ಶನಿವಾರಸಂತೆ, ಜ. ೨೮: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಬಸವನಹಳ್ಳಿ ಗ್ರಾಮ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ೪೫ ಲಕ್ಷ ರೂ.ವಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಐದು ಗ್ಯಾರೆಂಟಿಗಳನ್ನು ಜನರಿಗೆ ತಲುಪಿಸುತ್ತಿರುವ ಜೊತೆಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ಸರಕಾರ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಲೂರು ಸಿದ್ದಾಪುರ ವಲಯ ಅಧ್ಯಕ್ಷಎಂ.ವಿ.ಅಶೋಕ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಾಜಮ್ಮ ರುದ್ರಯ್ಯ, ಪ್ರಮುಖರಾದ ಲೀಲಾದಾಸ್, ಕೋಮರಪ್ಪ, ಕೆ.ಎನ್. ದಿನೇಶ್, ಸೋಮವಾರಪೇಟೆ ಅಕ್ರಮ ಸಕ್ರಮ ಸದಸ್ಯ ಜನಾರ್ಧನ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಂದೀಪ್ ಇಂಜಿನಿಯರ್ ಕೀರ್ತನ್, ಶಿವಪ್ಪ, ಚೇತನ್, ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಗ್ರಾಮದ ನೂರಾರು ಸಾರ್ವಜನಿಕರು ಸೇರಿದಂತೆ ಇತರರಿದ್ದರು.