ಹೆಬ್ಬಾಲೆ: ಕುಶಾಲನಗರ ತಾಲೂಕಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ದಿನದ ಅಂಗವಾಗಿ ವಿವಿಧ ಬಣ್ಣಬಣ್ಣದ ಉಡುಪುಗಳನ್ನು ತೊಟ್ಟು ವೇಷಧಾರಿಗಳಾಗಿದ್ದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಸಂದರ್ಭ ಮಕ್ಕಳು ಪ್ರದರ್ಶಿಸಿದ ವೈವಿಧ್ಯಮಯ ಚಟುವಟಿಕೆಯ ಪ್ರದರ್ಶನಗಳು ನೋಡುಗರ ಗಮನ ಸೆಳೆಯಿತು. ಇದೆ ವೇಳೆ ಮಕ್ಕಳು ಪ್ರದರ್ಶಿಸಿದ ಏರೋಬಿಕ್ಸ್ ಪ್ರದರ್ಶನ ಹಾಗೂ ಗರ್ಬ್ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮತ್ತು ಮಕ್ಕಳ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ಶಿವಾನಂದ ಶಿವಪ್ಪ ಕೆಂಪೆಳ್ಳರ್ ಸ್ವಾತಂತ್ರ ನಂತರದ ಸಂವಿಧಾನ ರಚನಾ ಸಭೆಯ ಕರಡು ಸಮಿತಿ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರ ಶ್ರಮ ಅಪಾರವಾದದ್ದು, ಪ್ರಜಾಸತ್ತಾತ್ಮಕ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಸಂವಿಧಾನವು ಪ್ರಜಾತಂತ್ರದ ಜೀವಾಳ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರದೀಪ್ ವಹಿಸಿ ಮಾತನಾಡಿ, ಪ್ರತಿಯೊಬ್ಬರು ರಾಷ್ಟಿçÃಯ ಹಬ್ಬಗಳಲ್ಲಿ ಪಾಲ್ಗೊಂಡು ದೇಶದ ಸಮಗ್ರತೆ ಹಾಗೂ ಐಕ್ಯತೆಯನ್ನು ಎತ್ತಿಹಿಡಿಯಬೇಕು ಎಂದರು.
ಹೆಬ್ಬಾಲೆ ಗ್ರಾಮದ ಹಿರಿಯರಾದ ನಿವೃತ್ತ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಎಸ್. ಪುಟ್ಟಪ್ಪ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕಿ ವಂಜಮ್ಮ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸಮವಸ್ತç ಧರಿಸಿ ಪ್ರದರ್ಶಿಸಿದ ಲೇಜಿಮ್ ಮತ್ತು ಬಯಲು ನಾಟಕ ಆಕರ್ಷಣೀಯವಾಗಿತ್ತು. ಕಾರ್ಯಕ್ರಮದಲ್ಲಿ ಮೊದಲಿಗೆ ಶಿಕ್ಷಕಿ ರಮ್ಯ ಕೆ.ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್ ವಂದಿಸಿದರು.
ನಂತರ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಪ್ರದೀಪ್ ಧ್ವಜವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕಿಯಾದ ಬಬಿತ ಸಿ.ಎಂ., ಪ್ರತಿಮಾ ಹೆಚ್.ಪಿ., ನಿವೃತ್ತ ಶಿಕ್ಷಕ ರಮೇಶ್ ಹಾಗೂ ಮಕ್ಕಳಿಗೆ ಸಿಹಿ ತಿಂಡಿ (ಲಡ್ಡು) ದಾನಿಗಳಾದ ಪೂಜಾ ಎಲೆಕ್ಟಿçಕಲ್ ಹಾಡ್ವೇðರ್ನ ಮಾಲೀಕ ರಾಮ್, ರಾಕೇಶ್, ದೇವಿ, ರಮಾದೇವಿ ಮತ್ತು ಯಶಸ್ವಿನಿ ಕ್ಯಾಂಟೀನ್ನ ಮಹೇಶ್ ಮತ್ತು ಅಮೃತ ದಂಪತಿಯರ ಪರವಾಗಿ ಅವರ ಪುತ್ರ ಹಾಜರಿದ್ದರು.
ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಕೂಡಿಗೆ: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಜಾತಂತ್ರ ವ್ಯವಸ್ಥೆಗೆ ಬುನಾದಿ ಹಾಕಿರುವ ನಮ್ಮ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದ ಪಾಲನೆ ಹಾಗೂ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಸಮಾಜ ವಿಜ್ಞಾನ ಶಿಕ್ಷಕಿ ಎಸ್ಎಂ. ಗೀತಾ ಮಾತನಾಡಿ, ರಾಷ್ಟಿçÃಯ ಗೀತೆಯಾದ ವಂದೇ ಮಾತರಂ ೧೫೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಗಣತಂತ್ರ ದಿನವನ್ನು ಅದೇ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಎಸ್ಡಿಎಂಸಿ ಸದಸ್ಯರಾದ ಕೆ.ಎಸ್.ರಾಚಾಚಾರಿ, ಶ್ರೀನಿವಾಸಚಾರಿ, ಲಕ್ಷಿö್ಮ, ಗೈಡ್ಸ್ ಶಿಕ್ಷಕಿ ಕೆ.ಟಿ. ಸೌಮ್ಯ, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಡಿ. ರಮ್ಯ, ಅನ್ಸಿಲಾ ರೇಖಾ ಹಾಗೂ ವಿದ್ಯಾರ್ಥಿ ನಾಯಕರು ಇದ್ದರು.
ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ರಾಷ್ಟಿçÃಯ ಭಾವೈಕ್ಯತೆ ಪ್ರತಿಬಿಂಬಿಸುವ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ವಿದ್ಯಾರ್ಥಿಗಳು ದಿನದ ಮಹತ್ವ ಕುರಿತು ಮಾತನಾಡಿದರು. ರಾಷ್ಟç ಧ್ವಜಾರೋಹಣ ನಡೆಸಿ ಗೌರವ ವಂದನೆ ಸಲ್ಲಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.ಚೆಯ್ಯಂಡಾಣೆ: ಸಮೀಪದ ಎಡಪಾಲ ಅಂಗನವಾಡಿ ಕೇಂದ್ರದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಎಲ್ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅತಿಥಿಗಳು, ಗಣ್ಯರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ, ಕಲಿಕಾ ಪ್ರಗತಿ ಮತ್ತಿತರ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಮಮ್ಮದ್, ಪ್ರಾಥಮಿಕ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಮರಿಯಂಬಿ, ಬಾಲ ವಿಕಾಶ ಸಮಿತಿಯ ಅಧ್ಯಕ್ಷೆ ನಜೂಮುನ್ನಿಸ, ಉಪಾಧ್ಯಕ್ಷೆ ತಬ್ಸಿರಾ, ಅಂಗನವಾಡಿ ಕಾರ್ಯಕರ್ತೆಯರಾದ ಆಬಿದ, ರೋಹಿಣಿ, ಶಬನಾ, ಸಹಾಯಕಿಯರಾದ ಅಪ್ಸತ್, ಝಿನತ್, ಆಶಾ ಕಾರ್ಯಕರ್ತೆ ಭಾಗ್ಯವತಿ, ಪೋಷಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.ವೀರಾಜಪೇಟೆ: ಗಣರಾಜ್ಯೋತ್ಸವವನ್ನು ವೀರಾಜಪೇಟೆಯ ಬ್ರೆöÊಟ್ ಪಬ್ಲಿಕ್ ಶಾಲೆಯಲ್ಲಿ ಆಚರಿಸಲಾಯಿತು. ನಿವೃತ್ತ ಶಿಕ್ಷಕಿ ಮಾರ್ಗರೆಟ್ ಮೇರಿಯವರು ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮೇಲುಸ್ತುವಾರಿ ಸಮಿತಿಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್ ಧ್ವಜಾರೋಹಣ ಮಾಡಿದರು.
