ಮಡಿಕೇರಿ, ಜ. ೨೯: ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಹೆಚ್ಚಿಸುವ ಕ್ರೀಡಾಕೂಟಗಳಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.

ಮೇಕೇರಿಯ ಎಂ.ಕೆ. ಕ್ರಿಕೆಟರ್ಸ್ ಮೇಕೇರಿಯ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೬ನೇ ವರ್ಷದ ಮೇಕೇರಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಗ್ರಾಮೀಣ ಕ್ರೀಡಾಕೂಟಗಳು ಯುವ ಜನತೆಯಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಈ ರೀತಿಯ ಕ್ರೀಡಾಕೂಟಗಳಿಗೆ ತಾವು ಸದಾ ಪ್ರೋತ್ಸಾಹ ನೀಡುವುದಾಗಿ ಹೇಳಿದರು.

ಕೆಪಿಸಿಸಿ ವಕ್ತಾರÀ ಎಂ.ಲಕ್ಷö್ಮಣ್ ಅವರು ಮಾತನಾಡಿ ಗ್ರಾಮೀಣ ಕ್ರೀಡೆಗಳು ಯುವ ಸಮೂಹವನ್ನು ಉತ್ತಮ ವ್ಯಕ್ತಿತ್ವದ ಹಾದಿಯತ್ತ ಕೊಂಡೊಯ್ಯುತ್ತದೆ. ಇಂತಹ ಕ್ರೀಡಾಕೂಟಗಳಿಗೆ ಮತ್ತು ಕ್ರೀಡಾ ಪ್ರತಿಭೆಗಳಿಗೆ ಸ್ಥಳೀಯ ಶಾಸಕ ಪೊನ್ನಣ್ಣ ಅವರು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಮೇಕೇರಿ ಗ್ರಾ.ಪಂ ಸದಸ್ಯ ಎಂ.ಯು.ಹನೀಫ್, ಅಭಿವೃದ್ಧಿ ಅಧಿಕಾರಿ ಸಿ.ಬಿ.ಮಮತ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಪಕ್ಷದ ಮಡಿಕೇರಿ ನಗರಾಧ್ಯಕ್ಷ ಪ್ರಕಾಶ್ ಆಚಾರ್ಯ, ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ, ಬೆಳೆಗಾರರಾದ ಬಾಳಾಡಿ ಪ್ರತಾಪ್ ಕುಮಾರ್, ಸಾಬು ತಿಮ್ಮಯ್ಯ, ಪ್ರಮುಖರಾದ ತೋರೆರ ಉದಯ, ಮಂದ್ರಿರ ನಾಗೇಶ್, ರಾಘವ, ಎಂ.ಯು.ರಫೀಕ್, ಹೆಚ್.ಸಿ.ಪೊನ್ನಪ್ಪ, ಡ್ಯಾನಿ, ಪುನೀತ್, ಧನುರೈ, ಅಶ್ರಫ್, ಸಾಕಿಬ್, ಹೀಮೇಶ್, ಪಿಯೂಷ್ ಪೆರೆರಾ, ಚೆಟ್ಟೋಳಿರ ಪ್ರಕಾಶ್, ಕಾರ್ಯಕ್ರಮದ ಆಯೋಜಕರು ಮತ್ತಿತರರು ಉಪಸ್ಥಿತರಿದ್ದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಬಾಲ್ ಮಾಡಿದ ಚೆಂಡನ್ನು ಶಾಸಕÀ ಎ.ಎಸ್.ಪೊನ್ನಣ್ಣ ಅವರು ಸತತ ಮೂರು ಬಾರಿ ಬೌಂಡರಿಗೆ ಅಟ್ಟುವ ಮೂಲಕ ಕ್ರೀಡಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿ ಚಪ್ಪಾಳೆ ಗಿಟ್ಟಿಸಿಕೊಂಡರು.