ಸುಂಟಿಕೊಪ್ಪ, ಜ. ೨೯: ಮಿಡ್‌ಸಿಟಿ ಎಸ್.ಎಂ. ಸಂಘದ ವತಿಯಿಂದ ೩ನೇ ವರ್ಷದ ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿ ತಾ. ೩೦, ೩೧ ಹಾಗೂ ಫೆ. ೧ರಂದು ಸುಂಟಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು ೩೨ ತಂಡಗಳು ಸೆಣಸಾಡಲಿವೆ. ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ. ೨.೫ ಲಕ್ಷ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೧.೫ ಲಕ್ಷ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.