ಮುಖ್ಯ ಶಿಕ್ಷಕ ಹೇಮಂತ್ ಕುಮಾರ್, ಹಿರಿಯ ಶಿಕ್ಷಕಿ ಆಶಾ ಸತೀಶ್, ಮಿಸ್ಬಾ, ಸುಮಯ್ಯ, ಅರ್ಚನಾ, ಶಾಹಿದಾ, ಶಾನಿದ್ ಹಾಗೂ ಹರ್ಷವರ್ಧನ್ ಪಾಲ್ಗೊಂಡಿದ್ದರು.ನಾಪೋಕ್ಲು: ಸಮೀಪದ ಹಳೆತಾಲೂಕು ಅಂಗನವಾಡಿ ಕೇಂದ್ರದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಅಧ್ಯಕ್ಷತೆಯನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ ವಹಿಸಿ ಗಣರಾಜ್ಯೋತ್ಸವದ ಬಗ್ಗೆ ಹಾಗೂ ಅಂಗನವಾಡಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಬಗ್ಗೆ ಮಾತನಾಡಿ, ತಮ್ಮ ಶ್ಲಾಘನೆಯನ್ನು ವ್ಯಕ್ತಪಡಿಸಿ ಹಳೆತಾಲೂಕು ಅಂಗನವಾಡಿ ಕೇಂದ್ರವು ಯಾವುದೇ ಕಾನ್ವೆಂಟ್ ಶಾಲೆಗಿಂತ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕೊಳಕೇರಿ ದವಸ ಭಂಡಾರದ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಮುಖ್ಯ ಅತಿಥಿ ಮುಂಡAಡ ಕವಿತ ಅಯ್ಯಣ್ಣ, ನಾಪೋಕ್ಲು ಪೊಮ್ಮೊಕ್ಕಡ ಕೂಟದ ಅಧ್ಯಕ್ಷೆ ಬಾಳೆಯಡ ನಿಶಾ ಮೇದಪ್ಪ, ಅಜ್ಜಿಮುಟ್ಟ ಅಂಗನವಾಡಿ ಶಿಕ್ಷಕಿ ಸುಜಾತ ಮಾತನಾಡಿ, ಈ ದಿನದ ಮಹತ್ವದ ಬಗ್ಗೆ ತಿಳಿಸಿದರು. ತಾಲೂಕು ಸ್ತಿçà ಶಕ್ತಿ ಗುಂಪಿನ ಕಾರ್ಯದರ್ಶಿ ಅನಿತ, ಸ್ತಿçà ಶಕ್ತಿ ಗುಂಪಿನ ಅಧ್ಯಕ್ಷೆ ಬೊಪ್ಪಂಡ ಯಶೋದಾ, ಮಕ್ಕಳ ಪೋಷಕರು, ಸ್ತಿçà ಶಕ್ತಿ ಗುಂಪಿನ ಸದಸ್ಯರು, ಸಾರ್ವಜನಿಕರು, ಶಿಕ್ಷಕರಾದ ಸಫ್ರೀನ, ಸುಜಾತ, ಸಹಾಯಕಿ ಮಮತ ಹಾಜರಿದ್ದರು. ಅಂಗನವಾಡಿ ಶಿಕ್ಷಕಿ ಭಾಗ್ಯವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಮಡಿಕೇರಿ: ಕ್ಲೋಸ್ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.
ಕಡಗದಾಳು ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಎನ್. ಪುಷ್ಪಾವತಿ ರೈ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ನೆರವೇರಿತು. ಎಸ್ಡಿಎಂಸಿ ಅಧ್ಯಕ್ಷ ಬಿ.ಕೆ. ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಎಂ.ಟಿ. ಲಕ್ಷಿö್ಮ ದಿನದ ಮಹತ್ವದ ಕುರಿತಾಗಿ ಮಾತನಾಡಿದರು. ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿಗಳು, ಸಾರ್ವಜನಿಕರು, ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಜೆಸ್ಸಿ ಕೆ.ಎಫ್. ಸ್ವಾಗತಿಸಿದರು. ಪಿ.ಸಿ. ಉಷಾ ನಿರೂಪಿಸಿದರು. ಪ್ರಜ್ಞಾ ವಂದಿಸಿದರು. ಗ್ರಾ.ಪಂ. ಸದಸ್ಯೆ ಪ್ರಭಾ, ಎಸ್ಡಿಎಂಸಿ ಉಪಾಧ್ಯಕ್ಷೆ ಜಯಶ್ರೀ, ಪೋಷಕರು, ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಕುಂಜಿಲ: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಜಿಲ ಅಂಬಲದಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯೆ ಶೈಲಾ ಧ್ವಜಾರೋಹಣ ನೆರವೇರಿಸಿದರು.
ರಾಷ್ಟçಗೀತೆ, ಸಂವಿಧಾನ ಪೀಠಿಕೆ ಪ್ರಸ್ತಾವನೆ ಹಾಗೂ ಮೆರವಣಿಗೆಯ ನಂತರ ಸಭೆ ಪ್ರಾರಂಭವಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪುಷ್ಪಾ ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ದಿನದ ಮಹತ್ವದ ಕುರಿತು ಮಾತನಾಡಿದರು.
೨೦೨೪-೨೫ನೇ ಸಾಲಿನಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಪಾರ್ವತಿ ಮಕ್ಕಳಿಗೆ ಹಿತವಚನಗಳನ್ನು ಹೇಳಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅತಿಥಿ ಶಿಕ್ಷಕಿ ರೋಸಿ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಅಕ್ಷರದಾಸೋಹ ಸಹಾಯಕಿ, ಊರಿನ ಪ್ರಮುಖರು, ವಿದ್ಯಾರ್ಥಿಗಳು ಹಾಜರಿದ್ದರು.ಸೋಮವಾರಪೇಟೆ: ಸಮೀಪದ ಕಾಜೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ರಾಷ್ಟç ಧ್ವಜಾರೋಹಣ ನೆರವೇರಿಸಿದರು.
ನಂತರ ಸ್ಕೌಟ್ಸ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳಿಂದ ಶಾಲಾ ಮೈದಾನದಲ್ಲಿ ಪಥ ಸಂಚಲನ ನಡೆಯಿತು. ಶಾಲೆಯ ಕಾವೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಮೇದಪ್ಪ, ಸೋಮಯ್ಯ, ಐಗೂರು ಗ್ರಾ.ಪಂ. ಮಾಜಿ ಸದಸ್ಯ ಕೆ.ಪಿ. ಮುತ್ತಪ್ಪ, ಶಾಲಾ ಮುಖ್ಯೋಪಾಧ್ಯಾಯಿನಿ ಸರಳಕುಮಾರಿ, ಅಧ್ಯಾಪಕ ವೃಂದ, ಐಗೂರು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಜೇಶ್, ನಿವೃತ್ತ ಶಿಕ್ಷಕಿ ವಸಂತಿ, ಚಾಣಕ್ಯ ಯುವಕ ಸಂಘದ ಅಧ್ಯಕ್ಷ ತೇಜಸ್ ಮತ್ತಿತರರು ಇದ್ದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಶಿಕ್ಷಕರು ದಿನದ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಪರ್ತಕರ್ತರಾದ ಮುರಳೀಧರ್ ಮತ್ತು ಐಗೂರಿನ ಸುಕುಮಾರ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಬಿಂಬಿಸುವ ನೃತ್ಯಗಳ ಪ್ರದರ್ಶನ ನಡೆಯಿತು.ಕೂಡಿಗೆ: ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ) ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್, ಇಡೀ ವಿಶ್ವಕ್ಕೆ ಮಾದರಿಯಾದ ನಮ್ಮ ದೇಶದ ಸಂವಿಧಾನವು ಧರ್ಮಗ್ರಂಥವಿದ್ದAತೆ ಎಂದರು.
