ಚೆಯ್ಯಂಡಾಣೆ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವೀರಾಜಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಮೇಲ್ವಿಚಾರಕಿ ಸುಮಯ್ಯ ಸಿಹಿ ವಿತರಿಸಿ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಸಿಬ್ಬಂದಿಗಳಾದ ಅನಿತ, ಕುಮಾರಿ, ಜ್ಯೋತಿ ಉಪಸ್ಥಿತರಿದ್ದರು.ಮಡಿಕೇರಿ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಸರ್ಕಾರಿ ನೌಕರರ ಬಳಕೆದಾರರ ಸಂಘದ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದಂದು ಧ್ವಜಾರೋಹಣವನ್ನು ಮುಖ್ಯ ಅತಿಥಿ ಹಾಗೂ ಹಿರಿಯ ಸದಸ್ಯ ಮೊಣ್ಣಂಡ ಸೋಮಯ್ಯ ಮಾಡಿದರು.

ಸಂಫದ ಅಧ್ಯಕ್ಷರಾದ ಬಿ.ಬಿ. ಮಾದಮ್ಮಯ್ಯ ಹಾಗೂ ಎರಡು ಸಂಘದ ಸದಸ್ಯರು ಹಾಜರಿದ್ದರು. ಹೆಚ್.ಆರ್. ಮುತ್ತಪ್ಪ, ಮುಖ್ಯ ಅತಿಥಿ ಹಾಗೂ ಅಧ್ಯಕ್ಷರು ದಿನದ ಮಹತ್ವದ ಬಗ್ಗೆ ಮಾತನಾಡಿದರು.ಸೋಮವಾರಪೇಟೆ: ೭೭ನೇ ವರ್ಷದ ಗಣರಾಜ್ಯೋತ್ಸವವನ್ನು ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಆಚರಿಸಲಾಯಿತು. ಸರ್ಕಾರಿ ಇಲಾಖೆಗಳು, ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜುಗಳು, ಸಂಘ-ಸAಸ್ಥೆಗಳ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟç ಧ್ವಜಾರೋಹಣ ನೆರವೇರಿತು.ಮಾಜಿ ಸೈನಿಕರ ಸಂಘ: ಪಟ್ಟಣದ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಕಚೇರಿ ಎದುರು ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಎನ್.ಜಿ. ಕೆಂಪಯ್ಯ, ಪದಾಧಿಕಾರಿಗಳಾದ ಮಂಜುನಾಥ್, ಸುಕುಮಾರ್, ಎನ್.ಕೆ. ಲಿಂಗಪ್ಪ, ಎಸ್.ಎಂ. ಸುಬ್ರಮಣಿ, ಚಂದ್ರಕುಮಾರ್ ಸೇರಿದಂತೆ ಇತರರು ಇದ್ದರು.ಕುಶಾಲನಗರ: ಕುಶಾಲನಗರ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಸುಬೇದಾರ್ ಮೇಜರ್ ಎಸ್.ಆರ್. ಮಾದಪ್ಪ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿದರು.

