ಸೋಮವಾರಪೇಟೆ, ಜ. ೨೯: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದಿAದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ಆಯೋಜಿಸಿದ್ದ ೩೯ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟದಲ್ಲಿ ಆಕರ್ಷಕ ಆಟ ಪ್ರದರ್ಶಿಸಿದ ಸೋಮವಾರಪೇಟೆಯ ಸತ್ಯ ಸ್ಪೋರ್ಟ್ಸ್ ಕ್ಲಬ್, ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದ ಕೊನೆ ಕ್ಷಣದಲ್ಲಿ ಎಡವಿದ ರಾಮದೂತ ತಂಡ ದ್ವಿತೀಯ ಸ್ಥಾನ ಪಡೆಯಿತು. ಪ್ರಥಮ ಸ್ಥಾನ ಪಡೆದ ಸತ್ಯ ಸ್ಪೋರ್ಟ್ಸ್ ಕ್ಲಬ್ ೧೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ರಾಮದೂತ ತಂಡ ೮ ಸಾವಿರ ನಗದು ಹಾಗೂ ಟ್ರೋಫಿಗೆ ಭಾಜನವಾಯಿತು. ತೃತೀಯ ಸ್ಥಾನವನ್ನು ರೂ. ೫ ಸಾವಿರ ನಗದಿನೊಂದಿಗೆ ಟೋಫಿಯನ್ನು ಪಟ್ಟಣ ಪಂಚಾಯಿತಿಯ ಜೀವನ್ ಫ್ರೆಂಡ್ಸ್ ತಂಡ ಪಡೆಯಿತು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಸ್ಥಳೀಯ ಆಟಗಾರರನ್ನು ಒಳಗೊಂಡ ಕಬಡ್ಡಿ ಪಂದ್ಯಾಟದಲ್ಲಿ ಸೋಮವಾರಪೇಟೆಯ ಜಿಎಂಪಿ ಶಾಲೆ ಬಿ. ತಂಡ ಪ್ರಥಮ, ಓಎಲ್ವಿ ಶಾಲೆ ದ್ವಿತೀಯ, ಜಿ.ಎಂ.ಪಿ. ಶಾಲೆ ಎ. ತಂಡ ತೃತೀಯ ಸ್ಥಾನ ಪಡೆಯಿತು.
ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ, ಶನಿವಾರಸಂತೆಯ ವಾರಿರ್ಸ್ ದ್ವಿತೀಯ, ಸೋಮವಾರಪೇಟೆ ಸರ್ಕಾರಿ ಪಿಯು ಕಾಲೇಜು ತೃತೀಯ ಸ್ಥಾನ ಗಳಿಸಿತು.
ತಡರಾತ್ರಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಪ್ರಮುಖರಾದ ಗೌಡಳ್ಳಿ ಪೃಥ್ವಿ, ಪ್ರವೀಣ್, ಸಂತೋಷ್ ಅವರುಗಳು ಭಾಗವಹಿಸಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪದಾಧಿಕಾರಿಗಳಾದ ಜಗದೀಶ್, ರವೀಂದ್ರ, ಮಣಿಕಂಠ ಹೆಚ್.ಎನ್., ರಾಜಪ್ಪ, ಮಲ್ಲೇಶ್, ಎಸ್.ಆರ್. ರವಿ, ಎಂ. ನಾಗರಾಜು, ಅಜೇಯ ಸೇರಿದಂತೆ ಇತರರು ಇದ್ದರು.