ಸAಸ್ಥೆಯ ಹಿರಿಯ ಉಪನ್ಯಾಸಕರಾದ ಎನ್.ವಿ. ಸ್ವಾಮಿ, ಬಿ.ಎನ್. ಪುಷ್ಪ, ತತ್ವ ಹೇಮಂತ್ ಕುಮಾರ್, ಹೆಚ್.ಹೆಚ್. ಸತೀಶ್, ಉಪನ್ಯಾಸಕರಾದ ಕೆ.ಎಸ್. ನಳಿನಾಕ್ಷಿ, ವಿ. ವಿಜಯ್, ಲತಾ, ಜಗದೀಶ್, ಗಾಯತ್ರಿ ಮತ್ತಿತರರು ಇದ್ದರು. ಗಣರಾಜ್ಯೋತ್ಸವದ ಅಂಗವಾಗಿ ತರಬೇತಿ ಸಂಸ್ಥೆಯ ಡಿ.ಎಲ್.ಇಡಿ., ಪ್ರಶಿಕ್ಷಣಾರ್ಥಿಗಳಿಂದ ದೇಶಭಕ್ತಿ ಗಾಯನ ಏರ್ಪಡಿಸಲಾಗಿತ್ತು.ನಾಪೋಕ್ಲು: ಇಲ್ಲಿಗೆ ಸಮೀಪದ ಬೇತು ಗ್ರಾಮದ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು
ಧ್ವಜಾರೋಹಣವನ್ನು ಶಿಕ್ಷಕಿ ಮೈನಾ ಕುಮಾರಿ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ ಶಿಕ್ಷಕ ಕಿರಣ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ಹಾಡು, ಭಾಷಣ ಹಾಗೂ ನೃತ್ಯಗಳ ಮೂಲಕ ವಿದ್ಯಾರ್ಥಿಗಳ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು. ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಲಾಯಿತು.
ವಿದ್ಯಾರ್ಥಿ ಆಜ್ಮಿಯ ಬಿ.ಎಂ. ನಿರೂಪಿಸಿ, ಮುಪ್ಪಿದ ಕೆ.ಐ. ವಂದಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಐಗೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜೂರಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.
ರಾಷ್ಟçಗೀತೆಯ ನಂತರ ಕಾರ್ಯಕ್ರಮದ ಕುರಿತು ಮುಖ್ಯ ಶಿಕ್ಷಕಿ ಎಂ.ಟಿ. ಸರಳ ಕುಮಾರಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬಹುಮಾನ ವಿತರಣೆ ನಡೆಯಿತು. ಮುಖ್ಯ ಶಿಕ್ಷಕಿ ಸರಳ ಕುಮಾರಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕೆ.ಎಲ್. ಹೊನ್ನಪ್ಪ, ಕೆ.ಪಿ. ಮುತ್ತಪ್ಪ, ನಿವೃತ್ತ ಮುಖ್ಯ ಶಿಕ್ಷಕರಾದ ಪೊನ್ನಚನ ಸೋಮಯ್ಯ, ಕೆ.ಟಿ. ಮೇದಪ್ಪ, ವಸಂತಿ, ಚಾಣಕ್ಯ ಯುವಕ ಸಂಘದ ಅಧ್ಯಕ್ಷ ತೇಜಸ್, ಅಧ್ಯಾಪಕ ವೃಂದದ ಸತೀಶ್ ಕುಮಾರ್, ಅನಸೂಯ, ಇಂದಿರಾ, ಸ್ವರ್ಣ, ವಿದ್ಯಾ ಭಾಗವಹಿಸಿದ್ದರು.ಮಡಿಕೇರಿ: ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಟ್ರಸ್ಟಿ ಎಂ. ಶ್ರೀಧರ್ ಹೂವಲ್ಲಿ ಹಾಗೂ ಪತ್ರಿಕಾ ಭವನದ ಸಿಬ್ಬಂದಿಗಳಾದ ಯಮುನಾ ಕೆ.ಪಿ., ರಾಜೇಶ್ ಬಿ.ಪಿ., ಶೈನಿ ಹೆಚ್.ಎಂ. ಹಾಗೂ ವರ್ತಕರಾದ ರೆಹಮಾನ್, ಶೇಖ್ಅಹಮದ್ ಮಕ್ಕಳಾದ ಮೌಲ್ಯ ಬಜೆಕೋಡಿ, ತನುಶ್ರೀ ಎಸ್.ಯು. ಹಾಗೂ ಇನ್ನಿತರರು ಭಾಗವಹಿಸಿದ್ದರು.