ಶನಿವಾರಸಂತೆ, ಫೆ. ೧: ಪಟ್ಟಣದ ಬ್ರೆöÊಟ್ ಅಕಾಡೆಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಮಾರುಕಟ್ಟೆ ದಿನವನ್ನು ಆಯೋಜಿಸಲಾಗಿತ್ತು.
ವಿದ್ಯಾಸಂಸ್ಥೆಯ ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಮನೆಯ ಹಿತ್ತಲಿನಲ್ಲಿ ಬೆಳೆದ ಬಗೆಬಗೆಯ ಸೊಪ್ಪು- ತರಕಾರಿಗಳು, ಹಣ್ಣುಹಂಪಲುಗಳು, ಮನೆಯಲ್ಲೆ ಮಾಡಿದ ತಿಂಡಿ-ತಿನಸುಗಳನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು. ಪೋಷಕರು, ಶಿಕ್ಷಕರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು.
ಮಾರುಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೇಮಾ ಪರಮೇಶ್ ಮಾತನಾಡಿ, ಮಕ್ಕಳಲ್ಲಿ ಲೆಕ್ಕಾಚಾರ ಹಾಗೂ ವ್ಯವಹಾರ ಜ್ಞಾನದ ಅರಿವನ್ನು ಮೂಡಿಸಲು ಮಾರುಕಟ್ಟೆ ದಿನವನ್ನು ಆಯೋಜಿಸಲಾಗಿದೆ.ಜ್ಞಾನಾರ್ಜನೆಗೆ ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದರು.
ಪ್ರಾAಶುಪಾಲ ಹರೀಶ್ ಲಕ್ಷö್ಮಣ್ ಮಾತನಾಡಿ, ಮಕ್ಕಳಿಗೆ ಗಣಿತ ವಿಷಯದ ಜೊತೆಗೆ ಹಣದ ವಹಿವಾಟಿನ ಜ್ಞಾನವೂ ಅಗತ್ಯ ಎಂದರು. ವಿದ್ಯಾಸಂಸ್ಥೆ ಅಧ್ಯಕ್ಷ ಪರಮೇಶ್, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು