ಕುಶಾಲನಗರ, ಜ. ೩೧: ಕುಶಾಲನಗರದಲ್ಲಿ ಹಲವರ ಮೇಲೆ ಬೀದಿ ನಾಯಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ನೆಹರು ಬಡವಾಣೆಯ ನೀರಾವರಿ ನಿಗಮ ಕಚೇರಿ ಬಳಿ ನಡೆದಿದೆ. ಬಾಲಕಿ ಮೃದುನಿ ಸೇರಿದಂತೆ ಮಂಜು, ಮಾಲೇಶ್, ಸಾವಿತ್ರಿ ಎಂಬವರಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.