ವೀರಾಜಪೇಟೆ, ಜ. ೩೧: ಪ್ರತಿದಿನ ಹಲವಾರು ಹೊಸ ಸೈಬರ್ ಅಪರಾಧ ಪ್ರಕರಣಗಳು ಮತ್ತು ವಂಚನೆಗಳು ಬೆಳಕಿಗೆ ಬರುತ್ತಿರುವುದು ಆಘಾತಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದ್ದು, ಸೈಬರ್ ಅಪರಾಧಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವೀರಾಜಪೇಟೆ ಪೋಲಿಸ್ ಉಪ ಅಧೀಕ್ಷಕ ಮಹೇಶ್ ಕುಮಾರ್ ಹೇಳಿದರು.
ವೀರಾಜಪೇಟೆ ಮಾಜಿ ಸೈನಿಕರ ಸಂಘದ ಸಭೆಯು ಇತ್ತೀಚೆಗೆ ಸಂಘದ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾಜಿ ಸೈನಿಕರಿಗೆ ಸೈಬರ್ ಕ್ರೆöÊಂ ಬಗ್ಗೆ ಮಾಹಿತಿ ನೀಡಲು ಸಭೆಗೆ ಆಗಮಿಸಿ ಜಾಗೃತಿ ಮೂಡಿಸಿ ಮಾತನಾಡಿದ ಮಹೇಶ್ ಕುಮಾರ್ ಅವರು, ಸೈಬರ್ ಕ್ರೆöÊಂ ಬಗ್ಗೆ ಜನರು ಜಾಗೃತರಾಗಿರಬೇಕು ಮತ್ತು ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಹೆಚ್ಚು ತಾಂತ್ರಿಕ ಜ್ಞಾನ ಬಳಕೆ ಮಾಡುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಹಿರಿಯ ನಾಗರಿಕರು ಸೈಬರ್ ವಂಚನೆಗೆ ಹೆಚ್ಚು ಗುರಿಯಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ಆನ್ಲೈನ್ ವಂಚನೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಪರಿಚಿತರ ಕೈಗೆ ಮೊಬೈಲ್ ನೀಡಬಾರದು, ಅಪರಿಚಿತ ಫೋನ್ ಮತ್ತು ವೀಡಿಯೋ ಕರೆಗಳನ್ನು ಸ್ವೀಕರಿಸಬೇಡಿ, ಓ.ಟಿ.ಪಿ. ಸಂಖ್ಯೆಗಳನ್ನು ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ತಿಳಿಸಬೇಡಿ, ಮುಖ್ಯವಾಗಿ ಹೆಣ್ಣು ಮಕ್ಕಳು ಮೊಬೈಲ್ ಕುರಿತು ಬಹಳ ಎಚ್ಚರಿಕೆಯಿಂದ ಬಳಸಬೇಕು. ಇಲ್ಲವಾದಲ್ಲಿ ಅನೇಕ ತೊಂದರೆಗಳಿಗೆ ಸಿಲುಕುವಿರಿ ಎಂದು ತಿಳಿ ಹೇಳಿದರು.
ವಂಚಕರು ಅಂತರ್ಜಾಲದ ಸಂಪರ್ಕ ಪಡೆದು ಇತರರಿಗೆ ಕಂಪ್ಯೂಟರ್ ಸಂಪರ್ಕವನ್ನು ನಿರ್ಬಂಧಿಸುವುದು. ವೈರಸ್ ಹರಡಿ ಇಡೀ ಸಂಪರ್ಕವನ್ನು ನಾಶಪಡಿಸುವುದು, ದುರುದ್ದೇಶವುಳ್ಳ ತಂತ್ರಾAಶವನ್ನು ಬಳಸಿ ಇನ್ನೊಬ್ಬರ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಕಾರ್ಡ್ಗಳನ್ನು ನಕಲಿ ಮಾಡುವುದು, ಇನ್ನೊಬ್ಬರ ಬಗ್ಗೆ ತಪುö್ಪ ಭಾವನೆ ಬರುವಂತೆ ಮಾಡುವುದು. ಬೆದರಿಕೆ ಮೂಲಕ ಭಯೋತ್ಪಾದನೆ ಉಂಟು ಮಾಡುವುದು ಆನ್ಲೈನ್ ವಂಚಕರ ಕೆಲಸವಾಗಿದೆ ಎಂದು ಮಹೇಶ್ ಕುಮಾರ್ ವಿವರಿಸಿದರು.
ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಮಾತನಾಡಿದರು. ಮಾಜಿ ಸೈನಿಕ ಮಾಚಿಮಂಡ ಜಿ ಸೋಮಯ್ಯ ನಿಧನ ಹಿನ್ನೆಲೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭ ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರುವಂಡ ಕೆ ನಾಚಪ್ಪ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಬಿ.ಎಸ್., ಕಾರ್ಯದರ್ಶಿ ಪುಗ್ಗೇರ ಎಸ್ ನಂದ, ಖಜಾಂಚಿ ತೋರೇರ ಪೂವಯ್ಯ, ನಿರ್ದೇಶಕರಾದ ಚೇಂದ್ರಿಮಾಡ ಕೆ. ನಂಜಪ್ಪ, ಪಟ್ರಪಂಡ ಎಂ. ಕರುಂಬಯ್ಯ, ಕೊಂಗAಡ ಎ. ಭೀಮಯ್ಯ, ಅಣ್ಣಾಳಮಾಡ ಡಿ. ಸುಬ್ಬಯ್ಯ, ಬಾಳೆಕುಟ್ಟೀರ ಎ. ಬೋಪಯ್ಯ, ಅಪ್ಪಯ್ಯ ಹೆಚ್.ಕೆ., ಕಬ್ಬಚ್ಚೀರ ಕೆ. ಬೋಪಣ್ಣ, ಎಂ.ಕೆ. ಸಲಾಂ ಕಡಂಗ, ಪಟ್ರಪಂಡ ಎನ್. ಚಂಗಪ್ಪ ಇದ್ದರು.