ಈ ಸಂದರ್ಭ ಉಪಾಧ್ಯಕ್ಷ ಸುಬೇದಾರ್ ಎ.ಕೆ. ರಂಜಿತ್, ಕಾರ್ಯದರ್ಶಿ ಎಂ.ಎಸ್. ಕರುಂಬಯ್ಯ, ಖಜಾಂಚಿ ಹವಾಲ್ದಾರ್ ಜೆ.ಪಿ. ನರೇಶ್ ಮತ್ತು ಸಂಘದ ಸದಸ್ಯರುಗಳು ಇದ್ದರು.ನಾಪೋಕ್ಲು: ಇಲ್ಲಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವತಿಯಿಂದ ಗಣರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕ ಪ್ರೊ. ಕಲ್ಯಾಟಂಡ ಪೂಣಚ್ಚ ಧ್ವಜಾರೋಹಣವನ್ನು ನೆರವೇರಿಸಿ, ವಿದ್ಯಾರ್ಥಿಗಳಿಂದ ಧ್ವಜವಂದನೆಯನ್ನು ಸ್ವೀಕರಿಸಿದರು. ನಂತರ ಎನ್‌ಸಿಸಿ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಪೂಣಚ್ಚ ಸಂವಿಧಾನದ ಆಶಯ, ಭದ್ರತೆಯ ಕುರಿತು ಮಾತನಾಡಿದರು. ಪ್ರಾಂಶುಪಾಲರಾದ ಬಿ.ಎಂ. ಶಾರದಾ, ಶಿಕ್ಷಕಿ ಎಂ.ಎ. ಲೀಲಾವತಿ ದಿನದ ಮಹತ್ವದ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಚೌರಿರ ಮಂದಣ್ಣ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿದ್ಯಾರ್ಥಿ ಜೀವನ್ ಎಂ.ಹೆಚ್. ಸ್ವಾಗತಿಸಿ, ಸೋನಾಲ್ ಕೆ.ಪಿ. ವಂದಿಸಿದರು.ಅAಚೆ ಕಚೇರಿ: ಸೋಮವಾರಪೇಟೆಯ ಮುಖ್ಯ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾದ ಪ್ರಭಾವತಿ ಧ್ವಜಾರೋಹಣ ನೆರವೇರಿಸಿ, ದಿನದ ಮಹತ್ವದ ಬಗ್ಗೆ ಮಾತನಾಡಿದರು. ಅಂಚೆ ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.ಶನಿವಾರಸಂತೆ: ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅಚರಿಸಲಾಯಿತು. ಶಾಲಾ ಆವರಣದಲ್ಲಿ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ನಿರ್ಮಿಸಿದ ರೆಡ್ ಫೋರ್ಟ್, ಇಂಡಿಯಾ ಗೇಟ್, ಪಥಸಂಚಲನ, ವೈಮಾನಿಕ ಪ್ರದರ್ಶನದ ಕೃತಕ ಮಾದರಿಗಳು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತ್ತು. ಮಕ್ಕಳು ಇಂಡಿಯಾ ಗೇಟ್‌ನಿಂದ ಕೆಂಪು ಗೇಟ್‌ವರೆಗೆ ಪಥಸಂಚಲನ ನಡೆಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪಂಕಜಾ ರಾಷ್ಟç ಧ್ವಜಾರೋಹಣ ನೇರವೇರಿಸಿ ಶುಭ ಕೋರಿದರು. ಶಾಲೆಯ ಶಿಕ್ಷಕ ಜಾನ್ ಪ್ಲಾವ್ ಡಿಸೋಜ ಪ್ರಾಸ್ತಾವಿಕ ನುಡಿಯಾಡಿ, ಸಂವಿಧಾನವೇ ಒಂದು ಪ್ರತ್ಯೇಕ ವಿಷಯವಾಗಿದ್ದು, ವಿದ್ಯಾರ್ಥಿಗಳು ಅದನ್ನು ಕಲಿಯುವ ಮೂಲಕ ಒಬ್ಬ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಹೇಳಿದರು.

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶಾಲೆಯ ೧೧ ಮಕ್ಕಳು ಪ್ರಥಮ, ೫ ಮಕ್ಕಳು ದ್ವಿತೀಯ ಹಾಗೂ ಮೂವರು ತೃತೀಯ ಬಹುಮಾನ ಪಡೆದಿದ್ದು, ಕರಾಟೆ ಶಿಕ್ಷಕಿ ಶಾಲೆಗೆ ನೆನಪಿನ ಕಾಣಿಕೆ ನೀಡಿದರು. ಶಿಕ್ಷಕಿ ಶೀಲಾ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಮಕ್ಕಳು ಪಥಸಂಚಲನ, ದೇಶಭಕ್ತಿಗೀತೆ, ಭಾಷಣ, ನೃತ್ಯ ಪ್ರದರ್ಶಿಸಿ ರಂಜಿಸಿದರು.

ಗಣರಾಜ್ಯೋತ್ಸವ ಸಮಾರಂಭ ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿಯ ಅರಿವು ಮೂಡಿಸಿದ ವೇದಿಕೆಯಾಗಿ ಪೋಷಕರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.ವೀರಾಜಪೇಟೆ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್

ವೀರಾಜಪೇಟೆ: ವೀರಾಜ ಪೇಟೆಯ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಣರಾಜ್ಯೋತ್ಸವವನ್ನು ವೀರಾಜ ಪೇಟೆಯಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶದ ಐಕ್ಯತೆ, ಸಮಗ್ರತೆ, ಸ್ವಾತಂತ್ರ‍್ಯ ಹಾಗೂ ಸಮಾನತೆ, ಸಹೋದರತೆಯನ್ನು ಸಾರುವ ಸಂವಿಧಾನವು ಸಮಸ್ತ ಭಾರತೀಯರ 'ಧರ್ಮಗ್ರಂಥ'ವಿದ್ದAತೆ. ಸ್ವಾತಂತ್ರ‍್ಯ ಪೂರ್ವದಲ್ಲಿ ದೇಶದ ಸ್ವತಂತ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರನ್ನು ಗೌರವಿಸುವುದೇ ಅಲ್ಲದೆ ದೇಶದಲ್ಲಿ ಶಾಂತಿ-ಸAಯಮ, ಸೌಹಾರ್ದತೆ ಪ್ರತಿಯೊಬ್ಬರ ದ್ಯೇಯವಾಗಿರಬೇಕು. ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರುವ ಜನಪರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಅತಿಥಿಗಳಾಗಿ ವೀರಾಜಪೇಟೆ ಪುರಸಭೆಯ ಮಾಜಿ ಸದಸ್ಯ ಎಸ್.ಹೆಚ್. ಮತೀನ್, ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಮಾಜಿ ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿ, ಟ್ರಸ್ಟ್ ಅಧ್ಯಕ್ಷ ಆಲಿರ ಬವುಸ್ಮಾನ್, ಉಪಾಧ್ಯಕ್ಷರಾದ ಸಿ.ಕೆ. ರಿಯಾಜ್, ಕೆ.ಟಿ. ಅಲ್ತಾಫ್, ರಿಜ್ವಾನ್, ಸಾಜಿ, ಟ್ರಸ್ಟಿಗಳು ಉಪಸ್ಥಿತರಿದ್ದರು.

ಸಾರ್ವಜನಿಕರು, ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಂದ ಪಥಸಂಚಲನ ಹಾಗೂ ಧ್ವಜವಂದನೆ ನಡೆಸಲಾಯಿತು. ಈ ವೇಳೆ ಕೊಡವ ಅಕಾಡೆಮಿ ಅಧ್ಯಕ್ಷರನ್ನು ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.ಕೊಡ್ಲಿಪೇಟೆ ಭಾಗದಲ್ಲಿ: ಕೊಡ್ಲಿಪೇಟೆ ಭಾಗದಲ್ಲಿ ವಿವಿಧ ಸಂಘ ಸಂಸ್ಥೆಗಳಿAದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕೊಡ್ಲಿಪೇಟೆಯ ಹ್ಯಾಂಡ್‌ಪೋಸ್ಟ್ನಲ್ಲಿರುವ ತಜಲ್ಲಿಯಾತ್ ಅರಬಿಕ್ ಮದ್ರಸದಲ್ಲಿ ನಡೆದ ಗಣರಾಜೋತ್ಸವದಲ್ಲಿ ಜುಮ್ಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಅಬೂಬಕ್ಕರ್ ಸಿದ್ದೀಕ್ ಹಾಜಿ ಧ್ವಜಾರೋಹಣ ನೆರವೇರಿಸಿದರು.

ಮದ್ರಸ ಅಧ್ಯಾಪಕ ಜಹೀರ್ ನಿಝಾಮಿ ಮತ್ತು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್ ಗಣರಾಜೋತ್ಸವ ದಿನದ ಕುರಿತು ವಿವರಿಸಿದರು. ರಜಾಕ್ ಫೈಝಿ, ಸ್ವಾಲಿಹ್ ರಹ್ಮಾನಿ, ಸಮೀರ್ ಸಖಾಫಿ, ಮುಸ್ತಫ ಮುಸ್ಲಿಯಾರ್, ಆಡಳಿತ ಸಮಿತಿ ಉಪಾಧ್ಯಕ್ಷ ಸುಲೈಮಾನ್ ಸೇರಿದಂತೆ ಇತರರು ಇದ್ದರು.ವಿಎಸ್‌ಎಸ್‌ಎನ್: ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕಾಫಿ ಮಂಡಳಿ ಸೋಮವಾರಪೇಟೆ ಇವರ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ಬಿ. ಸೋಮಯ್ಯ ಧ್ವಜಾರೋಹಣ ನೇರವೇರಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಹೆಚ್.ಕೆ. ಚಂದ್ರಶೇಖರ್ ಹಾಗೂ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳು, ಕಾಫಿ ಮಂಡಳಿ ಅಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ: ಕಂಡAಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗಣಪತಿ ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಹಾಗೂ ಸಾಮೂಹಿಕ ಕವಾಯತು ಪ್ರದರ್ಶನ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ನಾಸಿರ್, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರು ಗಣರಾಜ್ಯೋತ್ಸವದ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಾಜಿ ಸೈನಿಕ ಹಾಗೂ ಕ್ರೀಡಾ ಸಮಿತಿಯ ಮಾಜಿ ಅಧ್ಯಕ್ಷ ಕೊಂಗAಡ ಡಬ್ಲೂ÷್ಯ. ಭೀಮಯ್ಯ ಅವರು ಮಾತನಾಡಿ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಇದೇ ಸಂದರ್ಭ ಶಾಲೆಯ ಅಭಿವೃದ್ಧಿಗೆ ನೆರವಾದ ದಾನಿಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ, ದಾನಿಗಳಾದ ಕೊಲತಂಡ ಸುಬ್ರಮಣಿ, ತೋರೆರ ಅಯ್ಯಪ್ಪ, ತೋರೆರಾ ನಳಿನಿ, ಅಪ್ಪಂಡೆರAಡ ಕಾಳಪ್ಪ, ಮೂಕಚಂಡ ಕಾವೇರಮ್ಮ, ಕೊಟ್ರಂಡ ರೋಹಿಣಿ, ಮುಲ್ಲೇಂಗಡ ಸುರೇಶ್ ಭೀಮಯ್ಯ, ಕೊಂಗAಡ ಪ್ರಥ್ಯು ಚೀಯಣ್ಣ ಹಾಗೂ ಮುಲ್ಲೆಂಗಡ ಮಧೂಷ್ ಪೂವಯ್ಯ, ನೆರೆಯ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕರಾದ ಪವೀನ ಎ.ಟಿ. ವಾರ್ಷಿಕ ವರದಿ ವಾಚಿಸಿದರು. ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಪುಟಾಣಿ ಮಕ್ಕಳಿಂದ ವೈವಿಧ್ಯಮಯ ಪ್ರದರ್ಶನಗಳು ಜರುಗಿದವು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಲಕ್ಷಿ÷್ಮ ಎಂ., ಸಹ ಶಿಕ್ಷಕ ದೇವರಾಜ್ ಬಿ.ಟಿ. ಅತಿಥಿ ಶಿಕ್ಷಕಿಯರಾದ ಶರಣ್ಯ ಮತ್ತು ಪೂರ್ಣಿಮಾ ಕಾರ್ಯಕ್ರಮ ಪೋಷಕರು, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಕಡAಗ: ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಜಿ ಸೈನಿಕ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಸಲಾಂ ರಾಷ್ಟç ಧ್ವಜಾರೋಹಣ ನೆರವೇರಿಸಿದರು.

