ಮಡಿಕೇರಿ, ಜ. ೩೦: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಡಿಕೇರಿ ನಗರ ವ್ಯಾಪ್ತಿಯ ರಾಜೇಶ್ವರಿನಗರ, ಮಹಾದೇವಪೇಟೆ, ಚಂದ್ರಗಿರಿ, ಆಜಾದ್ ನಗರ, ಗದ್ದಿಗೆ, ತ್ಯಾಗರಾಜ ಕಾಲೋನಿ, ಮಲ್ಲಿಕಾರ್ಜುನ ನಗರ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಸಣ್ಣ ಕುರ್ಚಿ ಮತ್ತು ಕಥೆ ಪುಸ್ತಕಗಳನ್ನು ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನೀಡಲಾಯಿತು.

ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಸೆಕ್ರೆಟರಿ ಪ್ರಮೀಳಾ ಶೆಟ್ಟಿ, ಸದಸ್ಯರಾದ ವಸಂತ್ ಕುಮಾರ್, ಲೀಲಾವತಿ, ಸಂಪತ್ ಕುಮಾರ್, ರವಿ.ಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಹಾಗೂ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್, ಅಂಗನವಾಡಿ ಕಾರ್ಯಕರ್ತೆಯರಾದ ಇಂದಿರಾ, ಶೃತಿ ಪಾಂಡುಶೇಟ್, ಸುಮಿತ್ರ, ಪಾರಿಜಾತ, ಅಂಬಿಕಾ, ನೇತ್ರ ಹಾಗೂ ಅಂಗನವಾಡಿ ಸಹಾಯಕಿಯರಾದ ವೀಣಾ, ಪ್ರೇಮ, ಸ್ನೇಹ, ರತ್ನ ಅವರುಗಳು ಈ ಸಂದರ್ಭ ಹಾಜರಿದ್ದರು.

ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಸಹಕಾರವನ್ನು ನೀಡುವಂತೆ ಈ ಸಂದರ್ಭ ಸವಿತಾ ಕೀರ್ತನ್ ಅವರು ಕೋರಿದರು. ರೋಟರಿ ವುಡ್ಸ್ನ ಅಧ್ಯಕ್ಷರಾದ ಕಿರಣ್ ಕುಂದರ್ ಮಾತನಾಡಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಂಗನವಾಡಿ ಕೇಂದ್ರಗಳಿಗೆ ಬೇಡಿಕೆಗನುಗುಣವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.