ಚೆಯ್ಯಂಡಾಣೆ, ಜ. ೩೧: ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಫೆ. ೧ ರಿಂದ (ಇಂದಿನಿAದ) ೩ ದಿನಗಳ ಕಾಲ ನಡೆಯಲಿದೆ.

ಫೆ,.೧ ರಂದು (ಇಂದು) ಸಂಜೆ ೪.೩೦ ಗಂಟೆಗೆ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಷೀರ್ ಹಾಜಿ ಕೆ.ಎ. ಧ್ವಜಾರೋಹಣ ನೆರವೇರಿಸಲಿದ್ದಾರೆ. ಝಿಯಾರತ್‌ಗೆ ಮುದರ್ರಿಸ್ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅಲ್ ಹಾಜ್ ಕೆ.ನಿಝಾರ್ ಫೈಝಿ ನೇತೃತ್ವ ವಹಿಸಲಿದ್ದಾರೆ.

ಸಂಜೆ ೫ ಗಂಟೆಗೆ ತಕ್ಕ ಮುಖ್ಯಸ್ಥರಾದ ಕೆ.ವೈ.ಕುಂಞಹ್ಮದ್ ನೇತೃತ್ವದಲ್ಲಿ ಮಖಾಂ ಅಲಂಕಾರ ನಡೆಯಲಿದೆ. ರಾತ್ರಿ ಪ್ರಖ್ಯಾತ ವಾಗ್ಮಿ ಅಭಿದ್ ಹುದವಿ ತಚ್ಚಣ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಫೆ. ೨ ರಂದು ಅಪರಾಹ್ನ ೩ ಗಂಟೆಗೆ ಪ್ರಖ್ಯಾತ ವಾಗ್ಮಿ ರಾಫಿ ಹಿಮಮಿ ಕಾಮಿಲ್ ಸಖಾಫಿ ಮುದರ್ರಿಸ್ ದೇರಳಕಟ್ಟೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ವಾರಿಸ್ ಅಬ್ದುಲ್ಲ ಹುದವಿ ತಾನೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ, ನಂತರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಫೆ. ೩ ರಂದು ರಾತ್ರಿ ೮ ಗಂಟೆಗೆ ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಧಾರ್ಮಿಕ ಉಪನ್ಯಾಸ ಹಾಗೂ ಮತ ಪ್ರವಚನ ನೀಡಲಿದ್ದಾರೆ.

ನಂತರ ಬೃಹತ್ ಸ್ವಲಾತ್ ವಾರ್ಷಿಕ ಹಾಗೂ ದುಅ ಮಜ್ಲಿಸ್ ನಡೆಯಲಿದ್ದು ಕೊಡಗು ಜಿಲ್ಲಾ ಖಾಝಿ ಎಂ.ಎA. ಅಬ್ದುಲ್ಲ ಫೈಝಿ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ.

ಸಂಜೆ ೪.೩೦ ಗಂಟೆಗೆ ಹಾಗೂ ೩ ರ ರಾತ್ರಿ ೧೦ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.