ಮಡಿಕೇರಿ, ಜ. ೨೯: ರಾಜ್ಯ ಸರ್ಕಾರದ ದ್ವೇಷ ಭಾಷಣ ಮಸುದೆ ಕಾನೂನಾದರೆ ಜನತೆಯ ಮೇಲೆ ದುಷ್ಟರಿಣಾಮ ಬೀರಲಿದೆ ಎಂದು ಹಿರಿಯ ವಕೀಲ ಕೊಡಗಿನವರಾದ ಎಂ.ಟಿ. ನಾಣಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾಜ್ಯಪಾಲರಿಗೆ ಬೆಂಗಳೂರಿನ ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಮನವಿ ನೀಡಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು. ದ್ವೇಷ ಭಾಷಣ ಮಸೂದೆಯನ್ನು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಲೋಕಸಭೆಯಲ್ಲಿ ಮಂಡಿಸಿದ್ದರು. ರಾಜ್ಯ ಸಭೆಯಲ್ಲಿ ಚರ್ಚಿಸಿದ ಬಳಿಕ ಅದು ಲೋಕಸಭೆಗೆ ಬಂದಿತ್ತು. ಜನರು ಇದನ್ನು ತೀವ್ರವಾಗಿ ಖಂಡಿಸಿದ್ದ ಹಿನ್ನೆಲೆಯಲ್ಲಿ ಅದನ್ನು ಜಾರಿ ಮಾಡಿರಲಿಲ್ಲ ಅವರು ತಿಳಿಸಿದರು.

ಈ ಮಸೂದೆ ಕಾನೂನಾದರೆ ಬಹಳಷ್ಟು ಜನರಿಗೆ ತೊಂದರೆ ಆಗಲಿದೆ. ಸಾಂಸಾರಿಕ ಸಮಸ್ಯೆ, ನೆರೆಹೊರೆಯವರ ನಡುವಿನ ಗೊಂದಲದ ವಿಷಯದಲ್ಲೂ ತೊಂದರೆ ಸಂಭವಿಸಬಹುದು. ಕೆಟ್ಟ ಬಾಷೆ ಬಳಸಿದ ತಪ್ಪಿತಸ್ಥರಿಗೆ ಕನಿಷ್ಟ ೩ ವರ್ಷ ಶಿಕ್ಷೆ, ೫೦ ಸಾವಿರ ದಂಡ ವಿಧಿಸಲು ಸೂಚನೆ ಇದೆ. ಪ್ರಕರಣದ ತೀವ್ರತೆ ಹೆಚ್ಚಿದರೆ ೭ ವರ್ಷ ಶಿಕ್ಷೆ ಕೊಡುವ ಅವಕಾಶವೂ ಇದೆ. ಇದು ಪುನರಾವರ್ತನೆ ಆದರೆ ೧೦ ವರ್ಷ ಶಿಕ್ಷೆ ರೂ. ೧ ಲಕ್ಷ ದಂಡ ವಿಧಿಸಲು ಅವಕಾಶ ಇದ್ದು ಒಟ್ಟಾರೆ ಈ ಮಸೂದೆಯಿಂದ ತೀವ್ರ ದುಷ್ಟರಿಣಾಮ ಆಗಲಿದೆ ಎಂದು ತಿಳಿಸಿದರು.

ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಮಾತನಾಡಿ, ದ್ವೇಷ ಭಾಷಣ ಸಂಬAಧಿತ ಮಸೂದೆ ವಿರುದ್ಧ ರಾಜ್ಯಪಾಲರ ಬಳಿ ತಿಳಿಸಿ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ಈಚೆಗೆ ಜಾರಿಗೊಳಿಸಿದ ಬಿಎನ್‌ಎಸ್ ಅಧಿನಿಯಮದ ಅನೇಕ ಸೆಕ್ಷನ್‌ಗಳು ದ್ವೇಷ ಭಾಷಣದ ಕುರಿತು ಉಲ್ಲೇಖಿಸುತ್ತವೆ. ಕೇಂದ್ರ ಕಾನೂನಿನಲ್ಲಿ ಇದೆಲ್ಲ ಇದ್ದಾಗ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ಬೇಕೇ ಎಂದು ಪ್ರಶ್ನಿಸಿದರು. ವಕೀಲರಾದ ಹರಿರಾಮ್, ಲಕ್ಷಿö್ಮ ಅಯ್ಯಂಗಾರ್ ಅವರು ಮಾತನಾಡಿದರು.