ಮಡಿಕೇರಿ, ಜ.೨೯ : ಮಡಿಕೇರಿ ಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಹಿಂದಿ ಸಹಚಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿಷ್ಟಪ್ಪ ಹನಮಂತಪ್ಪ ತಳವಾರ ಅವರಿಗೆ ಪಿ.ಹೆಚ್.ಡಿ ಪದವಿ ಲಭಿಸಿದೆ.ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ಪ್ರಾಧ್ಯಾಪಕರಾದ ಡಾ.ಸುಮಾ ಟಿ.ರೋಡನ್ನವರ ಅವರ ಮಾರ್ಗದರ್ಶನದಲ್ಲಿ ನಡೆದ ``ಸಮಕಾಲಿನ ಪ್ರಮುಖ ಹಿಂದಿ ದಲಿತ ಮಹಿಳಾ ಕಥಾ ಸಾಹಿತ್ಯ ಮೇ ವ್ಯಕ್ತ ದಲಿತ ವಿಮರ್ಶ’’ ಎಂಬ ವಿಷಯದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.ಹಿಂದಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಡಾ .ಬಿಷ್ಟಪ್ಪ ಹನಮಂತಪ್ಪ ತಳವಾರ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೂರ ಗ್ರಾಮದ ದ್ಯಾಮವ್ವ ಹಾಗೂ ದಿ. ಹನಮಂತಪ್ಪ ತಳವಾರ ದಂಪತಿಯ ಪುತ್ರ.