ನಾಪೋಕ್ಲು, ಫೆ. ೧: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಜಾಗ ಒತ್ತುವರಿಯಾಗಿರುವ ಬಗ್ಗೆ ಒತ್ತುವರಿಯಾಗಿರುವ ಜಾಗವನ್ನು ಉಳಿಸಿಕೊಳ್ಳುವ ಬಗ್ಗೆ ಭಾರತೀಯ ಜನತಾ ಪಕ್ಷವು ಹೋರಾಟ ಮಾಡುತ್ತಿದೆ ಹೊರತು ಶಾಸಕರ ತೇಜೋವಧೆ ಮಾಡುವ ಉದ್ದೇಶಕ್ಕಾಗಿ ಅಲ್ಲ ಎಂದು ಬಿಜೆಪಿ ಪಕ್ಷದ ಪರವಾಗಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಕ್ ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಗುರುವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೯೫೦ ರ ದಶಕದಲ್ಲಿ ಅಂದಿನ ಹಿರಿಯರ ಮತ್ತು ದಾನಿಗಳ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ಥಳವನ್ನು ದಾನ ನೀಡಿದ್ದು ಅಲ್ಲಿ ಹಲವಾರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದಿದ್ದಾರೆ. ೧೯೫೦ರ ದಶಕದಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು ಶಾಲೆಗಾಗಿ ಜಾಗ ಮಂಜೂರು ಮಾಡಿದ್ದು ಅಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಾಗೂ ಅಂಬೇಡ್ಕರ್ ವಸತಿ ಶಾಲೆಗಳು ತಲೆ ಎತ್ತಿವೆ. ೧೯೯೮ ರಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಸರ್ವೆ ನಡೆಸಿದ ಸಂದರ್ಭ ಕೆಲವು ಖಾಸಗಿ ವ್ಯಕ್ತಿಗಳು, ಕಬರ್ ಸ್ಥಾನಗಳು ಒತ್ತುವರಿ ಮಾಡಿಕೊಂಡಿದ್ದು ಕಂಡುಬAದಿದ್ದು, ಆ ಬಳಿಕ ನಿರಂತರವಾಗಿ ಒತ್ತುವರಿ ತೆರವುಗೊಳಿಸುವಂತೆ ಸಂಬAಧಪಟ್ಟವರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ರಾಜ್ಯ ಸರ್ಕಾರದ ಅನುದಾನದಲ್ಲಿ ನವೆಂಬರ್ ತಿಂಗಳಲ್ಲಿ ಶಾದಿ ಮಹಲ್ ಕಟ್ಟಡ ಕಾಮಗಾರಿ ಆರಂಭಗೊAಡಿದ್ದು ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರು. ಸದರಿ ಜಾಗವು ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ್ದಾಗಿದೆ ಎಂದು ಮೇಲುಸ್ತುವಾರಿ ಸಮಿತಿ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಯಾವ ಮನವಿಗಳಿಗೂ ಸ್ಪಂದನೆ ಲಭಿಸದೆ ಇದ್ದದರಿಂದ ಬಿಜೆಪಿಯು ಪತ್ರಿಕಾ ಹೇಳಿಕೆ ನೀಡಿ ಸಂಬAಧಿಸಿದವರ ಗಮನ ಸೆಳೆದಿದೆ. ಶಾದಿ ಮಹಲ್ ನಿರ್ಮಾಣಕ್ಕೆ ಸಂಬAಧಿಸಿದAತೆ ಗ್ರಾಮ ಪಂಚಾಯಿತಿಯಿAದಲೂ ಅನುಮತಿ ಪಡೆದಿರುವುದಿಲ್ಲ ಎಂದು ತಿಳಿಸಿದರು.
ಸ್ಥಳೀಯ ಕಾಂಗ್ರೆಸ್ ಪದಾಧಿಕಾರಿಗಳು ಕೆಲವರು ಪತ್ರಿಕಾ ಹೇಳಿಕೆ ನೀಡಿ ಶಾಸಕರ ತೇಜೋವಧೆ ಆಗುತ್ತಿದೆ. ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಶಾಲಾ ಸಮಿತಿ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪುರಸ್ಕರಿಸದೆ ಇರುವುದರಿಂದ ಸರ್ವೆಯಲ್ಲಿ ಒತ್ತುವರಿ ಆಗಿರುವ ಬಗ್ಗೆ ಖಚಿತ ಮಾಹಿತಿ ಇರುವುದರಿಂದಲೇ ನಾವು ಹೋರಾಟ ಮಾಡುತ್ತಿದ್ದೇವೆ. ನೀಡಿದ ಮನವಿಗೆ ಬೆಲೆ ನೀಡದ ಕಾರಣ, ಶಾಲೆಯ ಒತ್ತುವರಿ ಜಾಗವನ್ನು ಶಾಲೆಗೆ ಉಳಿಸಿಕೊಳ್ಳುವ ಬಗ್ಗೆ ಹೋರಾಟ ನಡೆಸುತ್ತಿದ್ದೇವೆ ಎಂದರು.
ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಮಾತನಾಡಿ ಈ ಶಾಲೆಗೆ ಐದು ಕುಟುಂಬಗಳು ಸೇರಿ ಒಟ್ಟು ಸುಮಾರು ಐವತ್ತಾರು ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಸರಕಾರದಿಂದ ೨೨ ಎಕರೆ ಜಾಗ ಅನುದಾನ ದೊರೆತಿದೆ, ಈ ಜಾಗದಲ್ಲಿ ಒತ್ತುವರಿ ಆಗುತ್ತಿದೆ ಎನ್ನಲಾಗುತ್ತಿದ್ದು ಈ ಅವಧಿಯಲ್ಲಿ ಸಂಪೂರ್ಣ ಸರ್ವೆ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಡುವಂತಾಗಬೇಕೆAದು ನಮ್ಮ ಆಶಯವಾಗಿದೆ ಹೊರತು ಇದರಲ್ಲಿ ರಾಜಕೀಯವಾಗಲಿ, ತೇಜೋವಧೆಯಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಾಚಾಳಿಯಂಡ ಜಗದೀಶ್, ಓಬಿಸಿ ಹಿಂದುಳಿದ ಮೋರ್ಚಾ ತಾಲೂಕು ಅಧ್ಯಕ್ಷ ಬಿ.ಎಂ. ಪ್ರತೀಪ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಪಾಡಿಯಮ್ಮಂಡ ಮನು ಮಹೇಶ್, ಬಿಜೆಪಿ ಪ್ರಮುಖರಾದ ಕೇಟೋಳಿರ ಹರೀಶ್ ಪೂವಯ್ಯ, ಕುಂಡಿಯೋಳAಡ ವಿಶು ಪೂವಯ್ಯ, ಕನ್ನಂಬಿರ ಸುಧಿ ತಿಮ್ಮಯ್ಯ, ಕಂಗAಡ ಜಾಲಿ ಪೂವಪ್ಪ, ಆರೆಯಡ ನಂದ ನಂಜಪ್ಪ, ಕುಂಬಾರರ ಅಶೋಕ್, ಕುಂಡ್ಯೋಳAಡ ಜತ್ತಿ ಉಪಸ್ಥಿತರಿದ್ದರು.