ಸೋಮವಾರಪೇಟೆ, ಜ. ೩೦: ಶಾಂತಳ್ಳಿ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಫೆ. ೧ ರಂದು (ನಾಳೆ) ಶಾಂತಳ್ಳಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ ೧೦.೩೦ಕ್ಕೆ ಶಾಂತಳ್ಳಿ ರಥಬೀದಿಯಿಂದ ಶ್ರೀ ಕುಮಾರಲಿಂಗೇಶ್ವರ ದೇವಾಲಯ ದವರೆಗೆ ಶೋಭಾಯಾತ್ರೆ ನಡೆಯಲಿದ್ದು, ೧೧.೩೦ಕ್ಕೆ ದೇವಾಲಯದ ಮುಂಭಾಗ ಸಭಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹಾಸನದ ಯಸಳೂರು ತೆಂಕಲಗೋಡು ಮಠಾಧೀಶರಾದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ದಿಕ್ಸೂಚಿ ಭಾಷಣಕಾರರಾಗಿ ಮಂಗಳೂರು ವಿಭಾಗದ ಸಹ ವ್ಯವಸ್ಥಾ ಪ್ರಮುಖ್ ಸ್ವಾಮಿಪ್ರಸಾದ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಚಾಲಕ ಲಿಂಗರಾಜು ವಹಿಸಲಿದ್ದಾರೆ ಎಂದು ಆಯೋಜಕ ಸಮಿತಿಯ ಪ್ರಮುಖರಾದ ಎಸ್.ಜಿ. ಮೇದಪ್ಪ ತಿಳಿಸಿದ್ದಾರೆ.