ಮಡಿಕೇರಿ, ಜ. ೩೦: ಸಹಕಾರ ಸಂಘಗಳ ಸದಸ್ಯರುಗಳ ಅನುಕೂಲಕ್ಕಾಗಿ ಸರಕಾರವು ಜಾರಿಗೊಳಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಈ ಬಾರಿಯೂ ಹಿಂದಿನ ವರ್ಷಗಳಂತೆ ಸದಸ್ಯರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜನವರಿ ೩ ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊAಡಿದ್ದು, ಮಾರ್ಚ್ ೩೧ರ ತನಕ ಸಹಕಾರ ಸಂಘಗಳ ಸದಸ್ಯರು ನಿಗದಿತ ಮೊತ್ತ ಪಾವತಿಸಿ ತಮ್ಮ ಹೆಸರು ದಾಖಲು ಮಾಡಿಕೊಳ್ಳಬಹುದಾಗಿದೆ.
ಯಶಸ್ವಿನಿ ಯೋಜನೆಯು ವಿಮಾಯೋಜನೆಯಾಗಿರುವುದಿಲ್ಲ. ಆದರೆ ಇದೊಂದು ಸ್ವಯಂ ನಿಧಿ ಯೋಜನೆಯಾಗಿರುತ್ತದೆ. ಸಹಕಾರ ಸಂಘಗಳ ಸದಸ್ಯರುಗಳು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ರಾಜ್ಯ ಸರಕಾರವು ಆಯವ್ಯಯದಲ್ಲಿ ಅನುದಾನ ಒದಗಿಸುವ ಮೂಲಕ ಯೋಜನೆಯಲ್ಲಿ ಭಾಗವಹಿಸುತ್ತದೆ. ಈ ಯಶಸ್ವಿನಿ ಯೋಜನೆಯನ್ನು ೨೦೨೫-೨೬ನೇ ಸಾಲಿಗೂ ಮುಂದುವರಿಸಲು ಹಾಗೂ ಈ ಯೋಜನೆಯಲ್ಲಿ ಹೊಸ ಸದಸ್ಯತ್ವ ನೋಂದಣಿ ಪ್ರಾರಂಭಿಸಲು ಕೆಲವು ಮಾರ್ಗ ಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿರುವ ಯಾವುದೇ ಸಹಕಾರ ಸಂಘಗಳು/ ಸಹಕಾರ ಬ್ಯಾಂಕ್ಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಅದರಂತೆ ಈ ಯಶಸ್ವಿನಿ ಯೋಜನೆಯ ವಿಮೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದೆ.
ನೋಂದಣಿಗೆ ಲಗತ್ತಿಸಬೇಕಾದ ದಾಖಲೆಗಳು: ಅರ್ಜಿ ನಮೂನೆ, ರೇಷನ್ ಕಾರ್ಡ್/ ಆಧಾರ್ ಕಾರ್ಡ್, ಯೋಜನೆಗೆ ಒಳಪಡುವ ಸದಸ್ಯರ ಪ್ರತಿಯೊಬ್ಬರ ತಲಾ ೨ ಫೋಟೋ, ಗ್ರಾಮೀಣ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬAಧಿಸಿದAತೆ ಗರಿಷ್ಠ ೪ ಸದಸ್ಯರ ಕುಟುಂಬ ಒಂದಕ್ಕೆ ರೂ.೫೦೦ ಗಳ ವಂತಿಕೆ ಹಾಗೂ ೪ ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.೧೦೦ ಪಾವತಿಸಬೇಕು. ನಗರ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬAಧಿಸಿದAತೆ ಗರಿಷ್ಠ ೪ ಸದಸ್ಯರ ಕುಟುಂಬ ಒಂದಕ್ಕೆ ರೂ.೧ ಸಾವಿರ ವಂತಿಕೆ ಹಾಗೂ ೪ ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ. ೨೦೦ ಪಾವತಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉಚಿತ (ಆರ್ಡಿ ಸಂಖ್ಯೆಯ ಜಾತಿ ಪ್ರಮಾಣ ಪತ್ರ ನೀಡಿದಲ್ಲಿ ಮಾತ್ರ ಅನ್ವಯವಾಗುತ್ತದೆ). ಅರ್ಜಿ ಸಲ್ಲಿಸಲು ಮಾರ್ಚ್ ೩೧ ಕೊನೆಯ ದಿನವಾಗಿದೆ. ಕುಟುಂಬದ ಒಬ್ಬ ವ್ಯಕ್ತಿ ಸಂಬAಧÀಪಟ್ಟ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದು ೧ ತಿಂಗಳು ಗತಿಸಿದಲ್ಲಿ ಈ ಯೋಜನೆಗೆ ಅರ್ಹರಾಗುತ್ತದೆ. ಹಾಗೆಯೇ ನೋಂದಾಯಿತ ಸದಸ್ಯರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ. ೫ ಲಕ್ಷದವರೆಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ಚೇತನ್ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಬಿ.ಎಸ್ - ಯಶಸ್ವಿನಿ ಜಿಲ್ಲಾ ಸಂಯೋಜಕರು ಕೊಡಗು ಜಿಲ್ಲೆ, ಮೊಬೈಲ್ ಸಂಖ್ಯೆ ೯೫೯೧೪೬೯೪೯೭ ಅವರನ್ನು ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕ ರವಿಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಹಿಂದಿನ ಮಾಹಿತಿ
೨೦೨೪-೨೫ ಸಾಲಿನಲ್ಲಿ ಕೊಡಗಿನಲ್ಲಿ ಒಟ್ಟು ೬೫೮ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇವರಿಗೆ ಒಟ್ಟು ರೂ. ೧ ಕೋಟಿ ೯೪ ಲಕ್ಷ ೫೩ ಸಾವಿರದಷ್ಟು ಪ್ರಯೋಜನ ದೊರೆತಿದೆ. ಕಳೆದ ಸಾಲಿನಲ್ಲಿ ೩೨೨ ಫಲಾನುಭವಿಗಳಿಗೆ ರೂ. ೧ ಕೋಟಿ ೨೧ ಸಾವಿರದಷ್ಟು ಪ್ರಯೋಜನವಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೮೪,೯೫೩ ಮಂದಿ ಹೆಸರು ನೋಂದಾಯಿಸಿಕೊAಡಿದ್ದರು.
ಜಿಲ್ಲೆಯ ಆಸ್ಪತ್ರೆಗಳು
ಈ ಯೋಜನೆಗೆ ಸಂಬAಧಿಸಿದAತೆ ನಿಗದಿತ ಆಸ್ಪತ್ರೆಗಳಲ್ಲಿ ಮಾತ್ರ ಅವಕಾಶವಿದೆ. ಕೊಡಗು ಜಿಲ್ಲೆಯಲ್ಲಿ ಗೋಣಿಕೊಪ್ಪಲು ಲೋಪಾಮುದ್ರ ಕಣ್ಣಿನ ಆಸ್ಪತ್ರೆ, ಲೈಫ್ಲೈನ್ ಆಸ್ಪತ್ರೆ, ಮಡಿಕೇರಿಯ ಜಿಲ್ಲಾ ಆಸ್ಪತ್ರೆ, ಮಡಿಕೇರಿಯ ಸ್ಮಿತಾ ಐ ಕೇರ್ ಹಾಗೂ ಇಕ್ಷಾ ಕಣ್ಣಿನ ಆಸ್ಪತ್ರೆ ಹಾಗೂ ಕುಶಾಲನಗರದ ಕಾವೇರಿ ಆಸ್ಪತ್ರೆಗಳು ಕಾರ್ಯನಿರ್ವಹಿಸಲಿದೆ.
ಸಹಕಾರ ಸಂಘಗಳಾದ ಪಿಎಲ್ಡಿ ಬ್ಯಾಂಕ್, ಪ್ಯಾಕ್ಸ್, ಟೌನ್ ಬ್ಯಾಂಕ್, ಮರ್ಚೆಂಟ್ಸ್ ಬ್ಯಾಂಕ್, ಎಪಿಸಿಎಂಎಸ್, ಸ್ತಿçÃಶಕ್ತಿ, ಸ್ವ ಸಹಾಯ ಸಂಘಗಳಲ್ಲಿ ಖಾತೆ ಹೊಂದಿದ್ದು, ವ್ಯವಹಾರ ಹೊಂದಿರುವ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಮಹಬೋದಿಪತ್ತಿನ ಸಂಘ, ಲ್ಯಾಂಪ್ಸ್ ಸೊಸೈಟಿಗಳು ಇತ್ಯಾದಿಗಳಲ್ಲಿ ಸದಸ್ಯರಾಗಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.