ಪಂಚಾಯಿತಿ ಸದಸ್ಯ ಸುಬೀರ್ ಶುಭ ಹಾರೈಸಿದರು. ದಾನಿಗಳಾದ ಕೆ. ಪ್ರಕಾಶ್ ಮಾತನಾಡಿ, ಭಾರತ ಸಂವಿಧಾನ ನೀಡಿರುವ ಹಕ್ಕುಗಳು ಹಾಗೂ ಕರ್ತವ್ಯಗಳ ಮಹತ್ವವನ್ನು ವಿವರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಷಣ, ದೇಶಭಕ್ತಿ ಗೀತೆ, ಪ್ರತಿಜ್ಞಾ ವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಿಕ್ಷಕಿ ಸೈಬುನಿಸ್ಸಾ ದಿನದ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ವತ್ಸಲಾ ಪ್ರಾಸ್ತಾವಿಕ ನುಡಿ, ನಿರೂಪಣೆಯನ್ನು ಬಬಿತಾ ನಡೆಸಿದರು. ಶೋಭಾ ವಂದಿಸಿದರು. ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷೆ ಭವ್ಯಶ್ರೀ, ಸದಸ್ಯ ಗಫೂರ್, ಆಯುಷ್ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಅಲ್ಲದೆ ಶಾಲೆ ವತಿಯಿಂದ ದತ್ತಿನಿಧಿ ಬಹುಮಾನ ವಿತರಣೆ ನಡೆಯಿತು.ಸಂಪಾಜೆ: ಗಣರಾಜ್ಯೋತ್ಸವ ಪ್ರಯುಕ್ತ ಕೊಯನಾಡಿನ ಮಹಾಗಣಪತಿ ದೇವಸ್ಥಾನದ ಬಳಿ ಗಣೇಶ್ ಯುವ ಬಳಗ ಹಾಗೂ ಸಾರ್ವಜನಿಕರಿಂದ ಶ್ರಮದಾನ ನಡೆಯಿತು.

ಕೊಯನಾಡಿನಿಂದ - ಚಿಟ್ಟೆಕಾನ ಬಸ್ ತಂಗುದಾಣದವರೆಗೆ ಶುಚಿತ್ವ ಹಾಗೂ (ಪೈಂಟಿAಗ್) ಬಣ್ಣ ಬಳಿಯುದರೊಂದಿಗೆ ಮತ್ತು ನಾಮಫಲಕ ಅಳವಡಿಸುವುದರಲ್ಲಿ ಸದಸ್ಯರು ಪಾಲ್ಗೊಂಡಿದ್ದರು.