ಸಿದ್ದಾಪುರ, ಜ. ೩೧: ಕಾರ್ಮಿಕನನ್ನು ಕೊಂದು ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.
ಬಾಡಗ ಬಾಣಂಗಾಲ ಗ್ರಾಮದ ಮಠ ಎಂಬಲ್ಲಿನ ಕೌರಿಬೆಟ್ಟ ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಕಾರ್ಮಿಕ ಅಬ್ದುಲ್ ಲತೀಫ್ ಮೇಲೆ ಒಂಟಿ ಸಲಗ ದಾಳಿ ನಡೆಸಿ ಕೊಂದು ಹಾಕಿತ್ತು. ಈ ಹಿನ್ನೆಲೆ ಕಳೆದ ಮೂರು ದಿನಗಳಿಂದ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಶನಿವಾರ ಮುಂಜಾನೆ ಮಾರ್ಗೊಲ್ಲಿ ಗ್ರೀನ್ ಕ್ರಿಸ್ಟಲ್ ಎಸ್ಟೇಟ್ನಲ್ಲಿ ಒಂಟಿ ಸಲಗ ಕಂಡುಬAದಿದ್ದು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಪಟಾಕಿ ಸಿಡಿಸಿ, ಮೂಡಬೈಲು ಮೂಲಕ ದೇವಮಚ್ಚಿ ಅರಣ್ಯಕ್ಕೆ ಅಟ್ಟಲಾಯಿತು. ಕಾರ್ಯಾಚರಣೆಯಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಪಿ.ಟಿ ಶಶಿ, ಸಂಜೀತ್ ಸೋಮಯ್ಯ, ಟಾಟಾ ಸಂಸ್ಥೆಯ ವನ್ಯಜೀವಿ ವಿಭಾಗದ ವ್ಯವಸ್ಥಾಪಕ ಕಾರ್ತಿಕ್ ಕೃಷ್ಣ, ಮಾರ್ಗೊಲ್ಲಿ ತೋಟದ ವ್ಯವಸ್ಥಾಪಕ ಅನುಷ್, ಆರ್.ಆರ್.ಟಿ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು.