*ಗೋಣಿಕೊಪ್ಪ, ಜ. ೨೯: ಪೊನ್ನಂಪೇಟೆ ತಾಲೂಕಿನ ಮರೂರು ತಿತಿಮತಿ ಆಶ್ರಮ ಶಾಲೆಯಲ್ಲಿ ೧೭೦ ವಿದ್ಯಾರ್ಥಿಗಳಿಗೆ ಕಣ್ಣಿನಪೊರೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಕರ್ನಾಟಕರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಹಾಗೂ ಫಾರೂಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಆಸ್ಪತ್ರೆ ವತಿಯಿಂದ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡಗಳ ಜಿಲಾ ್ಲಅಧಿಕಾರಿ ಎಸ್. ಹೊನ್ನೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬುಡಕಟ್ಟು ಸಂಶೋಧನಾ ಸಂಸ್ಥೆ ರಾಜ್ಯಾದ್ಯಂತ ಆಶ್ರಮ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಾ ಬರುತ್ತಿದೆ. ಇದರಿಂದ ಮಕ್ಕಳಿಗೆ ಅನುಕೂಲವಾಗಿದೆ ಎಂದ ಅವರು ಕೊಡಗಿನಲ್ಲಿ ೨೧೮ ಬುಡಕಟ್ಟು ಕಾಲೋನಿಗಳಿದ್ದು ಜಿಲ್ಲಾಡಳಿತ ಆರೋಗ್ಯ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದಆಶ್ರಮ ಶಾಲೆಗಳ ಸುತ್ತಮುತ್ತಲ ಕಾಲೋನಿಗಳ ಜನರು ಹಾಗೂ ವಿದ್ಯಾರ್ಥಿಗಳಿಗೆ ಫೆಬ್ರವರಿ ೧೫ರೊಳಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಮರೂರು ತಿತಿಮತಿ ಆಶ್ರಮ ಶಾಲೆ ಹಾಗೂ ಕುಶಾಲನಗರ ಆಶ್ರಮ ಶಾಲೆಗಳನ್ನು ೧ನೇ ತರಗತಿಯಿಂದ ಪಿಯುಸಿವರೆಗೆ ಮೇಲ್ದರ್ಜೆಗೇರಿಸಿ ೧೬ ಕೋಟಿ ರೂಗಳನ್ನು ಮಂಜೂರು ಮಾಡಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತೇಜರಾಜ ಆಲಸಬಾಳ್, ಮುಖ್ಯ ಶಿಕ್ಷಕ ಪ್ರಶಾಂತ್ಕುಮಾರ್, ಡಾ. ವಿನಯ್. ಡಾ. ನಂದಿನಿ, ಡಾ. ಪ್ರಕೃತಿ, ಸುಹೇಬ್, ನದೀಮ್, ಮನೋಜ್, ಪ್ರಮೋದ್, ರಾಜು ಹಾಜರಿದ್ದರು.