ಮಡಿಕೇರಿ, ಜ. ೩೧: ಇತ್ತೀಚೆಗೆ ನಿಧನರಾದ ಮಡಿಕೇರಿಯ ಬಾಬುಚಂದ್ರ ಉಳ್ಳಾಗಡ್ಡಿ ಅವರ ಸೇವೆಯನ್ನು ಸ್ಮರಿಸಿ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದಿAದ ಇಲ್ಲಿ ಸಂಸ್ಮರಣಾ ಸಭೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಅಧ್ಯಕ್ಷರು, ಉಳ್ಳಾಗಡ್ಡಿ ಅವರು ಸಹಕಾರ ಸಂಘ, ಚೇಂಬರ್ ಟ್ರಸ್ಟ್, ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗಳಲ್ಲಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಿದರು. ಸಂಘದ ಸ್ಥಾಪಕಾಧ್ಯಕ್ಷ ಜಿ. ರಾಜೇಂದ್ರ, ಪ್ರಸಕ್ತ ಉಪಾಧ್ಯಕ್ಷ ರಾಮಕೃಷ್ಣಯ್ಯ, ನಿರ್ದೇಶಕರುಗಳಾದ ಕೆ.ಎಂ. ಗಣೇಶ್, ಕೆ.ಕೆ. ಶ್ರೀನಿವಾಸ್, ಎಸ್.ಐ. ಮುನೀರ್ ಅಹಮ್ಮದ್, ಹೆಚ್.ಕೆ. ಅನಿಲ್, ಕೆ.ಎಸ್. ನಾಗೇಶ್, ಡಿ. ನರಸಿಂಹ ನುಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ದಿ. ಬಾಬುಚಂದ್ರ ಉಳ್ಳಾಗಡ್ಡಿಯವರ ಪತ್ನಿ ಲೀಲಾದೇವಿ ಹಾಗೂ ಮಕ್ಕಳಾದ ಯು.ಬಿ. ಶ್ವೇತಾ ಮತ್ತು ವೃಂದ ಹಾಗೂ ಸಂಘದ ಕಾರ್ಯದರ್ಶಿ ಶ್ಯಾಮಲ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.