ಚೆಯ್ಯಂಡಾಣೆ, ಜ. ೩೦: ಕೇರಳ ರಾಜ್ಯದ ಪಯ್ಯವೂರ್‌ನಿಂದ ಕೋಮರತಚ್ಚನ್ ದೈವ ಜಿಲ್ಲೆಗೆ ಆಗಮಿಸಿತು. ಮುಂಡಿಯ್ಯೋಳAಡ ತಕ್ಕ ಮುಖ್ಯಸ್ಥರು ಕೋಮರತಚ್ಚನ್ ದೈವವನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಬೋವ್ವೇರಿಯಂಡ ಐನ್‌ಮನೆಗೆ ತೆರಳಿತು.
ಮುಂದಿನ ದಿನಗಳಲ್ಲಿ ಕೊಕೇರಿ ಗ್ರಾಮದ ಚೆರುವಾಳಂಡ, ಬಿದ್ದಂಡ, ಮೂಡೇರ, ಮಚ್ಚಂಡ, ಪೆಮ್ಮಂಡ ಐನ್‌ಮನೆ ಹಾಗೂ ಕೊಕೇರಿ ಭಗವತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಕಿರುಂದಾಡು ಮಚ್ಚಂಡ ಐನ್‌ಮನೆ, ಕೈಕಾಡು ನಾಯಕಂಡ, ಪಾಡೇಯಂಡ, ಅಪ್ಪನೆರವಂಡ ಐನ್‌ಮನೆಗೆ ತೆರಳಿ ತೋರೆರ ಐನ್‌ಮನೆ, ಚೇರಂಬಾಣೆಯ ಬೈಮನ, ಬಲಮುರಿ ಭಗವತಿ ದೇವಸ್ಥಾನ, ಚೆಯ್ಯಂಡ, ಬೊಳ್ತಂಡ, ಬೆಲ್ಲತಂಡ, ಅರಪ್ಪಟ್ಟು ಗ್ರಾಮದ ಪಾಂಡAಡ, ಕರಡ ಗ್ರಾಮದ ನಡಿಕೇರಿಯಂಡ, ಐತಿಚಂಡ, ಪಾಲಂಗಾಲ ಗ್ರಾಮದ ಕರಿನೆರವಂಡ, ನರಿಯಂದಡ ಗ್ರಾಮದ ಪೊಕ್ಕುಳಂಡ್ರ ಐನ್‌ಮನೆಗೆ ತೆರಳಿ, ಬೊವ್ವೇರಿಯಂಡ ಐನ್‌ಮನೆಗೆ ಬಂದು ಧಾರ್ಮಿಕ ಕಾರ್ಯ ನೆರವೇರಿಸಿ ನಂತರ ಚೇಲಾವರದ ಪಟ್ಟಚೆರುವಂಡ ಐನ್‌ಮನೆಗೆ ತೆರಳಿ ಅಲ್ಲಿಂದ ಚೇಲಾವರ ಪೊನ್ನೋಲ ದೇವಸ್ಥಾನದಲ್ಲಿ ಉಳಿದು ಫೆಬ್ರವರಿ ೯ ರಂದು ಬೆಳ್ಳಿಗೆ ಕಾಲ್ನಡಿಗೆಯ ಮುಖಾಂತರ ಚೇಲಾವರದಿಂದ ಕಾಡುದಾರಿಯಲ್ಲಿ ಕೇರಳ ರಾಜ್ಯದ ಪಯ್ಯವೂರ್‌ಗೆ ದೈವ ತೆರಳಲಿದೆ.