ಕೂಡಿಗೆ, ಜ. ೩೦: ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆಯ ಸೂಚನೆಯಂತೆ ಹುದುಗೂರು ಉಪವಲಯ ಅರಣ್ಯಾಧಿಕಾರಿ ತಂಡವು ಹುದುಗೂರು, ಯಡವನಾಡು, ಕಾಜೂರು ಬಸವನ ಕಲ್ಲು ಮೀಸಲು ಅರಣ್ಯ ವ್ಯಾಪ್ತಿಯ ಸೋಮವಾರಪೇಟೆ ಮುಖ್ಯ ರಸ್ತೆ ಮತ್ತು ಸೋಮವಾರಪೇಟೆ ಕುಶಾಲನಗರ ರಸ್ತೆಯ ಅಂಚಿನಲ್ಲಿ ಬೆಂಕಿರೇಖೆ ಗುರುತಿಸಿದೆ. ಆ ಭಾಗದಲ್ಲಿ ಗಿಡಗಂಟೆಗಳನ್ನು ಕಡಿದು ಸುಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ವಹಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿದ್ದಾರೆ. ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ಹುದುಗೂರು ಉಪವಲಯ ಅರಣ್ಯಾಧಿಕಾರಿ ಲೋಹಿತ್ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.