇಲೆ ದಾಳಿಯಾದರೂ ಸಂಸ್ಕೃತಿ ನಶಿಸಿಲ್ಲ. ಒಳನುಸಳುವಿಕೆ, ಜಾತಿಜಾತಿಗಳ ಮಧ್ಯೆ ಕಂದಕ ನಿರ್ಮಾಣ, ಉಗ್ರವಾದಿತ್ವ, ಲವ್ ಜಿಹಾದ್‌ನಂತಹ ಕ್ರೂರಿ ಕೃತ್ಯಗಳನ್ನು ದೇಶದಲ್ಲಿ ಹರಡಿ ನುಚ್ಚುನೂರು ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ಧರ್ಮ ವಿರೋಧಿ ಚಟುವಟಿಕೆಗಳ ವಿರುದ್ಧ ಹೋರಾಟ ಮಾಡಲು ಸರ್ವ ಹಿಂದೂಗಳು ಒಂದಾಗಬೇಕು, ಭವ್ಯ ಹಿಂದೂ ರಾಷ್ಟç ನಿರ್ಮಾಣ ಮಾಡುವತ್ತ ನಮ್ಮ ಗುರಿ ಎಂದು ಎದೆತಟ್ಟಿ ಹೇಳುವಂತಾಗಲು ಹಿಂದೂ ಸಂಗಮದ ಆಯೋಜನೆಯಾಗಿದೆ ಎಂದು ಹೇಳಿದರು. ವೀರಾಜಪೇಟೆ ತಾಲೂಕು ಸಂಚಾಲಕ ಕುಪ್ಪಂಡ ರಾಜು ಕಾರ್ಯಪ್ಪ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಂಘ ಕಾರ್ಯಕರ್ತರರಾದ ಚರ್ಮಂಡ ಅಪ್ಪುಣು ಉಪಸ್ಥಿತರಿದ್ದರು.
ಕಟ್ಟೇರ ಮೊಟ್ಟೆಯಿಂದ ಆರಂಭವಾದ ಶೋಭಾಯಾತ್ರೆ ಕಾಕೋಟುಪರಂಬು ಮೈದಾನದಲ್ಲಿ ಕೊನೆಗೊಂಡಿತ್ತು. ಶೋಭಾಯತ್ರೆಯಲ್ಲಿ ಕಾಕೋಟುಪರಂಬು ವ್ಯಾಪ್ತಿಯ ನಾಲ್ಕು ಗ್ರಾಮಗಳ ಮಹಿಳೆಯರು ಸೇರಿದಂತೆ ಹಿಂದೂ ಬಾಂಧವರು ಭಾಗವಹಿಸಿದ್ದರು. ಅಮ್ಮಂಡಿರ ಗಣಪತಿ, ಕುಂಞÂರ ಭೀಮಯ್ಯ, ಚಂಬಾAಡ ಅಪ್ಪಚ್ಚು ಸೇರಿದಂತೆ ಹಿಂದೂ ಸಂಗಮ ಆಯೋಜನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.