ವಿರಾಜಪೇಟೆ, ಫೆ. ೧: ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು, ಸಂಸ್ಕöÈತಿ ಉಳಿಸುವುದು, ಯುವ ಜನರಿಗೆ ಧಾರ್ಮಿಕ ಮೌಲ್ಯ ಪರಿಚಯಿಸುವ ಉದ್ದೇಶದಿಂದ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ ಎಂದು ಮಂಗಳೂರು ವಿಭಾಗದ ಕುಟುಂಬ ಪ್ರಭೋದನ್ ವಿಭಾಗ ಸಂಯೋಜಕ ಮಂಜೇಶ್ವರದ ಜಿತೇಂದ್ರ ತಮ್ಮ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಆರ್ಜಿ, ಬೇಟೋಳಿ ಮಂಡಲದ ವತಿಯಿಂದ ಪೆರುಂಬಾಡಿಯ ವಾಲ್ಮೀಕಿ ಭವನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, . ಹಿಂದೂವಾಗಿ ಧರ್ಮದ ಉಳಿವಿಗೆ ನಾವೇನು ಮಾಡಬೇಕೆಂಬುದರ ಬಗ್ಗೆ ತಿಳಿಯುವ ಕಾರ್ಯಕ್ರಮ ಇದಾಗಿದೆ. ಯಾರನ್ನೋ ಇಲ್ಲಿಂದ ಓಡಿಸಿ ಹಿಂದೂ ರಾಷ್ಟçವನ್ನು ಕಟ್ಟುವುದು ನಮ್ಮ ಸಂಸ್ಕöÈತಿಯಲ್ಲ ಎಲ್ಲರನ್ನೂ ಒಟ್ಟು ಸೇರಿಸಿ ದೇಶವನ್ನು ವೈಭವದತ್ತ ಕೊಂಡೊಯ್ಯುವುದೇ ನಮ್ಮ ಸಂಸ್ಕöÈತಿಯಾಗಿದೆ ಎಂದು ಹೇಳಿದರು.
ಅನಾದಿಕಾಲದಿಂದಲೂ ಚಾಲ್ತಿಯಲ್ಲಿರುವ ಭಾರತದ ಸುಂದರವಾದ ಮೌಲ್ಯಯುತ ಕೌಟುಂಬಿಕ ವ್ಯವಸ್ಥೆಯನ್ನು ಪಾಶ್ಚಿಮಾತ್ಯ ದೇಶಗಳು ಹಾಡಿ ಹೊಗಳುತ್ತಿವೆ. ಈ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅವಿಭಕ್ತ ಕುಟುಂಬವೇ ಹಿಂದೂ ಧರ್ಮದ ಅತಿ ದೊಡ್ಡ ಶಕ್ತಿ. ಕುಟುಂಬದಲ್ಲಿ ಯಾರು ಬೇರ್ಪಟ್ಟು ಹೋಗದೆ ಒಟ್ಟಾಗಿ ಬದುಕುವ ಸಂಸ್ಕಾರ ನಮ್ಮ ಧರ್ಮದ ಮೂಲ. ಇತ್ತೀಚಿನ ನಗರ ವ್ಯಾಮೋಹ ಹಾಗೂ ಆಧುನಿಕ ಜೀವನ ಶೈಲಿಯಿಂದ ವಿಚ್ಛೇದನ ಹೆಚ್ಚಾಗುತ್ತಿದೆ. ಇದು ಹಿಂದೂ ಧರ್ಮ ಹಾಗೂ ಸಮಾಜಕ್ಕೆ ಮಾರಕವಾಗುವ ಅಪಾಯವಿದೆ. ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹಾಗೆಯೇ ಭವ್ಯ ಭಾರತ ನಿರ್ಮಾಣದತ್ತ ಎಲ್ಲರೂ ಸಂಘಟಿತರಾಗಬೇಕೆAದು ಕರೆ ನೀಡಿದರು.
ಹಿಂದೂ ಸಂಗಮ ಕಾರ್ಯಕ್ರಮದ ಸಂಚಾಲಕÀ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಸನಾತನ ಧರ್ಮದ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಹಿಂದೆಯೂ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಆದರೆ ವೈವಿಧ್ಯಮಯವಾದ ಭಾರತದ ಸಂಸ್ಕöÈತಿಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಯುವಪೀಳಿಗೆ ಮೇಲಿದೆ ಎಂದರು.
ಮಾಜಿ ಸೈನಿಕ ಭವಾನಿ ಶಂಕರ್ ಮಾತನಾಡಿ, ಹಿಂದೂ ಸಂಗಮದಿAದಾಗಿ ಹಿಂದೂಗಳ ಮಧ್ಯೆ ಹೃದಯಗಳ ಬಂಧನವಾಗಬೇಕು. ಸಂಸ್ಕöÈತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಇಂದಿನ ಪೀಳಿಗೆಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಜೀವನ ಪದ್ದತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕöÈತಿಯನ್ನು ಮರೆಯುತ್ತಿರುವುದು ದುರಂತ ಎಂದು ವಿಷಾದಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ರತ್ತು ಕಾವೇರಮ್ಮ ಮಾತನಾಡಿ, ಭಾರತೀಯ ಸಂಸ್ಕöÈತಿ ಮೇಲೆ ಪಾಶ್ಚಾತ್ಯ ಸಂಸ್ಕöÈತಿ ಪ್ರಭಾವ ಬೀರುತ್ತಿದೆ. ಭಾರತೀಯ ಸಂಸ್ಕöÈತಿಯನ್ನು ಉಳಿಸಲು ಹಿಂದೂ ಸಂಗಮ ಅತೀ ಅಗತ್ಯ. ಒಳ್ಳೆಯ ಸಮಾಜದಿಂದ ಉತ್ತಮ ದೇಶದ ನಿರ್ಮಾಣವಾಗುತ್ತದೆ. ಹಿರಿಯರಿಗೆ ಗೌರವ, ಮಕ್ಕಳಿಗೆ ಸಂಸ್ಕಾರ ಜೀವನ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ನಿವೃತ್ತ ಪ್ರೊಫೆಸರ್ ಪಟ್ಟಡ ಪೂವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಪೀಳಿಗೆಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಜೀವನ ಪದ್ಧತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕöÈತಿಯನ್ನು ಮರೆಯುತ್ತಿರುವುದು ದುರಂತ. ಹಿಂದೂ ಸಮಾಜ ಎಂದಿಗೂ ದ್ವೇಷವನ್ನು ಸಾಧಿಸಿಲ್ಲ. ಸಮಾಜದಲ್ಲಿ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದೆ ಎಂದು ಹೇಳಿದರು.
ಹಿಂದೂ ಸಂಗಮದ ಅಂಗವಾಗಿ ಆರ್ಜಿ ಬೇಟೋಳಿ ಜಂಕ್ಷನ್ನಿAದ ಬೃಹತ್ ಶೋಭಾಯಾತ್ರೆ ನಡೆಯಿತು. ಚಂಡೆ, ಕುಣಿತ ಭಜನೆ ಮೆರವಣಿಗೆಗೆ ಮೆರುಗು ನೀಡಿತು. ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಪ್ರಜ್ವಲನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಸಂಚಾಲಕ ಜೀವನ್ ಇದ್ದರು.ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಬಿ.ಎಂ. ಗಣೇಶ್, ಪೆರುಂಬಾಡಿಯ ಎಂ. ಗಣೇಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರುಗಳು ಪಾಲ್ಗೊಂಡಿದ್ದರು.