ಮಡಿಕೇರಿ, ಜ. ೩೦: ಹಿಂದೂ ಜನಸಂಗಮ ಶೋಭಾಯಾತ್ರೆಯು ಬೈಚನಹಳ್ಳಿಯಿಂದ ಕುಶಾಲನಗರದ ಕಡೆಗೆ ಆಗಮಿಸುತ್ತಿದ್ದ ಸಂದರ್ಭ ಶಾಸಕ ಮಂತರ್ ಗೌಡ ಅವರು ಅದೇ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಸಂದರ್ಭ ಹಿಂದೂ ಬಾಂಧವರನ್ನು ಮಾತನಾಡಿಸಿ ಶೋಭಾಯಾತ್ರೆಗೆ ಶುಭಹಾರೈಸಿದ್ದಾರೆಯೇ ಹೊರತು ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಈ ವಿಷಯ ಮುಂದಿಟ್ಟು ಶಾಸಕರ ತೇಜೋವಧೆಗೆ ಯತ್ನವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿವಿಧ ಜನಾಂಗದ ಕಾರ್ಯಕ್ರಮಗಳಲ್ಲಿ, ಕ್ರೀಡಾಕೂಟಗಳಲ್ಲಿ ವಿವಿಧತೆಯಲ್ಲಿ ಏಕತೆ ಎನ್ನುವಂತೆ ಮಡಿಕೇರಿ ಶಾಸಕರು ಸಕ್ರಿಯವಾಗಿ ಪಾಲ್ಗೊಂಡು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಸರಳ ವ್ಯಕ್ತಿತ್ವದಿಂದಲೇ ಅವರು ಜನರೊಂದಿಗೆ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಶಾಸಕರು ಹಿಂದೂ ಸಂಗಮ ಶೋಭಾಯಾತ್ರೆಯ ಸಂದರ್ಭದಲ್ಲಿ ಹಿರಿಯರನ್ನು ಭೇಟಿಯಾದಾಗ ಅವರ ಪಾದವನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಇದು ಕೊಡಗಿನ ಸಂಪ್ರದಾಯ ಹಾಗೂ ಶಾಸಕರ ಜೀವನಶೈಲಿಯು ಆಗಿದೆ. ಶಾಸಕರ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಕೆಲವರು ಶಾಸಕರ ತೇಜೋವಧೆಯಲ್ಲಿ ತೊಡಗಿಸಿಕೊಂಡಿರುವುದನ್ನು ಖಂಡಿಸಿದ್ದಾರೆ.

ಜನಪ್ರತಿನಿಧಿಗಳು ಸಮಾನತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅದನ್ನು ನಾವುಗಳು ಯಾರು ಮರೆಯುವಂತಿಲ್ಲ. ಅದೇ ರೀತಿ ಶಾಸಕರು ಕೂಡ ಎಲ್ಲಾ ಜನಾಂಗದವರೊAದಿಗೆ ಸಮಾನತೆಯಿಂದ ಬೆರೆಯುತ್ತಿರುವುದನ್ನು ನಾವು ಗೌರವಿಸಬೇಕು, ಸೇವೆಯನ್ನು ಪ್ರಶಂಸಿಸಬೇಕೆAದು ಲತೀಫ್ ಹೇಳಿದರು.