ವೀರಾಜಪೇಟೆ, ಜ. ೩೧: ಬೇಟೋಳಿ ಗ್ರಾಮ ಪಂಚಾಯಿತಿ ೧೫ನೇ ಹಣಕಾಸು ಯೋಜನೆಯ ರೂ. ೩೩ ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಮತ್ತು ಬೀದಿದೀಪ, ವಿಶೇಷಚೇತನರಿಗೂ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಎಂ. ಬೋಪಣ್ಣ ಹೇಳಿದರು.
ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಬೂದಿಮಾಳ ಅಯ್ಯಪ್ಪ ದೇವಸ್ಥಾನ ಬಳಿ ಹಾದುಹೋಗುವ ಸಾರ್ವಜನಿಕ ರಸ್ತೆಗೆ ರೂ. ೧.೩೦ ಲಕ್ಷ ಅನುದಾನದಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ೧೫ನೇ ಹಣಕಾಸು ಯೋಜನೆಯ ೩೩ ಲಕ್ಷದಲ್ಲಿ ಬೇಟೋಳಿ ಗ್ರಾಮಕ್ಕೆ ೧೬.೫ ಲಕ್ಷ ಹಾಗೂ ಹೆಗ್ಗಳ ರಸ್ತೆ ಮತ್ತು ಮಾಕುಟ್ಟ ಕಾಲೋನಿ ರಸ್ತೆ ೧೬.೫ ಲಕ್ಷ ಅದರಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ಮತ್ತು ಪ.ಜಾತಿ ಪಂಗಡಗಳಿಗೆ ಮಿಸಲು ಹಾಗೂ ಸೌಲಭ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಮಳೆಹಾನಿ ೨೦೨೦-೨೧ನೇ ಸಾಲಿನಿಂದ ೨೦೨೪-೨೫ ನೇ ಸಾಲಿನವರೆಗೆ ಅನುಷ್ಠಾನಗೊಳಿಸಿರುವ ಬೇಟೋಳಿ ಪಂಚಾಯಿತಿಗೆ ರೂ, ೧೮ ಲಕ್ಷದ ೭೩ ಸಾವಿರ ಅನುದಾನ ಕೇಂದ್ರ ಸರಕಾರದ ಎನ್.ಡಿ.ಆರ್. ಎಫ್. ಮಾರ್ಗಸೂಚಿಯಂತೆ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದಿಂದ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ರೂ. ೧೮ ಲಕ್ಷದ ೭೩ ಸಾವಿರ ಅನುದಾನದಲ್ಲಿ ಪಂಚಾಯಿತಿ ವ್ಯಾಪ್ತಿಯ ರಾಮನಗರದಿಂದ ಗುಂಡಿಗೆರೆ ಮಸೀದಿ ರಸ್ತೆ, ಕೊಡಲ್ಲೂರು ದೇವಸ್ಥಾನ ಬಳಿ ರಸ್ತೆ, ಚಿಟ್ಟಡೆ ಮುಖ್ಯ ರಸ್ತೆಯಿಂದ ಸರು ಅವರ ಮನೆ ಬಳಿ ರಸ್ತೆ, ಪಟ್ಟಡ ವಿಶು ಮನೆ ಬಳಿ ಸಾರ್ವಜನಿಕ ರಸ್ತೆ, ಶ್ರೀ ಭದ್ರಕಾಳಿ ದೇವಸ್ಥಾನ ರಸ್ತೆ, ನಿರ್ಮಲಗಿರಿ ಪೂವಯ್ಯ-ಕುಮಾರಿ ಮನೆ ಪಕ್ಕದ ರಸ್ತೆ, ಪಟ್ಟಡ ಬೇಬಿ ಮನೆ ಬಳಿಯ ರಸ್ತೆ, ಹೆಗ್ಗಳ ಬೂದಿಮಾಳ ಗೊಲ್ಡನ್ ರಾಕ್ನಿಂದ ಸೋಮಪ್ಪ ಪೂಜಾರಿ ಮನೆ ಬಳಿ ರಸೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿದೆ ಎಂದು ಬೋಪಣ್ಣ ಹೇಳಿದರು.
ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ ಸಂದರ್ಭ ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುದೀಶ್, ಯಶೋದ, ಲಕ್ಷಿö್ಮ, ಗೀತಾ, ಎಂ.ಎA. ರಂಜಿತ್ ಹಾಗೂ ಸ್ಥಳಿಯ ನಿವಾಸಿಗಳು ಉಪಸ್ಥಿತರಿದ್ದರು.