ಕೋವರ್‌ಕೊಲ್ಲಿ ಇಂದ್ರೇಶ್

ನವದೆಹಲಿ, ಜ. ೩೦: ಭಾರತ ಮತ್ತು ಯುರೋಪ್ ಮಧ್ಯೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಈಡಿee ಖಿಡಿಚಿಜe ಂgಡಿeemeಟಿಣ) ಸಹಿ ಬಿದ್ದಿದೆ. ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದಿAದ ಭಾರತವು ತನ್ನ ಜಾಗತಿಕ ವ್ಯಾಪಾರ ಒಪ್ಪಂದಗಳಲ್ಲಿ ವ್ಯೂಹಾತ್ಮಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಎಲ್ಲಾ ಒಪ್ಪಂದಗಳ ತಾಯಿ ಎಂದು ಕರೆಯಲ್ಪಡುವ ಈ ಒಪ್ಪಂದಿAದಾಗಿ ಭಾರತದ ರಾಜ್ಯಗಳಿಗೆ ಸಹಾಯವಾಗಲಿದೆ.

ಒಂದೆಡೆ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅತ್ಯಂದ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೇರಿಕದ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ತೆರಿಗೆ ಭಯ ಸೃಷ್ಟಿಸಿ ಬೆದರಿಸುವ ತಂತ್ರಕ್ಕೆ ಸೆಡ್ಡು ಹೊಡೆದ ಮೋದಿ ಸರ್ಕಾರ ಯೂರೋಪಿಯನ್ ಯೂನಿಯನ್ ಜತೆ ಮಹತ್ವದ ಒಪ್ಪಂದ ಮಾಡಿಕೊಂಡು ದೇಶವನ್ನೇ ಬೆರಗುಗೊಳಿಸಿದೆ. ಈ ಒಪ್ಪಂದದಲ್ಲಿ ಭಾರತ ಮತ್ತು ೨೭ ಯೂರೋಪಿಯನ್ ರಾಷ್ಟ್ರಗಳು ಪ್ರಯೋಜನ ಪಡೆಯಲಿದ್ದು ೨೦೦ ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ. ಇದರಿಂದ ೬.೪ ಲಕ್ಷ ಕೋಟಿ ರೂಪಾಯಿಗಳ ರಫ್ತಿಗೆ ಹೊಸ ದಾರಿ ಸೃಷ್ಟಿಸಿದಂತೆ ಆಗಿದೆ.

ಇದರಿಂದ ಮುಖ್ಯವಾಗಿ ಭಾರತದಿಂದ ಯೂರೋಪಿಗೆ ರಫ್ತಾಗುವ ಎಂಜಿನಿಯರಿAಗ್ ಗೂಡ್ಸ್, ಎಲೆಕ್ಟ್ರಾನಿಕ್ಸ್, ಫಾರ್ಮಾಸ್ಯುಟಿಕಲ್ಸ್ ಮೆಡಿಕಲ್ ಡಿವೈಸ್‌ಗಳು, ಕೆಮಿಕಲ್ಸ್, ಟೆಕ್ಸ್ಟೈಲ್ಸ್ ಮತ್ತು ಅಪಾರೆಲ್ಸ್ ಬೆಲೆ ಇಳಿಕೆಯಾಗಲಿದೆ ಮತ್ತು ರಫ್ತು ಹೆಚ್ಚಾಗಲಿದೆ. ಜವಳಿ ಮತ್ತು ಉಡುಪುಗಳು, ಎಂಜಿನಿಯರಿAಗ್ ಸರಕುಗಳು, ಔಷಧಗಳು ವೈದ್ಯಕೀಯ ಸಾಧನಗಳು, ಎಲೆಕ್ಟ್ರಾನಿಕ್ಸ್, ರತ್ನಗಳು ಮತ್ತು ಆಭರಣಗಳು, ರಾಸಾಯನಿಕಗಳು, ಸಾಗರ ಉತ್ಪನ್ನಗಳು, ಚರ್ಮ ಮತ್ತು ಪಾದರಕ್ಷೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್, ಚಹಾ ಮಸಾಲೆಗಳು, ಪೀಠೋಪಕರಣಗಳು, ಕರಕುಶಲ ವಸ್ತುಗಳು, ಖನಿಜಗಳು, ಕ್ರೀಡಾ ಸಾಮಗ್ರಿಗಳು, ಕೃಷಿ ಉತ್ಪನ್ನ ಉದ್ಯಮಗಳಿಗೆ ಸಹಕಾರಿಯಾಗಲಿದೆ.

ಈ ಒಪ್ಪಂದದಿAದ ಭಾರತದ ಕೃಷಿ ಉತ್ಪನ್ನಗಳಿಗೆ ಯೂರೋಪ್ ಒಕ್ಕೂಟದ ೨೭ ರಾಷ್ಟ್ರಗಳಲ್ಲಿ ಆಮದು ಸುಂಕ ವಿಧಿಸುವುದಿಲ್ಲ ಇದರಿಂದ ಉತ್ಪನ್ನಗಳ ದರ ಕಡಿಮೆ ಆಗಿ ಬಳಕೆ ಹೆಚ್ಚಾಗಲಿದೆ. ಈ ಉತ್ಪನ್ನಗಳಲ್ಲಿ ಕಾಫಿಯೂ ಸೇರಿದೆ. ಭಾರತದ ಕಾಫಿ ರಫ್ತಿನಲ್ಲಿ ಸುಮಾರು ಶೇಕಡಾ ೪೨ ರಷ್ಟು ಯೂರೋಪಿಯನ್ ರಾಷ್ಟ್ರಗಳ ಪಾಲು ಇದೆ. ಭಾರತೀಯ ಕಾಫಿಯ ಆಮದುದಾರರಲ್ಲಿ ಇಟಲಿ ಮುಂಚೂಣಿಯಲ್ಲಿದ್ದು, ಜರ್ಮನಿ ಮತ್ತು ಬೆಲ್ಜಿಯಂ ಕೂಡ ಗಣನೀಯ ಕಾಫಿ ಆಮದು ರಾಷ್ಟ್ರಗಳಾಗಿವೆ. ಪ್ರಸ್ತುತ ಈ ದೇಶಗಳಲ್ಲಿ ಕಾಫಿಗೆ ಶೇಕಡಾ ೮ ರಿಂದ ೧೦ ರಷ್ಟು ಆಮದು ತೆರಿಗೆ ವಿಧಿಸಲಾಗುತಿದ್ದು ಒಪ್ಪಂದ ಜಾರಿಯಿಂದಾಗಿ ಶೂನ್ಯ ಆಮದು ತೆರಿಗೆಯ ಮೂಲಕ ಭಾರತೀಯ ಕಾಫಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಇದರಿಂದಾಗಿ ಸಹಜವಾಗಿಯೇ ಬಳಕೆ ಹೆಚ್ಚಾಗಿ ರಫ್ತೂ ಕೂಡ ಹೆಚ್ಚಾಗಲಿದೆ.

ಇದರ ಜತೆಗೇ ಭಾರತಕ್ಕೆ ಐಷಾರಾಮಿ ಕಾರುಗಳು, ವಿಸ್ಕಿ ಮತ್ತು ವೈನ್ ಆಮದಾಗಲಿದೆ. ಇದಕ್ಕೆ ಭಾರತ ಸರ್ಕಾರ ಆಮದು ಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಪ್ರಸ್ತುತ ಯೂರೋಪ್‌ನಿಂದ ಆಮದಾಗುವ ವ್ಹಿಸ್ಕಿ, ಬ್ರಾಂದಿ ಮತ್ತು ವೈನ್ ಮೇಲೆ ಭಾರತದಲ್ಲಿ ಸುಮಾರು ಶೇ ೧೫೦ರಿಂದ ೧೬೦ ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಅಂದರೆ ಸಾವಿರ ರೂಪಾಯಿನ ಮದ್ಯದ ಬಾಟಲ್‌ಗೆ ೧೫೦೦ ರಿಂದ ೧೬೦೦ ರಷ್ಟು ತೆರಿಗೆ ವಿಧಿಸಲಾಗುತಿದ್ದು ಒಂದು ಬಾಟಲ್ ಮಾರಾಟದ ದರ ೨೬೦೦ ಕ್ಕಿಂತ ಹೆಚ್ಚಾಗಿತ್ತು. ಇದೀಗ ಭಾರತ ಸರ್ಕಾರ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಿದ್ದು ವೋಡ್ಕಾ, ರಮ್, ಜಿನ್ ಎಲ್ಲಾ ಪಾನೀಯಗಳಿಗೆ ಸ್ಲಾಬ್ ರೂಪದಲ್ಲಿ ಶೇಕಡಾ ೨೦ ರಿಂದ ೪೦ ರವರೆಗೆ ತೆರಿಗೆ ವಿಧಿಸಲಿದೆ. ಆಮದು ಬಿಯರ್‌ಗೆ ಪ್ರಸ್ತುತ ಶೇಕಡಾ ೧೧೦ ರಷ್ಟು ತೆರಿಗೆ ವಿಧಿಸಲಾಗುತಿದ್ದು ಅದನ್ನು ಶೇಕಡಾ ೫೦ ಕ್ಕೆ ಇಳಿಕೆ ಮಾಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಯೂರೋಪ್‌ನಿಂದ ಆಮದಾಗುವ ವೈನ್‌ಗೂ ಗಣನೀಯವಾಗಿ ತೆರಿಗೆ ಇಳಿಕೆ ಮಾಡಿದ್ದು ದುಬಾರಿ ಬೆಲೆಯ ವೈನ್‌ಗಳಿಗೆ ಶೇಕಡಾ ೨೦ ರಿಂದ ೩೦ರ ವರೆಗೆ ಆಮದು ಸುಂಕ ವಿಧಿಸಲಾಗಿದೆ. ಇನ್ನು ಕಡಿಮೆ ದರದ ಅಂದರೆ ೨.೫ ಯೂರೋ ಡಾಲರ್ ಗಿಂತ(ಸುಮಾರು ೨೭೦ ರೂಪಾಯಿ) ಕಡಿಮೆ ಬೆಲೆಯ ವೈನ್ ಬಾಟಲಿಗಳಿಗೆ (ಒಂದು ಯೂರೋ ಡಾಲರ್‌ಗೆ ಸುಮಾರು ೧೧೦ ರೂಪಾಯಿಗಳು) ಭಾರತ ಸರ್ಕಾರ ಆಮದು ತೆರಿಗೆ ವಿನಾಯ್ತಿ ನೀಡಿದೆ. ಭಾರತದಲ್ಲಿ ಕಡಿಮೆ ದರ್ಜೆಯ ವೈನ್ ಬಾಟಲ್ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ೩೦೦ ರಿಂದ ೫೦೦ ರೂಪಾಯಿ ಇದೆ. ಇನ್ನು ಯೂರೋಪ್ ನಿಂದ ಕಡಿಮೆ ದರದ ವೈನ್ ಭಾರತಕ್ಕೆ ಆಮದು ಆದರೆ ಭಾರತದ ವೈನ್ ಮಾರಾಟಕ್ಕೆ ಕೊಂಚ ಹೊಡೆತ ಬೀಳಲಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಏನೇ ಆದರೂ ಈ ವ್ಯಾಪಾರ ಒಪ್ಪಂದದಿAದ ಭಾರತದ ಆರ್ಥಿಕತೆಗೆ, ಜಿಡಿಪಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ.